ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಎಸ್‌ಬಿಐ ಬಡ್ಡಿ ಮೊಬೈಲ್ ವ್ಯಾಲೆಟ್ ಸೇವೆಯು ನ. 30 ಕ್ಕೆ ಬಂದ್ ಆಗಲಿದೆ.

ಮುಂಬೈ (ಅ. 29): ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಎಸ್‌ಬಿಐ ಬಡ್ಡಿ ಮೊಬೈಲ್ ವ್ಯಾಲೆಟ್ ಸೇವೆಯು ನ.30 ಕ್ಕೆ ಬಂದ್ ಆಗಲಿದೆ.

ಇದರ ಬದಲಿಗೆ 2017 ರ ಕೊನೆ ಅವಧಿಯಲ್ಲಿ ಚಾಲ್ತಿಗೆ ಬಂದಿರುವ ಎಸ್‌ಬಿಐ ಯೋನೋ ಅನ್ನು ಮುಂದುವರಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ. ಯಾವುದೇ ಹಣ ಜಮಾವಣೆ ಆಗದ ಮೊಬೈಲ್ ವ್ಯಾಲೆಟ್‌ಗಳು ಈಗಾಗಲೇ ಮುಚ್ಚಲ್ಪಡುತ್ತಿವೆ. ಆದರೆ, ವ್ಯಾಲೆಟ್‌ನಲ್ಲಿನ ಬ್ಯಾಲೆನ್ಸ್ ಅನ್ನು ಹೇಗೆ ಮತ್ತು ಯಾವ ಬಂದ್ ಮಾಡಲಾಗುತ್ತದೆ ಎಂಬ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.