Asianet Suvarna News Asianet Suvarna News

ಎಸ್‌ಬಿಐ ಗ್ರಾಹಕರಿಗೆ ಶಾಕ್: ಖಾತೆ ಮಾಹಿತಿ ಸರ್ವರ್‌ಗೆ ಪಾಸ್‌ವರ್ಡ್ ಇರ್ಲೇ ಇಲ್ಲ!

ಲಕ್ಷಾಂತರ ಗ್ರಾಹಕರ ಬ್ಯಾಂಕ್ ಖಾತೆ ಅಪಾಯಕ್ಕೆ ದೂಡಿದ್ದ ಎಸ್‌ಬಿಐ| ಗ್ರಾಹಕರ ಮಾಹಿತಿ ಇರುವ ಸರ್ವರ್‌ಗೆ ಪಾಸ್‌ವರ್ಡ್‌ ಇರಲೇ ಇಲ್ಲ| ಎಸ್‌ಬಿಐ ಯಡವಟ್ಟು ಟೆಕ್ ಕ್ರೆಅಂಚ್ ಸಂಸ್ಥೆಯ ವರದಿಯಿಂದ ಬಹಿರಂಗ| ಎಸ್‌ಬಿಐ ಕ್ವಿಕ್ ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆಗಳ ಮಾಹಿತಿ

SBI left data of millions of customers unprotected
Author
Bengaluru, First Published Jan 31, 2019, 5:00 PM IST

ನವದೆಹಲಿ(ಜ.30): ಭಾರತದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಅಜಾಗರೂಕತೆಯಿಂದಾಗಿ ಲಕ್ಷಾಂತರ ಗ್ರಾಹಕರ ಮಾಹಿತಿಗೆ ಅಭದ್ರತೆ ಎದುರಾಗಿತ್ತು ಎನ್ನಲಾಗಿದೆ.

ಎಸ್‌ಬಿಐ ತನ್ನ ಗ್ರಾಹಕರ ಬ್ಯಾಂಕಿಂಗ್ ಮಾಹಿತಿಗಳಿರುವ ಸರ್ವರ್‌ಗೆ ಭದ್ರತೆ ಒದಗಿಸದೆ ಲಕ್ಷಗಟ್ಟಲೆ ಗ್ರಾಹಕರನ್ನು ಅಪಾಯಕ್ಕೊಡ್ಡಿತ್ತು ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಲೇ ಎಚ್ಚೆತ್ತುಕೊಂಡು ನಿರ್ದಿಷ್ಟ ಸರ್ವರ್‌ಗೆ ಭದ್ರತೆ ಒದಗಿಸಿದೆ.

ಟೆಕ್ ಕ್ರೆಅಂಚ್ ಸಂಸ್ಥೆಯ ವರದಿಯಂತೆ ಬ್ಯಾಂಕ್‌ನ ಅಸುರಕ್ಷಿತ ಸರ್ವರ್ ಮುಂಬೈ ಕೇಂದ್ರದಲ್ಲಿತ್ತು. ಎಸ್‌ಬಿಐ ಕ್ವಿಕ್ ಎಂಬ ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆಗಳ ಮಾಹಿತಿ ಅದರಲ್ಲಿತ್ತು. ಇದರ ಮೂಲಕ ಗ್ರಾಹಕರು ತಮ್ಮ ಖಾತೆಯ ವಿವರ, ಚೆಕ್ ಪುಸ್ತಕಕ್ಕೆ ಮನವಿ ಸೇರಿದಂತೆ ಹಲವು ಸೇವೆಗಳನ್ನು ಪಡೆಯುತ್ತಿದ್ದರು.

ಆದರೆ ಈ ಸರ್ವರ್‌ಗೆ ಯಾವುದೇ ಪಾಸ್‌ವರ್ಡ್ ರಕ್ಷಣೆ ಇರಲಿಲ್ಲ. ಹೀಗಾಗಿ ಲಕ್ಷ ಸಂಖ್ಯೆಯ ಗ್ರಾಹಕರ ಬ್ಯಾಂಕಿಂಗ್ ಮಾಹಿತಿ, ಮೊಬೈಲ್ ಸಂಖ್ಯೆ ಸೇರಿ ಇತ್ತೀಚಿನ ಅವರ ಬ್ಯಾಂಕಿಂಗ್ ವ್ಯವಹಾರದ ವಿವರಗಳೆಲ್ಲಾ ಅಪಾಯದಲ್ಲಿತ್ತು ಎನ್ನಲಾಗಿದೆ.

ಕಳೆದ ಸೋಮವಾರ ಒಂದೇ ದಿನ ಬ್ಯಾಂಕ್ ಇದೇ ಸರ್ವರ್ ಮೂಲಕ 30 ಲಕ್ಷಕ್ಕೂ ಹೆಚ್ಚು ಸಂದೇಶ ರವಾನಿಸಿದೆ. ಇವೆಲ್ಲವೂ ಹ್ಯಾಕರ್ ಗಳ ಕೈಗೆ ಸಿಕ್ಕಿದ್ದರೆ ಲಕ್ಷಾಂತರ ಗ್ರಾಹಕರ ಖಾತೆ ಹ್ಯಾಕ್ ಆಗುವ ಸಂಭವ ಇತ್ತು ಎನ್ನಲಾಗಿದೆ.

Follow Us:
Download App:
  • android
  • ios