ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಷೇರುಗಳ ಮಾರಾಟ ನಡೆಯುತ್ತಿರುವುದರಿಂದ ಬಾಂಬೆ ಷೇರು ಮಾರುಕಟ್ಟೆ ಕೂಡ ಸೋಮವಾರ 1546 ಅಂಕಗಳಷ್ಟು ಭಾರಿ ಪತನ ಕಂಡಿದೆ. 

ಮುಂಬೈ (ಜ.25): ಜಾಗತಿಕ ಷೇರು ಮಾರುಕಟ್ಟೆಯಲ್ಲಿ (Stock Market) ಭಾರಿ ಪ್ರಮಾಣದಲ್ಲಿ ಷೇರುಗಳ ಮಾರಾಟ ನಡೆಯುತ್ತಿರುವುದರಿಂದ ಬಾಂಬೆ ಷೇರು ಮಾರುಕಟ್ಟೆ (BSE) ಕೂಡ ಸೋಮವಾರ 1546 ಅಂಕಗಳಷ್ಟು ಭಾರಿ ಪತನ ಕಂಡಿದೆ. ನಿಫ್ಟಿ ಸೂಚ್ಯಂಕ 468 ಅಂಕ ಕುಸಿದಿದೆ. ದಿನದ ವಹಿವಾಟಿನ ವೇಳೆ ಸೆನ್ಸೆಕ್ಸ್‌ 1900 ಅಂಕಗಳಿಗೂ ಹೆಚ್ಚು ಕುಸಿದಿತ್ತು. ಇದು ಕಳೆದ 9 ತಿಂಗಳಲ್ಲೇ ಅತ್ಯಂತ ಗರಿಷ್ಠ ಇಂಟ್ರಾ ಡೇ ಕುಸಿತವಾಗಿದೆ.

ಸೋಮವಾರ ಬಿಎಸ್‌ಇ ಹಾಗೂ ಎನ್‌ಎಸ್‌ಇಯಲ್ಲಿ ದಿನದ ವಹಿವಾಟು ಆರಂಭಗೊಳ್ಳುತ್ತಿದ್ದಂತೆ ಮಾರುಕಟ್ಟೆ ಕುಸಿಯತೊಡಗಿತು. ಹೆಚ್ಚುಕಮ್ಮಿ ಎಲ್ಲಾ ಮಾದರಿಯ ಷೇರುಗಳೂ ಪತನ ಕಂಡವು. ಟೆಕ್ನಾಲಜಿ ಷೇರುಗಳು ಹೆಚ್ಚು ನಷ್ಟಅನುಭವಿಸಿದವು. ದಿನದಂತ್ಯಕ್ಕೆ ಬಿಎಸ್‌ಇ 1546.6 ಅಂಕ (ಶೇ.2.62) ಕುಸಿತ ಕಂಡು 57,491ಕ್ಕೆ ಇಳಿಯಿತು. ಎನ್‌ಎಸ್‌ಇ 468 ಅಂಕ (ಶೇ.2.66) ಪತನ ಕಂಡು 17,149ಕ್ಕೆ ಕುಸಿಯಿತು. ಬಜಾಜ್‌ ಫೈನಾನ್ಸ್‌, ಟಾಟಾ ಸ್ಟೀಲ್‌, ವಿಪ್ರೋ, ಟೆಕ್‌ ಮಹಿಂದ್ರಾ, ಝೊಮ್ಯಾಟೋ, ಪೇಟಿಎಂ, ನೈಕಾ ಕಂಪನಿಗಳ ಷೇರು ಹೆಚ್ಚು ಪತನಗೊಂಡವು.

ಕಳೆದ 5 ದಿನಗಳಲ್ಲಿ ಭಾರತದ ಷೇರು ಮಾರುಕಟ್ಟೆಸುಮಾರು 3300 ಅಂಕಗಳಷ್ಟು ಪತನಗೊಂಡಿದ್ದು, ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿದೆ. ಪರಿಣಾಮ ಹೂಡಿಕೆದಾರರ 19.50 ಲಕ್ಷ ಕೋಟಿ ರು. ಸಂಪತ್ತು ಕರಗಿಹೋಗಿದೆ. ಅತ್ತ ಜಾಗತಿಕ ಮಾರುಕಟ್ಟೆಯಲ್ಲೂ ಷೇರು ಮಾರುಕಟ್ಟೆಗಳು ಒಂದೇ ಸಮನೆ ಕುಸಿಯುತ್ತಿವೆ. ಅಮೆರಿಕ, ಏಷ್ಯಾ, ಯುರೋಪ್‌ನ ಬಹುತೇಕ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕ ಭಾರಿ ಪ್ರಮಾಣದಲ್ಲಿ ಕುಸಿದಿದೆ.

Sensex crashes ದೇಶದಲ್ಲಿ ಓಮಿಕ್ರಾನ್ ಹೆಚ್ಚಳದ ಆತಂಕ, ಸೆನ್ಸೆಕ್ಸ್‌ 1189 ಅಂಕಗಳ ಮಹಾಪತನ

ಏಕೆ ದಿಢೀರ್‌ ಪತನ?: ಅಮೆರಿಕದ ರಿಸರ್ವ್ ಬ್ಯಾಂಕ್‌ನ ಮಹತ್ವದ ಸಭೆ ಈ ವಾರ ನಡೆಯುವುದಿದೆ. ಹಣದುಬ್ಬರ ನಿಯಂತ್ರಣಕ್ಕೆ ಆ ಸಭೆಯಲ್ಲಿ ಬಡ್ಡಿ ದರಗಳನ್ನು ದೊಡ್ಡ ಪ್ರಮಾಣದಲ್ಲಿ ಏರಿಳಿತ ಮಾಡಬಹುದು ಎಂಬ ನಿರೀಕ್ಷೆಯಿದೆ. ಆ ಆತಂಕದಿಂದ ಜಗತ್ತಿನಾದ್ಯಂತ ಹೂಡಿಕೆದಾರರು ಷೇರುಗಳನ್ನು ಮಾರುತ್ತಿದ್ದಾರೆ. ಇನ್ನು, ಕೇಂದ್ರ ಬಜೆಟ್‌ನಲ್ಲಿ ಬದಲಾಗಬಹುದಾದ ಆರ್ಥಿಕ ನೀತಿಗಳು ಮತ್ತು ಇಳಿಕೆಯಾದ ಕಳೆದ ತ್ರೈಮಾಸಿಕದ ಫಲಿತಾಂಶದಿಂದಾಗಿಯೂ ಭಾರತದಲ್ಲಿ ಷೇರು ಸೂಚ್ಯಂಕ ಕುಸಿಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಷೇರು ಹೂಡಿಕೆದಾರರಿಗೆ ಆತಂಕ: ಒಮಿಕ್ರಾನ್ ಭೀತಿ ಭಾರತದ ಷೇರುಮಾರುಕಟ್ಟೆ ಮೇಲೆ ಕಳೆದ ಕೆಲವು ದಿನಗಳಿಂದ ಪ್ರಭಾವ ಬೀರುತ್ತಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರೋದು ಆತಂಕ ಸೃಷ್ಟಿಸುತ್ತಿದ್ದು, ಪ್ರಾರಂಭದ ವಹಿವಾಟಿನಲ್ಲೇ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 1000 ಪಾಯಿಂಟ್ ಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ದಿನದ ಪ್ರಾರಂಭದಲ್ಲಿ 1,182.53 ಪಾಯಿಂಟ್ಸ್ ಅಂದ್ರೆ ಶೇ.2.3ಕ್ಕಿಂತ ಕೆಳಗೆ ಕುಸಿತ ಕಂಡ ಸೆನ್ಸೆಕ್ಸ್ 55,829.21ಕ್ಕೆ ಇಳಿಕೆ ಕಂಡಿತು.

ನಿಫ್ಟಿ 50 ಸೂಚ್ಯಂಕಕ್ಕಿಂತ ಕೆಳಗೆ 366 ಅಂಕಗಳಷ್ಟು ಇಳಿಕೆ ಕಂಡುಬಂದು 16,618ರಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಸೆನ್ಸೆಕ್ಸ್ 889.40 ಪಾಯಿಂಟ್ಸ್ ಅಂದ್ರೆ ಶೇ.1.54ರಷ್ಟು ಕುಸಿತ ಕಂಡು 57,011.74 ಪಾಯಿಂಟ್ಸ್​ಗೆ ಇಳಿಕೆಯಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ಡಿಸೆಂಬರ್ ತಿಂಗಳಲ್ಲಿ ಈ ತನಕ 17,696 ಕೋಟಿ ರೂ. ಸಂಪಾದಿಸಿದ್ದಾರೆ. 

ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಸಿದ ಸಿಗರೇಟ್ ಕಂಪನಿ, 2 ವಾರದಲ್ಲಿ ಹಣ ಡಬಲ್!

ಪರಿಣಾಮ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತ ದಾಖಲಾಗಿದ್ದು, ಆರ್ ಬಿಐಅಂಕಿಅಂಶಗಳು ಇದನ್ನು ದೃಢಪಡಿಸಿವೆ ಕೂಡ. ತಜ್ಞರ ಪ್ರಕಾರ ಇನ್ನೂ ಕೆಲವು ದಿನಗಳ ತನಕ ಷೇರು ಸಂವೇದಿ ಸೂಚ್ಯಂಕ ಇಳಿಕೆ ದಾಖಲಿಸಿದೆ. ಜೆಎಸ್ಡಬ್ಲ್ಯೂ, ಸ್ಟೀಲ್ , ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್ , ಎಸ್ ಬಿಐ, ಟಾಟಾ ಮೋಟಾರ್ಸ್, ಬಿಪಿಸಿಎಲ್ ಸೋಮವಾರ ನಷ್ಟ ಅನುಭವಿಸಿರೋ ಪಟ್ಟಿಯಲ್ಲಿರೋ ಪ್ರಮುಖ ಕಂಪನಿಗಳು. ಇನ್ನು ಸನ್ ಫಾರ್ಮಾದ ಷೇರುಗಳು ಮಾತ್ರ ಈ ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಲಾಭ ಗಳಿಸಿವೆ.