ಖಾಸಗಿ ಸಂಸ್ಥೆಯೊಂದು ಹಸು ಹಾಲನ್ನು ಲೀ.ಗೆ 120 ರು.ನಂತೆ ಮಾರಲು ಮುಂದಾಗಿದೆ. ಪರಾಗ್ ಮಿಲ್ಕ್ ಫುಡ್ಸ್ ಲಿ. ಎಂಬ ಖಾಸಗಿ ಕಂಪನಿ ಮಹಾರಾಷ್ಟ್ರದ ಪುಣೆಯಿಂದ ದಿಲ್ಲಿಗೆ ವಿಮಾನದ ಮೂಲಕ ಹಾಲು ಕಳಿಸಿ 120 ರುಗೆ ಮಾರಲು ನಿರ್ಧರಿಸಿದೆ.
ನವದೆಹಲಿ: ಹಾಲಿನ ಬೆಲೆ ಲೀ.ಗೆ 30, 35 ರು. ದಾಟಿದಾಗಲೇ ಜನ ಸರ್ಕಾರಗಳನ್ನು ದೂರೋದು ಸಾಮಾನ್ಯ. ಆದರೆ ಖಾಸಗಿ ಸಂಸ್ಥೆಯೊಂದು ಹಸು ಹಾಲನ್ನು ಲೀ.ಗೆ 120 ರು.ನಂತೆ ಮಾರಲು ಮುಂದಾಗಿದೆ.
ಹೌದು. ಪರಾಗ್ ಮಿಲ್ಕ್ ಫುಡ್ಸ್ ಲಿ. ಎಂಬ ಖಾಸಗಿ ಕಂಪನಿ ಮಹಾರಾಷ್ಟ್ರದ ಪುಣೆಯಲ್ಲಿ ಅತ್ಯಾಧುನಿಕ ಹಾಲಿನ ಡೈರಿ ಹೊಂದಿದೆ.
ಈ ಅತ್ಯಾಧುನಿಕ ಡೈರಿಯಿಂದ ನೇರವಾಗಿ ದೆಹಲಿಗೆ ವಿಮಾನದಲ್ಲಿ ಹಾಲು ಸಾಗಿಸಿ ಅಲ್ಲಿ ಲೀ.ಗೆ 120 ರು.ನಂತೆ ಮಾರಲು ನಿರ್ಧರಿಸಿದೆ.
