ಬೆಂಗಳೂರು(ಜೂ.29): ಕೆಲ ದಿನಗಳ ಹಿಂದಷ್ಟೇ RBI ರೆಪೋ ದರಗಳನ್ನು ಕಡಿತಗೊಳಿಸಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದೇ ಜು.01ರಿಂದ ಗೃಹ ಸಾಲದ ಬಡ್ಡಿದರದಲ್ಲಿ ಬದಲಾವಣೆ ಮಾಡಲಿದೆ.

ರೆಪೋ ದರದಲ್ಲಿ ಬದಲಾವಣೆಯಾದ ಪರಿಣಾಮ, ತನ್ನ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಮಾಡಲು SBI ನಿರ್ಧರಿಸಿದೆ. ಗೃಹ ಸಾಲದ ಬಡ್ಡಿದರವು ಸಂಪೂರ್ಣವಾಗಿ ರೆಪೊ ದರವನ್ನು ಆಧರಿಸಿರುತ್ತದೆ. 

ಎಸ್‌ಬಿಐ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೊ ದರ ಒಳಗೊಂಡಂತೆ ವರ್ಷದಲ್ಲಿ ಆರು ಬಾರಿ ಬಡ್ಡಿದರವನ್ನು ಪರಿಶೀಲಿಸುತ್ತದೆ. ದ್ವೈಮಾಸಿಕ ಹಣಕಾಸು ನೀತಿ ವಿಮರ್ಶೆಯಲ್ಲಿ ರೆಪೊ ದರವು ಬದಲಾದರೆ ಸ್‌ಬಿಐ ಗೃಹ ಸಾಲದ ಬಡ್ಡಿದರಗಳು ಕೂಡ  ಕಡಿಮೆಯಾಗುತ್ತವೆ 

RTGS ಮತ್ತು NEFT ಮೂಲಕ ಹಣ ವರ್ಗಾವಣೆ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕ ಕೂಡ ರದ್ದಾಗಲಿದ್ದು, ಜುಲೈ 1ರಿಂದ ಹಣ ವರ್ಗಾವಣೆ ಮೇಲೆ ಶುಲ್ಕ ಇರುವುದಿಲ್ಲ.