ಮೋದಿ ‘ಫ್ರೀಡಂ ಸ್ಪೀಚ್ ಎಫೆಕ್ಟ್: ಸೆನ್ಸೆಕ್ಸ್ ಪರ್ಫೆಕ್ಟ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Aug 2018, 1:32 PM IST
Sensex Above 38,200, Nifty Hits 11,550 For The First Time Ever
Highlights

ಸಾರ್ವಕಾಲಿಕ ದಾಖಲೆಯತ್ತ ಸೆನ್ಸೆಕ್ಸ್! 250 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್! ನಿಫ್ಟಿ ಗ್ರಾಫ್‌ನಲ್ಲೂ ದಾಖಲೆ ಏರಿಕೆ! ರಾಷ್ಟ್ರೀಯ ಷೇರು ಸೂಚ್ಯಂಕ 0.40 % ಏರಿಕೆ  

ಮುಂಬೈ(ಆ.20): ಎರಡು ದಿನಗಳ ರಜೆ ಬಳಿಕ ಭಾರತೀಯ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದು, ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆಯ ಅಂಶಗಳ ಏರಿಕೆ ಕಂಡಿದೆ.

ಈ ಮೂಲಕ ಸೆನ್ಸೆಕ್ಸ್ ನೂತನ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಬಿಎಸ್ ಇ ಸೆನ್ಸೆಕ್ಸ್ ಇಂದು ಬೆಳಗ್ಗೆ 250 ಅಂಕಗಳ ಏರಿಕೆ ಕಾಣುವ ಮೂಲಕ ಇದೇ ಮೊದಲ ಬಾರಿಗೆ 38,200ರ ಗಡಿ ದಾಟಿದೆ. ಎನ್ ಎಸ್ ಇ ನಿಫ್ಟಿ ಕೂಡ ಇದೇ ಮೊದಲ ಬಾರಿಗೆ 11, 500 ಅಂಕಗಳಿಗೇರಿದೆ. ಸೆನ್ಸೆಕ್ಸ್ 263.03 ಅಂಕಗಳು (0.69 %) ಏರಿಕೆಯಾಗಿ 38,210.94 ಅಂಕಗಳಿಗೆ ತಲುಪಿದ್ದು ದಾಖಲೆಯಾಗಿದೆ. 

ಈ ಹಿಂದೆ ಆಗಸ್ಟ್ 9 ರಂದು ಸೆನ್ಸೆಕ್ಸ್ 38,076.23 ಅಂಕ ತಲುಪಿದ್ದು ದಾಖಲೆಯಾಗಿತ್ತು. ಕಳೆದ ಶುಕ್ರವಾರ ಸೆನ್ಸೆಕ್ಸ್ ನಲ್ಲಿ 284.32 ಅಂಕಗಳು ಏರಿಕೆಯಾಗಿದ್ದವು. 

ಇನ್ನು ರಾಷ್ಟ್ರೀಯ  ಷೇರು ಸೂಚ್ಯಂಕ ನಿಫ್ಟಿ ಕೂಡ ಏರಿಕೆ ಕಂಡಿದ್ದು, ಇಂದು 46.50 ಅಂಕ ಅಂದರೆ 0.40 % ಏರಿಕೆಯಾಗುವ ಮೂಲಕ 11,517.25 ಅಂಕಕ್ಕೆ ತಲುಪಿದೆ. 

ಇಂದಿನ ವಹಿವಾಟಿನಲ್ಲಿ ಬಂಡವಾಳ ಸರಕುಗಳು, ಲೋಹಗಳು, ಸಿರಾಸ್ಥಿ ಹಾಗೂ ಬ್ಯಾಂಕಿಂಗ್ ವಲಯಗಳ  ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಕೋಲ್ ಇಂಡಿಯಾ, ಲಾರ್ಸನ್ ಅಂಡ್ ಟರ್ಬೋ. ಒಎನ್ ಜಿಸಿ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

loader