ಪಾಟ್ನಾ(ಸೆ.24): ಬೆಂಗಳೂರಿನಲ್ಲಿ ಏಕಾಏಕಿ ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇದಕ್ಕೆ ಕಾರಣ ಇದೀಗ ಬಯಲಾಗಿದೆ.

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನವಾಗಿದ್ದು, ದೇಶಾದಯಂತ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಕೆಜಿ ಈರುಳ್ಳಿ ಬೆಲೆ 60 ರೂ. ಇದ್ದು, ದೇಶದ ಇತರೆಡೆಯೂ ಬೆಲೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಏರಿಕೆಗೆ ಸರಬರಾಜು ಕೊರತೆ ಪ್ರಮುಖ ಕಾರಣವಾಗಿದ್ದರೂ , ಪಾಟ್ನಾದಲ್ಲಿ ನಡೆದ ಈರುಳ್ಳಿ ಕಳ್ಳತನ ಕೂಡ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

ಪಾಟ್ನಾದಲ್ಲಿರುವ ಈರುಳ್ಳಿ ಗೋಡೌನ್’ಗೆ ನುಗ್ಗಿದ ಖದೀಮರು ಸುಮಾರು 8 ಲಕ್ಷ ರೂ. ಮೌಲ್ಯದ 328 ಈರುಳ್ಳಿ ಚೀಲಗಳನ್ನು ಹೊತ್ತೊಯ್ದಿದ್ದಾರೆ ಎಂದು ಗೋಡೌನ್ ಮ್ಯಾನೇಜರ್ ಧೀರಜ್ ಕುಮಾರ್ ಹೇಳಿದ್ದಾರೆ.