ಎಸ್ ಬಿಐ ಇತ್ತೀಚೆಗೆ ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯ ಪ್ರಾರಂಭಿಸಿದೆ. ಈ ಸೌಲಭ್ಯದಿಂದ ಗ್ರಾಹಕರಿಗೆ ಏನೆಲ್ಲ ಪ್ರಯೋಜನ ಸಿಗಲಿದೆ? ಇದರ ಬಳಕೆ ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಜ.13): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಇತ್ತೀಚೆಗೆ ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್ ಬ್ಯಾಂಕಿಂಗ್ ಸೇವೆಗಳನ್ನು ಕೂಡ ಪ್ರಾರಂಭಿಸಿದೆ. ಈಗ ಸರ್ಕಾರದ ಎಲೆಕ್ಟ್ರಾನಿಕ್ ಸರ್ವೀಸ್ ಪೂರೈಕೆದಾರ ಸಂಸ್ಥೆ ರಾಷ್ಟ್ರೀಯ ಆಡಳಿತ ಸೇವೆಗಳ ನಿಗಮ (ಎನ್ ಇಎಸ್ ಎಲ್) ಜೊತೆಗೆ ಸೇರಿ ಇ-ಬ್ಯಾಂಕ್ ಗ್ಯಾರಂಟಿ (ಇ-ಬಿಜಿ) ಆಯ್ಕೆ ಆರಂಭಿಸಿದೆ. ಇ-ಬಿಜಿಯಿಂದ ಇನ್ಮುಂದೆ ಇ-ಸಹಿ ಹಾಗೂ ಟೈಮ್ ಸ್ಟ್ಯಾಂಪ್ ಗಳ ಬಳಕೆಯಾಗಲಿದೆ. ಇದ್ರಿಂದ ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದೆ. ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲದೆ ಎನ್ ಇಎಸ್ ಎಲ್ ಪೋರ್ಟಲ್ ಬಳಸಿ ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯವನ್ನು ಗ್ರಾಹಕರು ತಕ್ಷಣ ಪಡೆಯಬಹುದು. ಎಸ್ ಬಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಈ ಹೊಸ ಸೌಲಭ್ಯ ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ತಿಳಿಸಿದೆ. ಈ ಸೌಲಭ್ಯದ ಮೂಲಕ ಯಾವುದೇ ಬ್ಯಾಂಕಿಂಗ್ ಪ್ರಕ್ರಿಯಿಗೆ ತಗಲುವ ಸಮಯ ಗಂಟೆಗಳಿಂದ ನಿಮಿಷಗಳಿಗೆ ಇಳಿಕೆಯಾಗಲಿದೆ ಹಾಗೂ ಪಾರದರ್ಶಕತೆ ಹೆಚ್ಚಲಿದೆ ಎಂದು ಎಸ್ ಬಿಐ ತಿಳಿಸಿದೆ.
ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯದ ಬಗ್ಗೆ ಮಾತನಾಡಿದ ಎಸ್ ಬಿಐ ಚೇರ್ಮನ್ ದಿನೇಶ್ ಕುಮಾರ್ ಖಾರ 'ಇ-ಬಿಜಿ ಸೇವೆ ಪ್ರಾರಂಭಿಸಲು ಎನ್ ಇಎಸ್ ಎಲ್ ಜೊತೆಗೆ ಕೈಜೋಡಿಸಿರೋದು ನನಗೆ ತುಂಬಾ ಖುಷಿ ನೀಡಿದೆ. ಬ್ಯಾಂಕಿಂಗ್ ಸೇವೆಗಳನ್ನು ಸರಳಗೊಳಿಸಲು ಗ್ರಾಹಕರಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವಲ್ಲಿ ಎಸ್ ಬಿಐ ಯಾವಾಗಲೂ ಮುಂಚೂಣಿಯಲ್ಲಿದೆ. ಬ್ಯಾಂಕ್ ಗ್ಯಾರಂಟಿ ಲೈಫ್ ಸೈಕಲ್ ನಲ್ಲಿ ಸಮಯ ಕಡಿತಗೊಳಿಸುವಲ್ಲಿ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರಂಟಿ (e-BG) ಪ್ರಮುಖ ಮೈಲುಗಲ್ಲಾಗಿದೆ' ಎಂದಿದ್ದಾರೆ.
Women Finance: ಮಹಿಳೆಗೂ ಇರಲಿ ಬ್ಯಾಂಕಿಂಗ್ ಜ್ಞಾನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಎಂಡಿ ಶ್ರೀ ಚಲ್ಲ ಶ್ರೀನಿವಾಸುಲು ಸೆಟ್ಟಿ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ 20.01.2023 ಜಾರಿಗೆ ಬರುವಂತೆ ಮುಂದಿನ ಆದೇಶದ ತನಕ ಎರಡು ವರ್ಷಗಳ ಅವಧಿಗೆ ವಿಸ್ತರಿಸಿದೆ ಎಂಬ ಬಗ್ಗೆ ಬುಧವಾರ ಎಸ್ ಬಿಐ ಮಾಹಿತಿ ನೀಡಿತ್ತು.
ವಾಟ್ಸ್ ಆ್ಯಪ್ ಮೂಲಕ ಪಿಂಚಣಿ ಸ್ಲಿಪ್
ಎಸ್ ಬಿಐ ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್ ಮೂಲಕ ಪಿಂಚಣಿ ಸ್ಲಿಪ್ ಪಡೆಯುವ ಸೇವೆ ಪ್ರಾರಂಭಿಸಿದೆ. ಇದು ಹಿರಿಯ ನಾಗರಿಕರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವೇತನ ಸ್ಲಿಪ್ ಪಡೆಯುವ ಕಷ್ಟವನ್ನು ತಪ್ಪಿಸಿದೆ. ಮನೆಯಲ್ಲೇ ಕುಳಿತು ಯಾವುದೇ ಸಮಸ್ಯೆಯಿಲ್ಲದೆಗ್ ವಾಟ್ಸ್ ಆ್ಯಪ್ ಮೂಲಕ ಪಿಂಚಣಿ ಸ್ಲಿಪ್ ಪಡೆಯಬಹುದು. ಈ ಸೇವೆ ಪಡೆಯಲು ಗ್ರಾಹಕರು ವಾಟ್ಸ್ ಆ್ಯಪ್ ನಲ್ಲಿ 9022690226 ಸಂಖ್ಯೆಗೆ 'Hi'ಎಂದು ಕಳುಹಿಸಿದರೆ ಸಾಕು. ಗ್ರಾಹಕರು ವಾಟ್ಸ್ ಆ್ಯಪ್ ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಬಹುದಾಗಿದೆ.
India Bank : ಸಾಲದ ಬಡ್ಡಿ ಮಾತ್ರವಲ್ಲ ಇವೆಲ್ಲದ್ರಿಂದ ಹಣ ಗಳಿಸುತ್ತೆ ಬ್ಯಾಂಕ್
ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆ
ಪಿಂಚಣಿದಾರರಿಗೆ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಇತ್ತೀಚೆಗೆ ನೀಡಿದೆ. ಎಸ್ ಬಿಐ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬಹುದು. ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮುಖಾಂತರ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
