Asianet Suvarna News Asianet Suvarna News

Rupee Value: ಡಾಲರ್‌ ಮುಂದೆ ಕೊಂಚ ಜಿಗಿದ ರೂಪಾಯಿ, ಇಂದಿನ ಮೌಲ್ಯವೆಷ್ಟು?

Rupee Value Today: ಅಮೆರಿಕನ್‌ ಡಾಲರ್‌ ಎದುರು ಇಂದು ರೂಪಾಯಿ ಮೌಲ್ಯ ಕೊಂಚ ಏರಿಕೆಯಾಗಿದೆ. ಈ ಮೂಲಕ ಡಾಲರ್‌ ಎದುರು ರೂಪಾಯಿ ಮೌಲ್ಯ 77.62 ಆಗಿದೆ.

Rupee gains 4 paise against us dollars on monday
Author
Bengaluru, First Published May 23, 2022, 11:10 AM IST

ನವದೆಹಲಿ, ಮೇ 23: ರೂಪಾಯಿ ಮೌಲ್ಯ ಕಳೆದ ಕೆಲ ತಿಂಗಳುಗಳಿಂದ ಡಾಲರ್‌ ಮುಂದೆ ಕುಸಿಯುತ್ತಲೇ ಇತ್ತು. ಆದರೆ ಸೋಮವಾರ ಬೆಳಗ್ಗೆ ಫೋರೆಕ್ಸ್‌ ಇಂಟರ್‌ ಬ್ಯಾಂಕ್‌ ಮಾರುಕಟ್ಟೆಯಲ್ಲಿ ರೂಪಾಯಿ ಡಾಲರ್‌ ಎದುರು ಕೊಂಚ ಜಿಗಿದಿದೆ. ನಾಲ್ಕು ಪೈಸೆಯಷ್ಟು ರೂಪಾಯಿ ಮೌಲ್ಯ ಹೆಚ್ಚಿದ್ದ, ಒಂದು ಡಾಲರ್‌ ಗೆ ಈಗ ರೂಪಾಯಿ ಮೌಲ್ಯ ರೂ. 77.66ದಿಂದ ರೂ. 77.62 ಆಗಿದೆ. ಶುಕ್ರವಾರ ರೂಪಾಯಿ ಮೌಲ್ಯ 7 ಪೈಸೆ ಕುಸಿದು 77.63ಗೆ ಇಳಿದಿತ್ತು. ಇದು ಸಾರ್ವಕಾಲಿಕ ಕಳಪೆ ಪ್ರದರ್ಶನವೂ ಆಗಿತ್ತು. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಫಂಡ್‌ ಹೊರ ಹೋಗುವಿಕೆಯಿಂದ ರೂಪಾಯಿ ಮೌಲ್ಯ ಕುಸಿದಿತ್ತು. ಶುಕ್ರವಾರ 77.63 ರೂಪಾಯಿಗಳಿಗೆ ಕುಸಿದಿತ್ತು. ಅದಕ್ಕೂ ಹಿಂದೆ, ಅಂದರೆ ಗುರುವಾರ 77.56 ರಲ್ಲಿ ಇತ್ತು. 

ಕಳೆದ ಕೆಲ ದಿನಗಳ ದಾಖಲೆ ಏರಿಕೆ ಯಾಕೆ?:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಯೇರಿಕೆಯಾಗುತ್ತಿದ್ದಂತೆ ಡಾಲರ್ (Dollar) ಮೌಲ್ಯ ಕೂಡ ಹೆಚ್ಚಿತು. ಪರಿಣಾಮ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದಲ್ಲಿ ತೀವ್ರ ಕುಸಿತ ಕಂಡುಬಂದಿತು. ಕಳೆದ ಕೆಲ ವಾರಗಳಿಂದ ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯ ಸರ್ವಕಾಲಿಕ ಕಡಿಮೆ ಮಟ್ಟಕ್ಕೆ ಕುಸಿತ ಕಾಣುತ್ತಿತ್ತು. ಇದು ಭಾರತದ ಆರ್ಥಿಕ ರಂಗಕ್ಕೆ ದೊಡ್ಡ ಆಘಾತ ನೀಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸೋಮವಾರ ಗಣನೀಯ ಏರಿಕೆ ಕಂಡುಬಂದಿದೆ. ಇದು ಆಮದು ಹಣದುಬ್ಬರ ಏರಿಕೆ ಹಾಗೂ ದೇಶದ ವ್ಯಾಪಾರ ಹಾಗೂ ಚಾಲ್ತಿ ಖಾತೆ ಕೊರತೆಯನ್ನು ಇನ್ನಷ್ಟು ಹೆಚ್ಚಿಸೋ ಭಯ ಹುಟ್ಟಿಸಿದೆ.

ಇದನ್ನೂ ಓದಿ: Petrol - Diesel Price Today: ಸುಂಕ ಕಡಿತಗೊಂಡು 2 ದಿನ, ಹೀಗಿದೆ ಇಂದಿನ ತೈಲ ಬೆಲೆ!

ಪಾತಾಳಕ್ಕೆ ಕುಸಿದ - ಕೊಂಚ ಜಿಗಿತ:
ಭಾಗಶಃ ( Partially) ಪರಿವರ್ತಿಸಬಹುದಾದ (convertible) ರೂಪಾಯಿ ಡಾಲರ್ ಎದುರು 77.41 ವಹಿವಾಟು ನಡೆಸುತ್ತಿದೆ. ಇದು ಒಂದು ಹಂತದಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಅಂದ್ರೆ 76.96 ಕುಸಿತ ಕಂಡಿತ್ತು. ಮಾರ್ಚ್‌ ತಿಂಗಳಲ್ಲಿ ರೂಪಾಯಿ ಡಾಲರ್ ಎದುರು 76.16 ಮೌಲ್ಯದೊಂದಿಗೆ ವಹಿವಾಟು ಮುಗಿಸಿತ್ತು. ಇಂಟರ್‌ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಯುಎಸ್ ಡಾಲರ್ ಎದುರು 76.85 ಮೌಲ್ಯದೊಂದಿಗೆ ರೂಪಾಯಿ ದಿನದ ವಹಿವಾಟು ಪ್ರಾರಂಭಿಸಿತ್ತು. ಆದ್ರೆ ಆ ಬಳಿಕ 81ಪೈಸೆ ಇಳಿಕೆ ಕಂಡು 76.98ಕ್ಕೆ ಕುಸಿಯಿತು. ಇದೀಗ ದಾಖಲೆ ಕುಸಿತ ಕಂಡಿದ್ದು, 51 ಪೈಸೆ ಕಳೆದುಕೊಂಡು ಅಮೆರಿಕನ್‌ ಡಾಲರ್‌ ಮುಂದೆ 77.41 ರೂಪಾಯಿಗಳಿಗೆ ಮಂಡಿಯೂರಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಇಂದು ಆರಂಭಿಕ ಮಾರುಕಟ್ಟೆಯಲ್ಲಿ ನಾಲ್ಕು ಪೈಸೆ ಗಳಿಕೆಯೊಂದಿಗೆ ರೂಪಾಯಿ ಕೊಂಚ ಮಟ್ಟಿನ ಸಮಾಧಾನ ತಂದುಕೊಟ್ಟಿದೆ.

ಸೆನ್ಸೆಕ್ಸ್ , ನಿಫ್ಟಿ ಕುಸಿತ:
ಕಳೆದ ಸೋಮವಾರ ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್  ಶೇ.2.74 ಅಂದ್ರೆ 1,491.06 ಇಳಿಕೆ ಕಂಡು 52,842.75 ತಲುಪಿತ್ತು. ಇನ್ನು ಎನ್ ಎಸ್ಇ ಸೂಚ್ಯಂಕ ನಿಫ್ಟಿ ಕೂಡ ಶೇ.2.35 ಇಳಿಕೆ ಅಥವಾ 382.20 ಅಂಕಗಳ ಇಳಿಕೆ ಕಂಡು 15,863.15 ಮುಕ್ತಾಯವಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೇ ಈ ಬೆಳವಣಿಗೆಗೆ ಕಾರಣ ಎನ್ನಬಹುದು.

ಇದನ್ನೂ ಓದಿ: ಕಚ್ಚಾತೈಲ ಪುನಃ ಏರಿದರೆ ಮತ್ತೊಮ್ಮೆ ಅಬಕಾರಿ ಸುಂಕ ಕಡಿತ:ಹಣದುಬ್ಬರ ತಡೆಗೆ ಕ್ರಮ!

ಕಚ್ಚಾ ತೈಲ ಬೆಲೆಯೇರಿಕೆ ಮತ್ತು ರಷ್ಯಾ ತೈಲ ಆಮದು ನಿಷೇಧ:
ರಷ್ಯಾದ ಕಚ್ಚಾ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸೋ ಬಗ್ಗೆ ಐರೋಪ್ಯ ರಾಷ್ಟ್ರಗಳು ಹಾಗೂ ಮಿತ್ರರಾಷ್ಟ್ರಗಳ ಜೊತೆ ಅಮೆರಿಕ ಮಾತುಕತೆ ನಡೆಸುತ್ತಿವೆ ಎಂದು ಸಂದರ್ಶನವೊಂದರಲ್ಲಿ ಅಮೆರಿಕದ (US) ಗೃಹ ಕಾರ್ಯದರ್ಶಿ(Secretary of Stat) ಆಂಟನಿ ಬ್ಲಿಂಕೆನ್ ಹೇಳಿದ್ದರು. ಬ್ಲಿಂಕೆನ್ ಹೇಳಿಕೆ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿತ್ತು. ಜಾಗತಿಕ ಕಚ್ಚಾ ತೈಲದ ಮಾನದಂಡ ಬ್ರೆಂಟ್ (Brent) ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ (Barrel) ಮೇಲೆ  $139.13 ಏರಿಕೆ ಕಂಡಿತ್ತು. ಇದು 14 ವರ್ಷಗಳಲ್ಲೇ ದಾಖಲೆಯ ಏರಿಕೆಯಾಗಿದೆ. ಇವೆಲ್ಲವೂ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮುಂದಿನ ದಿನಗಳಲ್ಲಾದರೂ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ದಾಖಲೆ ಏರಿಕೆ ಕಾಣಲಿ ಎಂದು ಆರ್ಥಿಕ ತಜ್ಞರು ಆಶಿಸುತ್ತಿದ್ದಾರೆ.

Follow Us:
Download App:
  • android
  • ios