ನವದೆಹಲಿ(ಮಾ.15): ತನ್ನ ಗ್ರಾಹಕರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಹೊಸ ಜಾಲದ ಬಗ್ಗೆ ಎಚ್ಚರದಿಂದ ಇರುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೇಳಿದೆ. 

ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ನವೀಕರಣಗೊಳಿಸುವುದಾಗಿ ಕರೆ ಮಾಡಿ, ಸಾಮಾಜಿಕ ಜಾಲತಾಣದ ಮೂಲಕ ಒ.ಟಿ.ಪಿ. ಕಳುಹಿಸಿ ಖಾತೆಯಲ್ಲಿನ ಹಣ ದೋಚಲಾಗುತ್ತಿದೆ ಎಂದು ಎಸ್‌ಬಿಐ ಎಚ್ಚರಿಕೆ ನೀಡಿದೆ.

ಅನುಮಾನಾಸ್ಪದ ಕರೆ ಅಥವಾ ಸಂದೇಶಗಳು ಬಂದಲ್ಲಿ ತಕ್ಷಣ 1 800 111109 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಬ್ಯಾಂಕಿನ ಗಮನಕ್ಕೆ ತರುವಂತೆ ಎಸ್‌ಬಿಐ ಮನವಿ ಮಾಡಿದೆ.