ಮುಂಬೈ(ಜ.16): ಅಮೆರಿಕ-ಚೀನಾ ನಡುವಿನ ವಾಣಿಜ್ಯ ಸಮರದಿಂದ ಭಾರತಕ್ಕೇನು ಆತಂಕ ಎಂದು ಕೇಳುತ್ತಿದ್ದವರ ಸಂಖ್ಯೆಗೇನೂ ಕಡಿಮೆ ಇಲ್ಲ. ಅಂತಾರಾಷ್ಟ್ರೀಯ ವಿದ್ಯಮಾನಗಳು ದೇಶೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಅಮೆರಿಕ-ಚೀನಾ ವ್ಯಾಪಾರ ಒಪ್ಪಂದ ಜ್ವಲಂತ ಸಾಕ್ಷಿ.

ಅತ್ತ ಅಮೆರಿಕ-ಚೀನಾ ನಡುವೆ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೇ, ಇತ್ತ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಭಾರೀ ಏರಿಕೆ ಕಂಡುಬಂದಿದೆ. 

41,020 ಅಂಕಗಳಲ್ಲಿ ಮುಕ್ತಾಯ: ಸೆನ್ಸೆಕ್ಸ್‌ ಹೊಸ ದಾಖಲೆ ನಿರ್ಮಾಣ

ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದರ 42 ಸಾವಿರಕ್ಕೆ ಏರಿಕೆಯಾಗಿದ್ದು ನಿಫ್ಟಿಯಲ್ಲಿ ಸಹ ಭಾರೀ ಏರಿಕೆ ಕಂಡುಬಂದಿದೆ. ಇದು ಅಮೆರಿಕ ಮತ್ತು ಚೀನಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಎಂದು ತಜ್ಞರು ಅಂದಾಜಿಸಿದ್ದಾರೆ. 

ವಹಿವಾಟು ಆರಂಭದಲ್ಲಿ 43 ಸಾವಿರಕ್ಕೆ ಏರಿಕೆ ಕಂಡ ಮುಂಬೈ ಷೇರುಪೇಟೆ ಸೂಚ್ಯಂಕ, ಒಟ್ಟು 67 ಅಂಕ ಏರಿಕೆ ಕಂಡಿದ್ದು, 41, 939 ಪಾಯಿಂಟ್’ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ನಿಫ್ಟಿ ಕೂಡ 12, 378ರಷ್ಟು ಏರಿಕೆ ಕಂಡುಬಂದು 11 ಅಂಕ ಹೆಚ್ಚಳವಾಗಿ ಉತ್ತಮ ವಹಿವಾಟು ನಡೆಸುತ್ತಿದೆ.

ಯುದ್ಧ ಪರಿಣಾಮ ಶುರು: ಕಚ್ಚಾತೈಲ ಬೆಲೆ ಗಗನಕ್ಕೆ!

ಇಂದಿನ ಷೇರುಪೇಟೆ ವಹಿವಾಟಿನಲ್ಲಿ ಸನ್ ಫಾರ್ಮದ ಷೇರುಗಳು ಅತಿ ಹೆಚ್ಚಿನ ಬೆಲೆಗೆ ಅಂದರೆ ಶೇ.1.30ಕ್ಕೆ ಮಾರಾಟವಾಗಿದೆ. ನೆಸ್ಲೆ ಇಂಡಿಯಾ, ಕೊಟಕ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಆಟೋ ಮತ್ತು ಭಾರ್ತಿ ಏರ್ಟೆಲ್ ಷೇರುಗಳು ಕೂಡ ಉತ್ತಮ ವಹಿವಾಟು ನಡೆಸುತ್ತಿವೆ. 

ಆದರೆ ಟಾಟಾ ಸ್ಟೀಲ್, ಟೖಟನ್, ಟೆಕ್ ಮಹೀಂದ್ರಾ, ಇಂಡಸ್ ಬ್ಯಾಂಕ್ ಹಾಗೂ ಏಶಿಯನ್ ಪೇಂಟ್ಸ್ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.