* ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟ ಪ್ರಯತ್ನ* ಶ್ರೀನಗರದ ದಾಲ್ ಸರೋವರದಲ್ಲಿ ‘ತೇಲುವ ಎಟಿಎಂ’* ಶ್ರೀನಗರದ ಮೋಡಿಯನ್ನು ಇನ್ನೂ ಹೆಚ್ಚಿಸಲಿದೆ ಈ ವ್ಯವಸ್ಥೆ
ಶ್ರೀನಗರ(ಆ. 23): ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟಪ್ರಯತ್ನಕ್ಕೆ ಕೈ ಹಾಕಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶ್ರೀನಗರದ ದಾಲ್ ಸರೋವರದಲ್ಲಿ ‘ತೇಲುವ ಎಟಿಎಂ’ ಯಂತ್ರವನ್ನು ಸ್ಥಾಪಿಸಿದೆ.
ಈ ಎಟಿಎಂಅನ್ನು ಎಸ್‌ಬಿಐ ಮುಖ್ಯಸ್ಥ ದಿನೇಶ್ ಖರಾ ಅವರು ಆ.16ರಂದು ಉದ್ಘಾಟಿಸಿದರು. ಇದು ಶ್ರೀನಗರದ ಮೋಡಿಯನ್ನು ಇನ್ನೂ ಹೆಚ್ಚಿಸಲಿದೆ ಎಂದು ಎಸ್‌ಬಿಐ ತಿಳಿಸಿದೆ. ದಾಲ್ ಸರೋವರದಲ್ಲಿ ಈಗಾಗಲೇ ತೇಲುವ ತರಕಾರಿ ಮಾರುಕಟ್ಟೆ, ತೇಲುವ ಅಂಚೆ ಕಚೇರಿ ಕೂಡ ಇದೆ.
Scroll to load tweet…
ಎಸ್‌ಬಿಐ ಈ ಮೊದಲು 2004ರಲ್ಲಿ ಕೇರಳದಲ್ಲಿ ತೇಲುವ ಎಟಿಎಂಅನ್ನು ಮೊದಲ ಬಾರಿಗೆ ಸ್ಥಾಪಿಸಿತ್ತು.
