ಗ್ರಾಹಕರಿಗೆ SBI ಎಚ್ಚರಿಕೆ; ಮೇ 31ರೊಳಗೆ ಹೀಗೆ ಮಾಡದಿದ್ದಲ್ಲಿ ನಿಮ್ಮ ಖಾತೆ ಸ್ಥಗಿತ!
ಸ್ಟೇಟ್ ಬ್ಯಾಂಕ್ ಇಂಡಿಯಾ ಇದೀಗ ಗ್ರಾಹಕರಿಗೆ ಹೊಸ ನೊಟೀಫಿಕೇಶನ್ ನೀಡಿದೆ. ಇದರ ಪ್ರಕಾರ ಗ್ರಾಹಕರು ಮೇ 31ರೊಳಗೆ ಸೂಚನೆ ಪಾಲಿಸದಿದ್ದರೆ, ಖಾತೆ ಸ್ಗಗಿತಗೊಳ್ಳಲಿದೆ. ಅಷ್ಟಕ್ಕೂ ಎಸ್‌ಬಿಐ ಗ್ರಾಹಕರಿಗೆ ನೀಡಿದ ಎಚ್ಚರಿಕೆ ಏನು? ಗ್ರಾಹಕರು ಏನು ಮಾಡಬೇಕು? ಇಲ್ಲಿದೆ ವಿವರ.
ನವದೆಹಲಿ(ಮೇ.03): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಾಂತರ ಗ್ರಾಹಕರಿಗೆ ಸೂಚನೆ ನೀಡಿದೆ. ಈ ಸೂಚನೆ ಪ್ರಕಾರ ಎಸ್‌ಬಿಐ ಗ್ರಾಹಕರರು ತಮ್ಮ ಖಾತೆಯ ಕೆವೈಸಿ(ದಾಖಲೆ ಪತ್ರ) ದೃಢೀಕರಣ ಮಾಡಿಕೊಳ್ಳಬೇಕು. ಮೇ. 31ರೊಳಗೆ ಗ್ರಾಹಕರು KYC ಮಾಡಿಸದಿದ್ದಲ್ಲಿ, ಖಾತೆ ಸ್ಥಗಿತಗೊಳ್ಳಲಿದೆ.
ಗೃಹಸಾಲದ ಬಡ್ಡಿ ಇಳಿಸಿದ SBI: ಮಹಿಳೆಯರಿಗೆ ವಿಶೇಷ ರಿಯಾಯ್ತಿ...
ಮೇ. 31ರೊಳಗೆ ಕೆವೈಸಿ(KYC) ದೃಢೀಕರಣ ಮಾಡಿಕೊಳ್ಳದಿದ್ದರೆ ಖಾತೆಯ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದೆ. ತಮ್ಮ ಹೋಮ್ ಬ್ರಾಂಚ್ ಅಥವಾ ಹತ್ತಿರದ ಬ್ಯಾಂಕ್‌ನಲ್ಲಿ ಕೆವೈಸಿ(KYC) ದಾಖಲೆಗಳನ್ನು ನೀಡಿ ಖಾತೆ ನಿಷ್ಕ್ರೀಯಗೊಳ್ಳದಂತೆ ಮಾಡಲು SBI ಬ್ಯಾಂಕ್ ಮಹತ್ವದ ಸೂಚನೆ ನೀಡಿದೆ. ಈ ಕುರಿತು ಎಸ್‌ಬಿಐ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಕೊರೋನಾ ನಡುವೆ ಬ್ರಾಂಚ್‌ಗೆ ತೆರಳುವುದು, ಮನೆಯಿಂದ ಹೊರಬರುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಬ್ರಾಂಚ್‌ಗೆ ತೆರಳದೇ ಕೆವೈಸಿ(KYC) ಅಪ್‌ಡೇಟ್ ಮಾಡಲು ಸ್ಟೇಟ್ ಬ್ಯಾಂಕ್ ಇಂಡಿಯಾ ಅವಕಾಶ ನೀಡಿದೆ. ಮನೆಯಿಂದಲೇ ಕೆವೈಸಿ(KYC) ಅಪ್‌ಡೇಟ್ ಮಾಡಿಕೊಳ್ಳಲು ಸಾಧ್ಯವಿದೆ.
ಮನೆಯಿಂದ ಕೆವೈಸಿ(KYC) ಅಪ್‌ಡೇಟ್ ಹೇಗೆ?
ಕೊರೋನಾ ವೈರಸ್ ಕಾರಣ ಮನೆಯಿಂದ ಹೊರಬರದೆ ಕೆವೈಸಿ(KYC) ಸುಲಭವಾಗಿ ಅಪ್‌ಡೇಟ್ ಮಾಡಿಕೊಳ್ಳಬಹುದು. ದಾಖಲೆ ಪ್ರಮಾಣಗಳನ್ನು ಪೋಸ್ಟ್ ಮೂಲಕ ಅಥಾವ ಇಮೇಲ್ ಮೂಲಕ ದಾಖಲೆಗಳನ್ನು ಬ್ಯಾಂಕ್‌ಗೆ ಕಳಹಿಸಬಹುದು. ನಿಮ್ಮ ಖಾತೆಗೆ ಕೆವೈಸಿ(KYC) ಅಪ್‌ಡೇಟ್ ಆಗುತ್ತಿದ್ದಂತೆ ಮೊಬೈಲ್‌ಗೆ ಮೆಸೇಜ್ ಬರಲಿದೆ.