ಇಂದಿನಿಂದ ಹೊಸ 50 ರೂ. ನೋಟುಗಳ ಚಲಾವಣೆ| ಹೊಸ ಮಾದರಿಯ 50 ರೂ ಕರೆನ್ಸಿ ನೋಟು ಬಿಡುಗಡೆ ಮಾಡಿದ ಆರ್‌ಬಿಐ| ಗಾತ್ರ ಮತ್ತುಯ ಅಳತೆಯಲ್ಲಿ ಹಳೆಯ ನೋಡಿಗಿಂತ ಭಿನ್ನ| ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಸಹಿಯುಳ್ಳ ಹೊಸ 50 ರೂ. ನೋಟುಗಳು| ಹಳೆಯ ನೋಟುಗಳೂ ಚಲಾವಣೆಯಲ್ಲಿರುತ್ತವೆ ಎಂದು ಸ್ಪಷ್ಟಪಡಿಸಿದ ಆರ್‌ಬಿಐ|
ನವದೆಹಲಿ(ಏ.17): ಹೊಸ 50 ರೂ. ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಹಳೆಯ 50 ರೂ. ನೋಟಿನ ಬದಲಾಗಿ ಅಳತೆ ಮತ್ತು ಗಾತ್ರದಲ್ಲಿ ವಿಭಿನ್ನವಾಗಿರುವ ಹೊಸ 50 ರೂ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿದೆ.
ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಅವರ ಸಹಿಯುಳ್ಳ ಹೊಸ 50 ರೂ. ಕರೆನ್ಸಿ ನೋಟುಗಳನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಗಾತ್ರ ಮತ್ತು ಅಳತೆಯಲ್ಲಿ ಭಿನ್ನತೆ ಹೊಂದಿದ್ದರೂ ಫೀಚರ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ. ಹಳೆಯ ನೋಟುಗಳ ಮೇಲೆ ಆರ್‌ಬಿಐ ಮಾಜಿ ಮುಖ್ಯಸ್ಥ ಊರ್ಜಿತ್ ಪಟೇಲ್ ಸಹಿ ಇದ್ದರೆ. ಹೊಸ ನೋಟುಗಳ ಮೇಲೆ ಪ್ರಸಕ್ತ ಆರ್ ಬಿಐ ಮುಖ್ಯಸ್ಥರ ಸಹಿ ಇದೆ.
ಇದೇ ವೇಳೆ ಹಳೆಯ ನೋಟುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆರ್‌ಬಿಐ, ಹೆಚ್ಚಿನ ಪ್ರಮಾಣದಲ್ಲಿ ಹೊಸ ನೋಟುಗಳ ಮುದ್ರಣಕ್ಕೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
