ಐಪಿಓನಿಂದ ದೊರೆತ ಹಣವನ್ನು ದೇಶಾದ್ಯಂತ 25 ಮಳಿಗೆಗಳು ಹಾಗೂ ಎರಡು ದೊಡ್ಡ ಗೋದಾಮು ನಿರ್ಮಾಣಕ್ಕೆ ಬಳಕೆ ಮಾಡುವುದಾಗಿ ಕಂಪನಿ ಹೇಳಿದೆ.

ಮುಂಬೈ (ನ.18): ಇನೀಶಿಯಲ್‌ ಪಬ್ಲಿಕ್‌ ಆಫರಿಂಗ್‌ ಅಥವಾ ಐಪಿಓ ಮೂಲಕ ಸಾರ್ವಜನಿಕ ಮಾರುಕಟ್ಟೆಯಿಂದ 1200 ಕೋಟಿ ರೂಪಾಯಿ ಸಂಗ್ರಹಣೆ ಮಾಡಲು ಸಾಯಿ ಸಿಲ್ಕ್ಸ್‌ ಕಲಾಮಂದಿರಕ್ಕೆ (ಎಸ್‌ಎಸ್‌ಕೆಎಲ್‌) ಸೆಕ್ಯುರಿಟಿ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ (ಸೆಬಿ) ಒಪ್ಪಿಗೆ ನೀಡಿದೆ. ಕಂಪನಿಯು ಕಳೆದ ಜುಲೈನಲ್ಲಿ ಕಂಪನಿಯ ಸಂಪೂರ್ಣ ವಿಸ್ತ್ರತ ಮಾಹಿತಿ ನಿಡಿರುವ ರೆಡ್‌ ಹೆರಿಂಗ್‌ ಪ್ರಾಸ್ಪೆಕ್ಟಸ್‌ (ಡಿಆರ್‌ಎಚ್‌ಪಿ) ಸಲ್ಲಿಕೆ ಮಾಡಿತ್ತು. ಐಪಿಓ ಮೂಲಕ ಸಂಗ್ರಹಣೆಯಾಗುವ ಹಣವನ್ನು ದೇಶಾದ್ಯಂತ 25 ಮಳಿಗೆಗಳು ಹಾಗೂ ಎರಡು ದೊಡ್ಡ ಗೋದಾಮುಗಳನ್ನು ಸ್ಥಾಪನೆ ಮಾಡಲು, ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಹಾಗೂ ಕಾರ್ಪೋರೇಟ್‌ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ ಎಂದು ಡಿಆರ್‌ಎಚ್‌ಪಿಯಲ್ಲಿ ಕಂಪನಿ ತಿಳಿಸಿದೆ. 2022ರ ಹಣಕಾಸು ವರ್ಷದಲ್ಲಿ ಕಂಪನಿ ಒಟ್ಟಾರೆ 1129 ಕೋಟಿ ರೂಪಾಯಿ ಆದಾಯವನ್ನು ಪಡೆದುಕೊಂಡಿದ್ದರೆ, ಅದರಲ್ಲಿ 58 ಕೋಟಿ ರೂಪಾಯಿ ನಿವ್ವಳ ಲಾಭ ಪಡೆದುಕೊಂಡಿದೆ. ಕಂಪನಿಯ ಆರ್‌ಓಒ (ಪ್ರತಿ ಶೇರಿನ ರಿಟರ್ನ್‌) ಶೇ.31 ಆಗಿದೆ. ಇತ್ತೀಚೆಗೆ ಕಂಪನಿಯು ದೇಶದಲ್ಲಿ 50 ಮಳಿಗೆಗಳ ಮೈಲಿಗಲ್ಲನ್ನು ಸಾಧನೆ ಮಾಡಿತ್ತು.

ಡಿಆರ್‌ಎಚ್‌ಪಿ ಪ್ರಕಾರ, ಐಪಿಓನಲ್ಲಿ ಹೊಸದಾಗಿ 600 ಕೋಟಿ ರೂಪಾಯಿ ಮೌಲ್ಯದ ಹೊಸ ಷೇರುಗಳ ಹಂಚಿಕೆ ಹಾಗೂ ಆಫರ್‌ ಫಾರ್‌ ಸೇಲ್‌ (ಓಎಫ್‌ಎಸ್‌) ಮೂಲಕ 18,048,440 ಷೇರುಗಳನ್ನು ಐಪಿಓ ಮೂಲಕ ಹಂಚಿಕೆ ಮಾಡಲಾಗುತ್ತದೆ. ಮಹಿಳೆಯರ ಸಾಂಪ್ರದಾಯಿಕ ಉಡುಗೆಗಳ ದೊಡ್ಡ ಚಿಲ್ಲರೆ ವ್ಯಾಪಾರಿಗಳಲ್ಲಿ ಎಸ್‌ಎಸ್‌ಕೆಎಲ್‌ ಒಂದಾಗಿದೆ. ಮುಖ್ಯವಾಗಿ ಸೀರೆಗಳನ್ನು ಈ ಕಂಪನಿಗೆ ವ್ಯಾಪಾರ ಮಾಡುತ್ತದೆ. ದಕ್ಷಿಣ ಭಾರತದಲ್ಲಿ ಮದುವೆಗಳು, ಇತರ ಕಾರ್ಯಕ್ರಮಗಳಿಗೆ ಸಾಂಪ್ರದಾಯಿಕ ಸೀರೆಗಳು ಮತ್ತು ಪಾರ್ಟಿವೇರ್‌ಗಳನ್ನು ಕಂಪನಿ ಮಾರಾಟ ಮಾಡುತ್ತದೆ. ದಿನಬಳಕೆಯ ಸೀರೆಗಳು, ಮಧ್ಯಮವರ್ಗದ ಸೀರೆಗಳು ದುಬಾರಿ ಸೀರೆಗಳ ವಿಭಾಗದಲ್ಲಿ ಎಸ್‌ಎಸ್‌ಕೆಎಲ್‌ ವ್ಯಾಪಾರ ವಹಿವಾಟು ಮಾಡುತ್ತದೆ. 

ಅದರೊಂದಿಗೆ ಪುರುಷರ ಉಡುಗೆಗಳ ವಿಭಾಗದಲ್ಲಿ ಸಾಂಪ್ರದಾಯಿಕ ದಿರಿಸುಗಳು, ಮಕ್ಕಳ ಸಾಂಪ್ರದಾಯಿಕ ಹಾಗೂ ಹಬ್ಬದ ಸಂದರ್ಭದ ಬಟ್ಟೆಗಳು, ಫ್ಯಾಶನ್‌ ವೇರ್‌, ಮಹಿಳೆಯರು ಮತ್ತು ಪುರುಷರಿಗಾಗಿ ವಿದೇಶಿ ಉಡುಗೆಗಳ ಶೈಲಿಯ ಫ್ಯಾಶನ್‌ ಬಟ್ಟೆಗಳನ್ನು ಕಂಪನಿ ಮಾರಾಟ ಮಾಡುತ್ತದೆ.ಎಸ್‍ಎಸ್‍ಕೆಎಲ್ ನಾಲ್ಕು ವಿಭಿನ್ನ ಸ್ವರೂಪದ ಮಳಿಗೆಗಳಾದ ಕಲಾಮಂದಿರ, ಮಂದಿರ, ವರಮಹಾಲಕ್ಷ್ಮಿ ಸಿಲ್ಕ್ಸ್ ಮತ್ತು ಕೆಎಲ್‍ಎಂ ಫ್ಯಾಶನ್ ಮಾಲ್ ಮತ್ತು ಇ-ಕಾಮರ್ಸ್ ಚಾನೆಲ್‍ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ತನ್ನದೇ ಆದ ವೆಬ್‍ಸೈಟ್ ಮತ್ತು ಇತರ ಆನ್‍ಲೈನ್ ಇ- ಕಾಮರ್ಸ್ ಮಾರುಕಟ್ಟೆ ಸ್ಥಳಗಳನ್ನು ಒಳಗೊಂಡಿರುತ್ತದೆ.

LIC IPO ದಿನಾಂಕ ಘೋಷಣೆ ಆಗುತ್ತಿದ್ದಂತೆ GMP ಭರ್ಜರಿ ಏರಿಕೆ!

ಛಲವಾದಿ ಎನ್‌ಕೆಡಿ ಪ್ರಸಾದ್‌ ಸಿಎಂಡಿ ಆಗಿರುವ, ಸಾಯಿ ಸಿಲ್ಕ್ ಜುಲೈನಲ್ಲಿ ಸೆಬಿಗೆ ಪ್ರಾಥಮಿಕ ಐಪಿಒ ಪೇಪರ್‌ಗಳನ್ನು ಸಲ್ಲಿಕೆ ಮಾಡಿತ್ತು. ನವೆಂಬರ್ 7 ರಂದು ತನ್ನ ವೀಕ್ಷಣಾ ಪತ್ರವನ್ನು ಪಡೆದುಕೊಂಡಿದೆ ಎಂದು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಮಂಗಳವಾರ ತಿಳಿಸಿದೆ. ಕಂಪನಿಯು ಪ್ರಸ್ತುತ ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ 50 ಮಳಿಗೆಗಳನ್ನು ನಿರ್ವಹಣೆ ಮಾಡುತ್ತಿದೆ.

SENSEX 1170 ಅಂಕ ಕುಸಿತ : Paytm ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ!

ಐಪಿಓಗೆ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳು (BRLMs) ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಲಿಮಿಟೆಡ್, ಎಡೆಲ್‌ವೀಸ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಮತ್ತು HDFC ಬ್ಯಾಂಕ್ ಲಿಮಿಟೆಡ್ ನೇಮಕ ಮಾಡಲಾಗಿದೆ. ಈಕ್ವಿಟಿ ಷೇರುಗಳನ್ನು ಬಿಎಸ್‌ಇ ಅಂದರೆ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಮತ್ತು ಎನ್‌ಎಸ್‌ಇ ಅಂದರೆ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಮಾಡಲು ಪ್ರಸ್ತಾಪಿಸಲಾಗಿದೆ.