Rupee hits all time low against dollar: ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಾದಂತೆ ರೂಪಾಯಿ ಮೌಲ್ಯ ಕೂಡ ಪಾತಾಳಕ್ಕೆ ಕುಸಿಯುತ್ತಿದೆ. ಇಂದು ರೂಪಾಯಿ ಬೆಲೆ ಹಿಂದೆಂದೂ ಕಾಣದಷ್ಟು ಕೆಳಗಿಳಿದಿದೆ.
ನವದೆಹಲಿ (ಮೇ.9): ಈಗಷ್ಟೇ ಕೊರೋನಾ (Corona) ಹೊಡೆತದಿಂದ ಚೇತರಿಸಿಕೊಳ್ಳುತ್ತಿರೋ ಜಗತ್ತಿಗೆ ರಷ್ಯಾ (Russia)- ಉಕ್ರೇನ್ (Ukraine) ಸಂಘರ್ಷ ಮತ್ತೊಂದು ಆಘಾತ ನೀಡಿದೆ. ಭಾರತದ (India) ಪಾಲಿಗೂ ಯುದ್ಧದ (War) ಬಿಸಿ ತಟ್ಟಲಾರಂಭಿಸಿದ್ದು, ಸೋಮವಾರ (ಮೇ 9) ಡಾಲರ್ (Dollar) ಎದುರು ರೂಪಾಯಿ (Rupee) ಮೌಲ್ಯ ಸರ್ವಕಾಲಿಕ ಕುಸಿತ ದಾಖಲಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 51 ಪೈಸೆ ಇಳಿಕೆ ಕಂಡಿದ್ದು, ಪ್ರಸ್ತುತ 77.41ರೂ. ಇದೆ. (77.41 rupees against 1 US Dollar)
ತೈಲ ಬೆಲೆ ಹೆಚ್ಚಳವೇ ಕಾರಣ:
ಸೋಮವಾರ ಬೆಳಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಯೇರಿಕೆಯಾಗುತ್ತಿದ್ದಂತೆ ಡಾಲರ್ (Dollar) ಮೌಲ್ಯ ಕೂಡ ಹೆಚ್ಚಿತು. ಪರಿಣಾಮ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದಲ್ಲಿ ತೀವ್ರ ಕುಸಿತ ಕಂಡುಬಂದಿತು. ಸೋಮವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯ ಸರ್ವಕಾಲಿಕ ಕಡಿಮೆ ಮಟ್ಟಕ್ಕೆ ಕುಸಿತ ಕಂಡಿದೆ. ಇದು ಭಾರತದ ಆರ್ಥಿಕ ರಂಗಕ್ಕೆ ದೊಡ್ಡ ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸೋಮವಾರ ಗಣನೀಯ ಏರಿಕೆ ಕಂಡುಬಂದಿದೆ. ಇದು ಆಮದು ಹಣದುಬ್ಬರ ಏರಿಕೆ ಹಾಗೂ ದೇಶದ ವ್ಯಾಪಾರ ಹಾಗೂ ಚಾಲ್ತಿ ಖಾತೆ ಕೊರತೆಯನ್ನು ಇನ್ನಷ್ಟು ಹೆಚ್ಚಿಸೋ ಭಯ ಹುಟ್ಟಿಸಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದೆ.
ಪಾತಾಳಕ್ಕೆ ಕುಸಿದ ರೂಪಾಯಿ:
ಭಾಗಶಃ ( Partially)ಪರಿವರ್ತಿಸಬಹುದಾದ (convertible) ರೂಪಾಯಿ ಡಾಲರ್ ಎದುರು 77.41 ವಹಿವಾಟು ನಡೆಸುತ್ತಿದೆ. ಇದು ಒಂದು ಹಂತದಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಅಂದ್ರೆ 76.96 ಕುಸಿತ ಕಂಡಿತ್ತು. ಮಾರ್ಚ್ ತಿಂಗಳಲ್ಲಿ ರೂಪಾಯಿ ಡಾಲರ್ ಎದುರು 76.16 ಮೌಲ್ಯದೊಂದಿಗೆ ವಹಿವಾಟು ಮುಗಿಸಿತ್ತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಯುಎಸ್ ಡಾಲರ್ ಎದುರು 76.85 ಮೌಲ್ಯದೊಂದಿಗೆ ರೂಪಾಯಿ ದಿನದ ವಹಿವಾಟು ಪ್ರಾರಂಭಿಸಿತ್ತು. ಆದ್ರೆ ಆ ಬಳಿಕ 81ಪೈಸೆ ಇಳಿಕೆ ಕಂಡು 76.98ಕ್ಕೆ ಕುಸಿಯಿತು. ಇದೀಗ ದಾಖಲೆ ಕುಸಿತ ಕಂಡಿದ್ದು, 51 ಪೈಸೆ ಕಳೆದುಕೊಂಡು ಅಮೆರಿಕನ್ ಡಾಲರ್ ಮುಂದೆ 77.41 ರೂಪಾಯಿಗಳಿಗೆ ಮಂಡಿಯೂರಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ: Rupee Vs Dollar:ಡಾಲರ್ ಎದುರು ರೂಪಾಯಿ ಸರ್ವಕಾಲಿಕ ಕುಸಿತ ;ರೂಪಾಯಿ ಮೌಲ್ಯ 81ಪೈಸೆ ಇಳಿಕೆ
ಸೆನ್ಸೆಕ್ಸ್ , ನಿಫ್ಟಿ ಕುಸಿತ:
ಸೋಮವಾರ ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಶೇ.2.74 ಅಂದ್ರೆ 1,491.06 ಇಳಿಕೆ ಕಂಡು 52,842.75 ತಲುಪಿತ್ತು. ಇನ್ನು ಎನ್ ಎಸ್ಇ ಸೂಚ್ಯಂಕ ನಿಫ್ಟಿ ಕೂಡ ಶೇ.2.35 ಇಳಿಕೆ ಅಥವಾ 382.20 ಅಂಕಗಳ ಇಳಿಕೆ ಕಂಡು 15,863.15 ಮುಕ್ತಾಯವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೇ ಈ ಬೆಳವಣಿಗೆಗೆ ಕಾರಣ ಎನ್ನಬಹುದು.
ಇದನ್ನೂ ಓದಿ: Rupee vs Dollar: 16 ತಿಂಗಳಲ್ಲೇ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ, ಇದಕ್ಕೇನು ಕಾರಣ?
ಕಚ್ಚಾ ತೈಲ ಬೆಲೆಯೇರಿಕೆ:
ರಷ್ಯಾದ ಕಚ್ಚಾ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸೋ ಬಗ್ಗೆ ಐರೋಪ್ಯ ರಾಷ್ಟ್ರಗಳು ಹಾಗೂ ಮಿತ್ರರಾಷ್ಟ್ರಗಳ ಜೊತೆ ಅಮೆರಿಕ ಮಾತುಕತೆ ನಡೆಸುತ್ತಿದೆ ಎಂದು ಭಾನುವಾರ ಸಂದರ್ಶನವೊಂದರಲ್ಲಿ ಅಮೆರಿಕದ (US) ಗೃಹ ಕಾರ್ಯದರ್ಶಿ(Secretary of Stat) ಆಂಟನಿ ಬ್ಲಿಂಕೆನ್ ಹೇಳಿದ್ದರು. ಬ್ಲಿಂಕೆನ್ ಹೇಳಿಕೆ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಜಾಗತಿಕ ಕಚ್ಚಾ ತೈಲದ ಮಾನದಂಡ ಬ್ರೆಂಟ್ (Brent) ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ (Barrel) ಮೇಲೆ $139.13 ಏರಿಕೆ ಕಂಡಿದೆ. ಇದು 14 ವರ್ಷಗಳಲ್ಲೇ ದಾಖಲೆಯ ಏರಿಕೆಯಾಗಿದೆ.
