ಮುಂಬೈ(ಜ.02): ಸೆಕ್ಯೂರಿಟೀಸ್‌ ಆಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ(SEBI) ಶುಕ್ರವಾರ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಕ್ರಮವಾಗಿ 40 ಕೋಟಿ ರೂ. ಹಾಗೂ 15 ಕೋಟಿ ರೂ. ದಂಡ ವಿಧಿಸಿದೆ. ಹಿಂದಿನ ರಿಲಯನ್ಸ್ ಪಟ್ರೋಲಿಯಂ ಲಿಮಿಟೆಡ್‌ ಕಂಪನಿಯ ಷೇರುಗಳ ಬೆಲೆಯಲ್ಲಿ 2007ರಲ್ಲಿ ಕೃತಕವಾಗಿ ಬದಲಾವಣೆ ತಂದ ಆರೋಪಕ್ಕೆ ಸಂಬಂಧಿಸಿದಂತೆಈ ದಂಡ ವಿಧಿಸಿದೆ.

ಇದೇ ರೀತಿ ನವಿ ಮುಂಬಯಿ ಎಸ್‌ಇಝಡ್‌ ಪ್ರೈ.ಲಿ.ಗೆ 20 ಕೋಟಿ ರೂ. ಹಾಗೂ ಮುಂಬಯಿ ಎಸ್‌ಇಝಡ್‌ ಲಿ. 10 ಕೋಟಿ ರೂ. ದಂಡ ವಿಧಿಸಲಾಗಿದೆ.ಷೇರುಗಳ ಪ್ರಮಾಣ ಮತ್ತು ಬೆಲೆಯಲ್ಲಿ ನಡೆಸುವ ಯಾವುದೇ ರೀತಿಯ ಬದಲಾವಣೆಯು ಮಾರುಕಟ್ಟೆಯಲ್ಲಿರುವ ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸುತ್ತದೆ’ ಎಂದು ಸೆಬಿ ಅಡ್ಜಡಿಕೇಟಿಂಗ್‌ ಆಫೀಸರ್‌ ಬಿಜೆ ದಿಲೀಪ್‌ ತಮ್ಮ 95 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.

ಇದರ ಹಿಂದೆ ಇರುವುದು ಆರ್‌ಐಎಲ್‌ ಎಂಬುದು ಸಾಮಾನ್ಯ ಹೂಡಿಕೆದಾರರಿಗೆ ತಿಳಿದಿರುವುದಿಲ್ಲ. ಈ ರೀತಿಯ ವಂಚನೆಯು ಆರ್‌ಪಿಎಲ್‌ ಷೇರುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೂಡಿಕೆದಾರರ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.