ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ; ಮೇ 1ರಿಂದಲೇ ಜಾರಿಗೆ
ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಮೇ 1ರಿಂದಲೇ ಜಾರಿಗೆ ಬರುವಂತೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಬದಲಾದ ಈ ನಿಯಮಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ಆಗಿದೆ? ಇಲ್ಲಿದೆ ಮಾಹಿತಿ.
ನವದೆಹಲಿ (ಮೇ 5): ಪ್ರತಿ ತಿಂಗಳ ಪ್ರಾರಂಭದಲ್ಲಿ ಕೆಲವೊಂದು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಮೇಯಂತೂ ಹೊಸ ಆರ್ಥಿಕ ವರ್ಷದ ಎರಡನೇ ತಿಂಗಳಾಗಿರುವ ಕಾರಣ ಹಣಕಾಸು ವಿಚಾರಗಳಲ್ಲಿ ಹಲವು ಹೊಸ ನಿಯಮಗಳು ಜಾರಿಯಾಗಿವೆ. ಉಳಿತಾಯ, ಹೂಡಿಕೆ, ತೆರಿಗೆಗೆ ಸಂಬಂಧಿಸಿ ಈಗಾಗಲೇ ಅನೇಕ ಹೊಸ ನಿಯಮಗಳು ಜಾರಿಗೆ ಬಂದಿವೆ ಕೂಡ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಕೂಡ ತನ್ನ ಕ್ರೆಡಿಟ್ ಕಾರ್ಡ್ ಗಳ ಕ್ಯಾಶ್ ಬ್ಯಾಕ್ ಸೇವೆಗೆ ಸಂಬಂಧಿಸಿ ಮೇ 1ರಿಂದ ಜಾರಿಗೆ ಬರುವಂತೆ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಾಮಾನ್ಯವಾಗಿ ಬ್ಯಾಂಕ್ ಅನೇಕ ಕ್ಯಾಶ್ ಬ್ಯಾಕ್ ಸೇವೆಗಳನ್ನು ಒದಗಿಸುತ್ತವೆ. ಇವು ಗ್ರಾಹಕರಿಗೆ ಅನೇಕ ವಿಧದಲ್ಲಿ ನೆರವಾಗುತ್ತವೆ ಕೂಡ. ಇನ್ನು ಎಸ್ ಬಿಐಯ ವಿವಿಧ ಕ್ರೆಡಿಟ್ ಕಾರ್ಡ್ ಗಳ ವಾರ್ಷಿಕ ಶುಲ್ಕದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಹಾಗಾದ್ರೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ? ಈ ನಿಯಮಗಳು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರಲಿವೆ? ಇಲ್ಲಿದೆ ಮಾಹಿತಿ.
ಈ ನಿಯಮಗಳಲ್ಲಿ ಬದಲಾವಣೆ:
*ಎಸ್ ಬಿಐ AURUM ಕ್ರೆಡಿಟ್ ಕಾರ್ಡ್ ಬಳಕೆದಾರರು 5ಲಕ್ಷ ರೂ. ವ್ಯಯಿಸಿದ್ದಕ್ಕೆ ಇನ್ನು ಮುಂದೆ ಆರ್ ಬಿಎಲ್ Luxe ನಿಂದ 5,000ರೂ. ಕೂಪನ್ ಪಡೆಯಲು ಸಾಧ್ಯವಿಲ್ಲ. 2023ರ ಮೇ 1ರಿಂದ Tata CLiQ Luxuryಯಿಂದ ಅವರು ವೋಚರ್ ವೋಚರ್ ಪಡೆಯಬಹುದು ಎಂದು ಎಸ್ ಬಿಐ ಕಾರ್ಡ್ ವೆಬ್ ಸೈಟ್ ತಿಳಿಸಿದೆ.
*ಇನ್ನು ಮುಂದೆ AURUM ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಈಜಿ ಡಿನ್ನರ್ ಪ್ರೈಮ್ ಹಾಗೂ ಲೈನ್ಸ್ ಕಾರ್ಟ್ ಗೋಲ್ಡ್ ಮೆಂಬರ್ ಶಿಪ್ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ.
*ಎಸ್ ಬಿಐ ಸಿಂಪ್ಲಿ ಕ್ಲಿಕ್ ಎಸ್ ಬಿಐ (SimplyCLICK SBI Card) ಹಾಗೂ ಸಿಂಪ್ಲಿ ಕ್ಲಿಕ್ ಅಡ್ವಾಂಟೇಜ್ ಎಸ್ ಬಿಐ ಕಾರ್ಡ್ ( SimplyCLICK Advantage) ಅಡಿಯಲ್ಲಿ ರಿವಾರ್ಡ್ ಪಾಯಿಂಟ್ ಗಳನ್ನು ಕಡಿತಗೊಳಿಸಲಾಗಿದೆ. 2023ರ ಮೇ 1ರಿಂದ ರಿವಾರ್ಡ್ ಪಾಯಿಂಟ್ ಗಳನ್ನು 5Xನಿಂದ 1Xಗೆ ಬದಲಾಯಿಸಲಾಗಿದೆ.
ಎಷ್ಟು ವಿಧದ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು? ಅವುಗಳ ವಿಶೇಷತೆ ಏನು? ಇಲ್ಲಿದೆ ಮಾಹಿತಿ
*ಇನ್ನು ಎಸ್ ಬಿಐ ಕ್ರೆಡಿಟ್ ಕಾರ್ಡ್ ಗಳನ್ನು ಜ್ಯುವೆಲ್ಲರಿ, ಶಾಲೆ ಮತ್ತು ಶಿಕ್ಷಣ ಸೇವೆಗಳು, ಯುಟಿಲಿಟಿ ಮತ್ತು ವಿಮೆ ಸೇವೆಗಳನ್ನು ಪಡೆಯಲು ಬಳಸಿದರೆ ಆಗ ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗೋದಿಲ್ಲ.
*ಇನ್ನು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಗೆ ಸಂಬಂಧಿಸಿದ ಸಂಸ್ಕರಣೆ ಶುಲ್ಕವನ್ನು ಎಸ್ ಬಿಐ ಬದಲಾಯಿಸಿದೆ. ಈ ಹಿಂದೆ 99ರೂ. ಗಳಿದ್ದ ಶುಲ್ಕವನ್ನು ಈಗ 199ರೂ.ಗೆ ಹೆಚ್ಚಳ ಮಾಡಲಾಗಿದೆ.
SBI ಗ್ರಾಹಕರೇ ಗಮನಿಸಿ, ನೆಟ್ ಬ್ಯಾಂಕಿಂಗ್ ನೋಂದಣಿ ಮನೆಯಲ್ಲೇ ಕುಳಿತು ಮಾಡ್ಬಹುದು, ಹೇಗೆ? ಇಲ್ಲಿದೆ ಮಾಹಿತಿ
ವಾರ್ಷಿಕ ಶುಲ್ಕ ಹೀಗಿದೆ:
ಎಸ್ ಬಿಐ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ AURUM ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ 9,999ರೂ., ಎಸ್ ಬಿಐ ಕಾರ್ಡ್ ELITE ಶುಲ್ಕ 4,999ರೂ, ಎಸ್ ಬಿಐ ಕಾರ್ಡ್ ಪ್ರೈಮ್ ಶುಲ್ಕ 2,999ರೂ, ಎಸ್ ಬಿಐ ಕಾರ್ಡ್ ಪ್ರೈಮ್ ಅಡ್ವಾಂಟೇಜ್ ಶುಲ್ಕ 2,999ರೂ, ಶೌರ್ಯ ಎಸ್ ಬಿಐ ಕಾರ್ಡ್ 250ರೂ, ಎಸ್ ಬಿಐ ಕಾರ್ಡ್ ಪಲ್ಸ್ 1,499ರೂ, ಕ್ಯಾಶ್ ಬ್ಯಾಕ್ ಎಸ್ ಬಿಐ ಕಾರ್ಡ್ 999ರೂ, ಆದಿತ್ಯ ಬಿರ್ಲಾ ಎಸ್ ಬಿಐ ಕಾರ್ಡ್ ಶುಲ್ಕ 499ರೂ. ಆಗಿದೆ.