ಶ್ರೀಮಂತರಾದ್ರೂ ಬೇಕಾಬಿಟ್ಟಿ ಖರ್ಚು ಮಾಡೋಲ್ಲ, ಇವನ್ನು ಮಾಡ್ಬೇಡಿ ಅಂತಾರೆ!
ಹಣ ಗಳಿಸೋ ಜೊತೆಗೆ ಉಳಿಸೋ ಜಾಣ್ಮೆ ಪ್ರತಿಯೊಬ್ಬರಿಗೂ ಇರಬೇಕು. ಕಷ್ಟಪಟ್ಟು ದುಡಿದ ಹಣವನ್ನು ನೀರಿನಂತೆ ಖರ್ಚು ಮಾಡಿದ್ರೆ ಲಾಭವೇನಿಲ್ಲ. ನೀವೂ ಕೋಟ್ಯಾಧಿಪತಿಯಾಗ್ಬೇಕೆಂದ್ರೆ ಈ ರೂಲ್ಸ್ ಫಾಲೋ ಮಾಡಿ.
ಲಾಟರಿ ಹೊಡೆದ್ರೆ ಅಥವಾ ಪಿತ್ರಾರ್ಜಿತ ಆಸ್ತಿ ಕೈಗೆ ಸಿಕ್ಕಿದ್ರೆ ಅದನ್ನು ಹೇಗೆ ಬಳಸಿಕೊಳ್ಬೇಕು ಎಂಬುದು ಜನರಿಗೆ ತಿಳಿದಿರೋದಿಲ್ಲ. ಎಲ್ಲಿ ಹೂಡಿಕೆ ಮಾಡ್ಬೇಕು ಅನ್ನೋದಿರಲಿ ಹೇಗೆ ಖರ್ಚು ಮಾಡ್ಬೇಕು ಎನ್ನುವುದೂ ಅವರಿಗೆ ಅರ್ಥವಾಗೋದಿಲ್ಲ. ಇಷ್ಟೊಂದು ಹಣ ಕೈಗೆ ಬರ್ತಿದ್ದಂತೆ ಮಂಗನಿಗೆ ಬ್ರಾಂದಿ ಕುಡಿಸಿದ್ರೆ ಅದು ಹೇಗೆ ಆಡುತ್ತೋ ಅದೇ ರೀತಿ ಆಡೋಕೆ ಶುರು ಮಾಡ್ತಾರೆ. ಕಂಡ ಕಂಡಲ್ಲಿ ಹಣ ಹಾಕಿ, ಬೇಕಾಬಿಟ್ಟಿ ಖರೀದಿ ಮಾಡಿ, ಕೈ ಖಾಲಿ ಮಾಡ್ಕೊಂಡು ಕುಳಿತುಕೊಳ್ತಾರೆ. ಅದೇ ಕಷ್ಟಪಟ್ಟು ದುಡಿದು ಹಣ ಗಳಿಸಿದ ವ್ಯಕ್ತಿದೆ ಅದ್ರ ಮಹತ್ವ ತಿಳಿದಿರುತ್ತದೆ. ಎಷ್ಟೇ ಹಣ ಕೈಗೆ ಬಂದ್ರೂ ಅದನ್ನು ಹೇಗೆ ಬಳಸಬೇಕು ಎನ್ನುವ ಜ್ಞಾನವಿರುತ್ತದೆ. ಬಂದಿರೋ ಹಣವನ್ನು ಡಬಲ್ ಮಾಡುವ ಕಲೆ ತಿಳಿದಿರುತ್ತದೆ. ಬೆವರು ಸುರಿಸಿ ಕೋಟ್ಯಾಧಿಪತಿಯಾದ ವ್ಯಕ್ತಿಯೊಬ್ಬ ಯಾವೆಲ್ಲ ವಿಷ್ಯಕ್ಕೆ ಅನವಶ್ಯಕ ಹಣ ಖರ್ಚು ಮಾಡ್ಬಾರದು ಎಂಬುದನ್ನು ಹೇಳಿದ್ದಾರೆ. ನೀವೂ ಕೋಟ್ಯಾಧಿಪತಿಯಾಗ್ಬೇಕು, ಹಣ ಪೋಲಾಗದಂತೆ ನೋಡಿಕೊಳ್ಬೇಕು ಅಂದ್ರೆ ಅವರ ಟ್ರಿಕ್ಸ್ ಫಾಲೋ ಮಾಡಿ.
ಸ್ಪ್ರೆಡ್ (Spread) ಗ್ರೇಟ್ ಐಡಿಯಾಸ್ ಎಂಬ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಬ್ರಿಯಾನ್ ಕ್ರೇನ್ (Brian Crane). ಇವರು ತಮ್ಮ ಶಕ್ತಿಯನ್ನು ನಂಬಿ ಕೆಲಸ ಮಾಡಿ, ಹಣ ಸಂಪಾದನೆ ಮಾಡಿದ ವ್ಯಕ್ತಿ. ಬ್ರಿಯಾನ್ ನಾಲ್ಕು ಇತರ ಬಹು-ಮಿಲಿಯನ್ ಕಂಪನಿಗಳನ್ನು ಪ್ರಾರಂಭಿಸಲು ನೆರವಾಗಿದ್ದಾರೆ. ಬ್ರಿಯಾನ್, ಹಣ (Money) ಗಳಿಸೋದು ಮಾತ್ರವಲ್ಲ ಅದನ್ನು ಹೇಗೆ ಖರ್ಚು ಮಾಡ್ಬೇಕು ಎಂಬುದು ಜನರಿಗೆ ತಿಳಿದಿರಬೇಕು ಎನ್ನುತ್ತಾರೆ. ಖರ್ಚು ಸರಿಯಾಗಿ ಮಾಡದೆ ಹೋದ್ರೆ ನಾವು ದುಡಿದು ಪ್ರಯೋಜನವಿಲ್ಲ ಎನ್ನುತ್ತಾರೆ ಬ್ರಿಯಾನ್.
ಕೋಟ್ಯಾಧಿಪತಿಯಾಗಿರುವ ಬ್ರಿಯಾನ್ ಲೈಫ್ ಸ್ಟೈಲ್ ನೋಡಿದ್ರೆ ಅವರು ಇಷ್ಟೊಂದು ಶ್ರೀಮಂತರು ಎನ್ನಲು ಸಾಧ್ಯವೇ ಇಲ್ಲ. ಸಮತೋಲನವಿಲ್ಲದೆ ವ್ಯರ್ಥ ಖರ್ಚು ನಮ್ಮನ್ನು ಬಡವರನ್ನಾಗಿ ಮಾಡುತ್ತದೆ ಎಂದು ನನ್ನ ಉದ್ಯಮಶೀಲತೆಯ ಪ್ರಯಾಣದ ಆರಂಭದಲ್ಲಿಯೇ ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಬ್ರಿಯಾನ್ ಕ್ರೇನ್ ಹೇಳಿದ್ದಾರೆ.
20ನೇ ದಶಕದ ಮೊದಲು ನಾನು ನನ್ನ ಕಂಪನಿ ಮಾರಾಟ ಮಾಡಿದಾಗ, ಹೂಡಿಕೆ ವಿಷ್ಯದಲ್ಲಿ ತಪ್ಪು ಮಾಡಿದ್ದೆ. ಆಗ ನಾನು ದಿವಾಳಿ ಹಂತಕ್ಕೆ ಬಂದು ನಿಂತಿದ್ದೆ. ಅಷ್ಟರಲ್ಲೇ ನನ್ನ ತಪ್ಪು ನನ್ನ ಅರಿವಿಗೆ ಬಂದಿದ್ದಲ್ಲದೆ ನಾನು ಹೇಗೆ ಎಲ್ಲವನ್ನೂ ನಿಭಾಯಿಸಬೇಕು ಎಂಬುದನ್ನು ಕಲಿತೆ ಎನ್ನುತ್ತಾರೆ ಬ್ರಿಯಾನ್.
ಇಬ್ಬಾಗವಾಗುತ್ತಿರುವ ಈ ಕಂಪನಿಯ ಜಾಹೀರಾತಿನಲ್ಲಿ ನಟಿಸಿದ್ದರು ರವೀಂದ್ರನಾಥ್ ಠಾಗೋರ್!
ಈ ಮೂರಕ್ಕೆ ಎಂದೂ ಹೆಚ್ಚು ಹಣ ಖರ್ಚು ಮಾಡ್ಬೇಡಿ : ಬ್ರಿಯಾನ್ ಕ್ರೇನ್ ಪ್ರಕಾರ, ಜನರು ಡಿಸೈನರ್ ಐಷಾರಾಮಿ ಬ್ರಾಂಡ್‌ಗಳು, ಐಷಾರಾಮಿ ಮನೆಗಳು, ಮನರಂಜನೆ ಮತ್ತು ವಿಪರೀತ ಸೌಕರ್ಯಗಳಿಗೆ ಹೆಚ್ಚು ಖರ್ಚು ಮಾಡ್ಬಾರದು ಎನ್ನುತ್ತಾರೆ. ಜನರ ಕೈಗೆ ಹಣ ಬರ್ತಿದ್ದಂತೆ ಮಾಡುವ ಮೊದಲ ಕೆಲಸಗಳು ಇವು. ಕೆಲವರು ಐಷಾರಾಮಿ ಬ್ರಾಂಡ್ ಬಟ್ಟೆ ಖರೀದಿ ಮಾಡಿದ್ರೆ ಮತ್ತೆ ಕೆಲವರು ಮನೆ, ಕಾರು ಅಂತಾ ಐಷಾರಾಮಿ ವಸ್ತುಗಳ ಖರೀದಿಗೆ ಮುಂದಾಗ್ತಾರೆ. ಇದಲ್ಲದೆ ತಾವು ಶ್ರೀಮಂತರು ಎಂಬುದನ್ನು ತೋರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ.
ಮೊದಲು ಸಣ್ಣ ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡ್ತಿದ್ದ, ಚಿಕ್ಕ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡ್ತಿದ್ದವರಿಗೆ ಶ್ರೀಮಂತಿಕೆ ನಂತ್ರ ಅದ್ಯಾವುದೂ ಕಾಣೋದಿಲ್ಲ. ಪ್ರೆಸ್ಟೀಜ್ ಹೆಸರಿನಲ್ಲಿ ಹಣ ಹಾಳು ಮಾಡ್ತಾರೆ. ಬ್ರಿಯಾನ್ ಪ್ರಕಾರ, ದೊಡ್ಡ ರೆಸ್ಟೋರೆಂಟ್ ನಲ್ಲಿ ಆಹಾರ ಸೇವನೆ ಮಾಡೋದು, ಒಳ್ಳೆ ಬ್ರಾಂಡ್ ನ ಐಷಾರಾಮಿ ಡ್ರೆಸ್ ಧರಿಸಿ ಫೋಟೋ ಕ್ಲಿಕ್ ಮಾಡೋದು, ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತ ಎನ್ನುತ್ತಾರೆ. ಅದ್ರಿಂದ ಲಾಭವೇನೂ ಇಲ್ಲ. ವ್ಯರ್ಥವಾಗಿ ನಿಮ್ಮ ಹಣ ಖರ್ಚಾಗುತ್ತದೆ ಎನ್ನುತ್ತಾರೆ ಬ್ರಿಯಾನ್.