Asianet Suvarna News Asianet Suvarna News

Defence Salary Package Scheme ಭಾರತೀಯ ಸೇನಾ ಯೋಧರು, ಕುಟುಂಬದ ರಕ್ಷಣಾ ಪ್ಯಾಕೇಜ್ ನವೀಕರಿಸಿದ SBI!

  • ಭಾರತೀಯ ಸೇನಾ ಸಿಬ್ಬಂದಿ, ನಿವೃತ್ತರಿಗೆ ಹಾಗೂ ಕುಟುಂಬಕ್ಕೆ ಸೌಲಭ್ಯ
  • ರಕ್ಷಣಾ ವೇತನ ಪ್ಯಾಕೇಜ್ ಅಡಿಯಲ್ಲಿ ಒಪ್ಪಂದ ನವೀಕರಣ
  • ವಾಯು ಅಪಘಾತ ಪರಿಹಾರ ಸೇರಿದಂತೆ ಹಲವು ಯೋಜನೆ
SBI renew MoU with Indian Army offer benefits to serving retired army personnel and their families ckm
Author
Bengaluru, First Published Dec 19, 2021, 1:12 AM IST

ನವದೆಹಲಿ(ಡಿ.19): ದೇಶದ ಅತಿದೊಡ್ಡ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತೀಯ ಸೇನೆಯೊಂದಿಗೆ(Indian Army)  ಒಪ್ಪಂದವನ್ನು (MoU) ನವೀಕರಿಸಿದೆ. ಸೇವೆಯಲ್ಲಿರುವ ಮತ್ತು ನಿವೃತ್ತ ಸೇನಾ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ(Family) ರಕ್ಷಣಾ ವೇತನ ಪ್ಯಾಕೇಜ್ (DSP) ಯೋಜನೆಯ ಮೂಲಕ ವಿಶೇಷವಾಗಿ ರೂಪಿಸಲಾಗಿರುವ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳ ಕೊಡುಗೆ ನೀಡಲು ಈ ಒಪ್ಪಂದ ನವೀಕರಣವು ನೆರವಾಗಲಿದೆ. AG ಲೆಫ್ಟನಂಟ್ ಜನರಲ್ ಹರ್ಷ ಗುಪ್ತಾ, SBI ವ್ಯವಸ್ಥಾಪಕ ನಿರ್ದೇಶಕ ಸಿ. ಎಸ್. ಶೆಟ್ಟಿ  ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದ ಅಡಿಯಲ್ಲಿ, SBI ಪೂರಕ ವೈಯಕ್ತಿಕ ಮತ್ತು ವೈಮಾನಿಕ ಅಪಘಾತ ವಿಮೆ (ಮರಣ) ಪರಿಹಾರ, ಕರ್ತವ್ಯ ನಿರ್ವಹಿಸುವಾಗ ಸಾವು ಸಂಭವಿಸಿದರೆ ಹೆಚ್ಚುವರಿ ಪರಿಹಾರ, ಶಾಶ್ವತ ಒಟ್ಟು ಅಂಗವೈಕಲ್ಯ / ಭಾಗಶಃ ಅಂಗವೈಕಲ್ಯ ಪರಿಹಾರಗಳ ಮೂಲಕ ವ್ಯಾಪಕ ಪ್ರಯೋಜನಗಳನ್ನು ನೀಡುತ್ತದೆ. ಇದು ಮೃತ ಸೇನಾ ಸಿಬ್ಬಂದಿಯ ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಮದುವೆಗೂ ನೆರವು ನೀಡಲಿದೆ. ವಯಸ್ಸನ್ನು ಪರಿಗಣಿಸದೆ, ಸೇನಾ ಸಿಬ್ಬಂದಿಯು  ಪೂರಕ ವೈಯಕ್ತಿಕ ಅಪಘಾತ (ಮರಣ) ವಿಮೆಗೆ ಅರ್ಹರಾಗುತ್ತಾರೆ. ಕುಟುಂಬ ಪಿಂಚಣಿದಾರರು ಸಹ ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

Helicopter Accidents : ಕಳೆದ 5 ವರ್ಷಗಳಲ್ಲಿ 15 ಸೇನಾ ದುರಂತ!

ಒಪ್ಪಂದದ ಅನ್ವಯ, ರಕ್ಷಣಾ ಸಿಬ್ಬಂದಿ ಸಲ್ಲಿಸಿದ ಸೇವೆಗಳು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಗುರುತಿಸಿ, ಬ್ಯಾಂಕ್ ಅನೇಕ ಪೂರಕ ಪ್ರಯೋಜನಗಳನ್ನು ಒದಗಿಸುತ್ತದೆ. ಸೇವಾ ಶುಲ್ಕಗಳ ಮನ್ನಾ ಸೇರಿದಂತೆ ಇತರ ಪೂರಕ ಸೌಲಭ್ಯಗಳೊಂದಿಗೆ ಶೂನ್ಯ-ಸಮತೋಲನದ ಉಳಿತಾಯ ಬ್ಯಾಂಕ್ ಖಾತೆಗಳನ್ನು ಸಹ ನೀಡುತ್ತದೆ. ಗೃಹ, ಕಾರ್ ಖರೀದಿ, ಶಿಕ್ಷಣ ಸಾಲ ಮತ್ತು ಎಕ್ಸ್ಪ್ರೆಸ್ ಕ್ರೆಡಿಟ್ ಪರ್ಸನಲ್ ಲೋನ್ ಸೌಲಭ್ಯದಡಿ, ಸೇವೆ ಸಲ್ಲಿಸುತ್ತಿರುವ ಸೇನಾ ಸಿಬ್ಬಂದಿಗೆ ಆಕರ್ಷಕ ಬಡ್ಡಿದರಗಳು ಮತ್ತು ಸಂಸ್ಕರಣಾ ಶುಲ್ಕಗಳ ಮೇಲಿನ ರಿಯಾಯಿತಿಯನ್ನು ನೀಡಲಾಗುತ್ತದೆ.

ಭಾರತದ ಸೇನೆಯೊಂದಿಗೆ ಸಂಬಂಧ ಹೊಂದುವುದು ನಮಗೆ ಗೌರವದ ಮತ್ತು ಹೆಮ್ಮೆಯ ವಿಷಯವಾಗಿದೆ. ನಮ್ಮ ರಾಷ್ಟ್ರ ಮತ್ತು ನಾಗರಿಕರ ಸುರಕ್ಷತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಸೇನಾ ಸಿಬ್ಬಂದಿಯೊಂದಿಗೆ ನಮ್ಮ ಸೇವೆಗಳಲ್ಲಿ ಉತ್ತಮ ಮೌಲ್ಯವನ್ನು ಒದಗಿಸುವ ಬಗ್ಗೆ ನಾವು ಯಾವಾಗಲೂ ದೃಢ ವಿಶ್ವಾಸ ಇರಿಸಿದ್ದೇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೇನಾ ಸಿಬ್ಬಂದಿಗೆ ತನ್ನ ಡಿಫೆನ್ಸ್ ಸ್ಯಾಲರಿ ಪ್ಯಾಕೇಜ್ (ಆರ್ಮಿ) ಮೂಲಕ ಹಲವಾರು ವಿಶೇಷ ಪ್ರಯೋಜನಗಳನ್ನು ವಿನಮ್ರತೆಯಿಂದ ನೀಡಲಿದೆ. ಈ ಸೌಲಭ್ಯಗಳು ಸೇನಾ ಸಿಬ್ಬಂದಿಗೆ ಮತ್ತು ಅವರ ಕುಟುಂಬಗಳಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವುದನ್ನು ಖಚಿತಪಡಿಸುತ್ತವೆ ಎಂದು  SBI ಅಧ್ಯಕ್ಷ ದಿನೇಶ್ ಖರಾ  ಹೇಳಿದ್ದಾರೆ.

SBI PO Prelims Exam Result: ಎಸ್‌ಬಿಐ ನೇಮಕಾತಿಯ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟ

ಸೇವೆಯಲ್ಲಿ ಇರುವ ಸೇನಾ ಸಿಬ್ಬಂದಿ, ಪಿಂಚಣಿದಾರರು ಮತ್ತು ಅವರ ಕುಟುಂಬಗಳಿಗೆ ಸೇವೆ ಸಲ್ಲಿಸುವ ಅಗತ್ಯತೆಗಳಿಗೆ ಸರಿಹೊಂದುವಂತೆ ತಿಳಿವಳಿಕೆ ಒಪ್ಪಂದ (ಎಂಒಯು) ರೂಪಿಸಲಾಗಿದೆ. ರಕ್ಷಣಾ ಪಡೆಗಳಿಗೆ ಬ್ಯಾಂಕ್ನ ಬದ್ಧತೆಯ ಭಾಗವಾಗಿ, ರಕ್ಷಣಾ ವೇತನ ಪ್ಯಾಕೇಜ್ನ ಅಡಿಯಲ್ಲಿ ಒಳಗೊಳ್ಳುವ ಎಲ್ಲಾ ಸೇನಾ ಸಿಬ್ಬಂದಿಗೆ ನವೀಕೃತ ಒಪ್ಪಂದವು (ಎಂಒಯು) ಒಳಗೊಂಡಿರುವ ಎಲ್ಲ ಹೆಚ್ಚುವರಿ ಪ್ರಯೋಜನಗಳನ್ನು  SBI ಸ್ವಯಂಚಾಲಿತವಾಗಿ ವಿಸ್ತರಿಸಲಿದೆ.

• ಪೂರಕ ವೈಯಕ್ತಿಕ ಅಪಘಾತ ವಿಮೆ (ಮರಣ) ಪರಿಹಾರ, ವಾಯು ಅಪಘಾತ ವಿಮೆ (ಮರಣ) ಪರಿಹಾರ, ಶಾಶ್ವತ/ಭಾಗಶಃ ಅಂಗವೈಕಲ್ಯ ಪರಿಹಾರ 
• ರಕ್ಷಣಾ ಸಿಬ್ಬಂದಿಗೆ ರಕ್ಷಣಾ ವೇತನ ಪ್ಯಾಕೇಜ್ (ಡಿಎಸ್ಪಿ) ಅಡಿಯಲ್ಲಿ, ವೈಯಕ್ತಿಕ ಅಪಘಾತ ವಿಮೆ (ಮರಣ) ಪರಿಹಾರ ಮತ್ತು ಇತರ ಪ್ರಯೋಜನಗಳು
• ‘ಡಿಎಸ್ಪಿ’ ಅಡಿಯಲ್ಲಿ ವಿಧವೆಯರು ಮತ್ತು ‘ಎನ್ಒಕೆ’ ಅವರಿಗೆ ಸಹ ಕೆಲವು ಪ್ರಯೋಜನಗಳನ್ನು ಒಳಗೊಂಡಿದೆ
• ಸೇನಾ ಸಿಬ್ಬಂದಿಗೆ ಗೃಹ ಸಾಲ, ಕಾರು ಸಾಲ ಮತ್ತು ಎಕ್ಸ್ಪ್ರೆಸ್ ಕ್ರೆಡಿಟ್ ಪರ್ಸನಲ್ ಲೋನ್ ಮೇಲೆ ಆಕರ್ಷಕ ಬಡ್ಡಿ ದರಗಳು ಮತ್ತು ರಿಯಾಯಿತಿ ದರದ ಸಾಲ ಸಂಸ್ಕರಣಾ ಶುಲ್ಕ
• ಎಲ್ಲಾ ನಿಯೋಜಿತ ಅಧಿಕಾರಿಗಳಿಗೆ ಪ್ಲಾಟಿನಂ ಡೆಬಿಟ್ ಕಾರ್ಡ್

Follow Us:
Download App:
  • android
  • ios