ಸತತ 3ನೇ ದಿನವೂ ಸೆನ್ಸೆಕ್ಸ್ ಏರಿಕೆ: ದಾಖಲೆಯ ಸೂಚ್ಯಂಕ!

Sensex ends at record high for 3rd day on fund inflows
Highlights

ಸೆನ್ಸೆಕ್ಸ್‌ ಸೂಚ್ಯಂಕ ಸಾರ್ವಕಾಲಿಕ ದಾಖಲೆ

36,858.23 ಅಂಕ ತಲುಪಿದ ಸೂಚ್ಯಂಕ

ಮೆಟಲ್‌, ಎನರ್ಜಿ ಮತ್ತು ಬ್ಯಾಂಕಿಂಗ್‌ ಕ್ಷೇತ್ರ

ಇಳಿಕೆಯತ್ತ ರಾಷ್ಟ್ರೀಯ ಷೇರು ಮಾರುಕಟ್ಟೆ

ನಿಫ್ಟಿ ಸೂಚ್ಯಂಕ 2.30 ಅಂಕಗಳ ನಷ್ಟದಲ್ಲಿ

ಮುಂಬೈ(ಜು.25): ಷೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಬುಧವಾರದ ವಹಿವಾಟನ್ನು 36,858.23 ಅಂಕಗಳ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪುವ ಮೂಲಕ ಕೊನೆಗೊಳಿಸಿತು.

ದೇಶೀಯ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮೆಟಲ್‌, ಎನರ್ಜಿ ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ಷೇರುಗಳನ್ನು ಹೆಚ್ಚು ಖರೀದಿಸಿದ ಕಾರಣ ಷೇರು ಪೇಟೆ 33.13 ಅಂಕಗಳ ಮುನ್ನಡೆಯನ್ನು ಸಾಧಿಸಿದೆ.

ಇಂದಿನ ವಹಿವಾಟಿನ ನಡುವೆ ಸೆನ್ಸೆಕ್ಸ್‌ ಒಮ್ಮೆ 36,947.18 ಅಂಕಗಳ ದಾಖಲೆಯ ಎತ್ತರವನ್ನು ತಲುಪಿ, ನಿನ್ನೆಯ 36,902.06 ಅಂಕಗಳ ದಾಖಲೆ ಎತ್ತರದ ಗೆರೆಯನ್ನು ದಾಟುವ ಸಾಧನೆ ಮಾಡಿತು. ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 473.87 ಅಂಕಗಳನ್ನು ಸಂಪಾದಿಸಿದೆ. 

ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ತನ್ನ ದಾಖಲೆಯ ಎತ್ತರದ ಮಟ್ಟದಿಂದ ಜಾರಿ 2.30 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ದಿನದ ವಹಿವಾಟನ್ನು 11,132.00 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ವಿದೇಶಿ ಹೂಡಿಕೆದಾರರು ನಿನ್ನೆ 104.34 ಕೋಟಿ ರೂ. ಷೇರನ್ನು ಖರೀದಿಸಿದ್ದರು. ದೇಶೀಯ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಗಳು 513.78 ಕೋಟಿ ರೂ. ಷೇರುಗಳನ್ನು ಖರೀದಿಸಿದ್ದವು.

loader