ಗೃಹಸಾಲದ ಬಡ್ಡಿ ಇಳಿಸಿದ SBI: ಮಹಿಳೆಯರಿಗೆ ವಿಶೇಷ ರಿಯಾಯ್ತಿ
ಗೃಹಸಾಲದ ಬಡ್ಡಿ ಇಳಿಸಿದ ಎಸ್‌ಬಿಐ | ಮಹಿಳಾ ಸಾಲಗಾರರಿಗೆ ವಿಶೇಷ ರಿಯಾಯ್ತಿ
ದೆಹಲಿ(ಮೇ.01): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲದ ಬಡ್ಡಿದರಗಳನ್ನು ಕಡಿಮೆ ಮಾಡಿದೆ. 30 ಲಕ್ಷ ರೂಪಾಯಿವರೆಗಿನ ಸಾಲಗಳಿಗೆ ಶೇ 6.70 ಮತ್ತು 30 ಲಕ್ಷದಿಂದ ಮೇಲ್ಪಟ್ಟು 75 ಲಕ್ಷ ವರೆಗಿನ ಸಾಲಕ್ಕೆ 6.94ಶೇಖಡಾ ಬಡ್ಡಿ ಇಳಿಸಲಾಗಿದೆ. 75 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಸಾಲಕ್ಕೆ 7.05 ರಷ್ಟು ಬಡ್ಡಿ ಇರಲಿದೆ.
ಮಹಿಳಾ ಸಾಲಗಾರರಿಗೆ 5 ಬಿಪಿಎಸ್ ಹೆಚ್ಚುವರಿ ಬಡ್ಡಿ ರಿಯಾಯತಿಯನ್ನು ನೀಡಲಾಗಿದೆ. ಯೋನೊ ಆಪ್ ಮೂಲಕ ತಮ್ಮ ಮನೆಯ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ವಿಶೇಷ 5 ಬಿಪಿಎಸ್ ರಿಯಾಯಿತಿ ಪಡೆಯಲಿದ್ದಾರೆ.
ಬಜಾಜ್ ಮುಖ್ಯಸ್ಥ ಹುದ್ದೆಗೆ ರಾಹುಲ್ ರಾಜೀನಾಮೆ
ರೀಟೇಲ್ & ಡಿಜಿಟಲ್ ಬ್ಯಾಂಕಿಂಗ್ ಎಂಡಿ ಸಿಡಿ ಎಸ್ ಶೆಟ್ಟಿ ಪ್ರಸ್ತುತ ಗೃಹ ಸಾಲದ ಬಡ್ಡಿದರದ ಕೊಡುಗೆಗಳೊಂದಿಗೆ ಗ್ರಾಹಕರಿಗೆ ಇದು ಕೈಗೆಟುಕುವಿಕೆ ದರದಲ್ಲಿ ಲಭ್ಯವಾಗಲಿದೆ. ಇದರಲ್ಲಿ ಇಎಂಐ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಈ ಕ್ರಮಗಳು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಒಂದು ಉತ್ತೇಜನವನ್ನು ನೀಡುತ್ತದೆ ಎಂದಿದ್ದಾರೆ. ಬಡ್ಡಿದರ ಕಡಿತವು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ ಎಂದು ಶೆಟ್ಟಿ ಹೇಳಿದರು.