ಎಸ್‌ಬಿಐ ಕ್ರೆಡಿಟ್ ಗ್ರಾಹಕರಿಗೆ ಪಂಗನಾಮ30 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸ್ಬ್ಯಾಂಕ್ ಸಿಬ್ಬಂಧಿ ಎಂದು ಹೇಳಿ ಮೋಸ ಮಾಡುತ್ತಿದ್ದ ಜಾಲಒಟ್ಟು 5 ಕೋಟಿ ರೂ. ವಂಚಿಸಿದ ಖದೀಮರ ತಂಡ
ನವದೆಹಲಿ(ಜು.22): ಎಸ್‌ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸುಮಾರು 5 ಕೋಟಿ ರೂ. ವಂಚಿಸಿದ ಆರೋಪದ ಮೇಲೆ 30 ಜನರ ತಂಡವನ್ನು ಸೈಬರಾಬಾದ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಎಸ್‌ಬಿಐ ಸಿಬ್ಬಂದಿ ಎಂದು ಹೇಳಿಕೊಂಡು ಗ್ರಾಹಕರಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಸೆರೆ ಹಿಡಿದಿದ್ದಾಗಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಹೇಳಿದ್ದಾರೆ.
ಎಸ್‌ಬಿಐ ಸಿಬ್ಬಂದಿ ಎಂದು ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಕರೆ ಮಾಡಿ ಅವರಿಂದ ಕ್ರೆಡಿಟ್ ಕಾರ್ಡ್ ಡೀಟೆಲ್ಸ್ ಪಡೆದುಕೊಂಡು ನಂತರ ಆನ್‌ಲೈನ್ ಮೂಲಕ 5 ಕೋಟಿ ರೂ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ತಂಡದ ಮುಖ್ಯಸ್ಥ ವಿಜಯ್ ಕುಮಾರ್ ಶರ್ಮಾ ಸೇರಿದಂತೆ ಎಲ್ಲ 30 ಖದೀಮರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ದೆಹಲಿಯ ಜಿಲ್ಲಾ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ್ದು, ನಂತರ ಅವರನ್ನು ಸೈಬರಾಬಾದ್ ಗೆ ಕರೆತರಲಾಗುವುದು ಎಂದು ಆಯುಕ್ತ ವಿ.ಸಿ. ಸಜ್ಜನರ್ ಸ್ಪಷ್ಟಪಡಿಸಿದ್ದಾರೆ.
