ಆರ್ಬಿಐ ಬುಧವಾರ ತನ್ನ ಬೆಂಚ್ಮಾರ್ಕ್ ಬಡ್ಡಿ ದರವನ್ನು ಶೇಕಡಾ 5.50 ಕ್ಕೆ ಹೆಚ್ಚಿಸಿದೆ. 2023ರ ಫೆಬ್ರವರಿ ಬಳಿಕ ಇದು ಮೊದಲ ಬಾರಿ ರೆಪೋ ದರ ಹೆಚ್ಚಿಸಿದ್ದು, ಇದರಿಂದ ಸಾಲಗಾರರ ಜೇಬಿಗೆ ಎಷ್ಟು ಕತ್ತರಿ ಬೀಳಲಿದೆ ಗೊತ್ತಾ?

ಆರ್ಬಿಐ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿ ಶೇಕಡಾ 5.50ಗೆ ಏರಿಕೆ ಮಾಡಿದೆ. ಆರ್‌ ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೆ ಹಲವು ಪ್ರಮುಖ ಬ್ಯಾಂಕ್ಗಳು ತಮ್ಮ ಬಡ್ಡಿ ದರವನ್ನು ಹೆಚ್ಚಿಸಿವೆ. ಬ್ಯಾಂಕ್ಗಳಿಂದ ಹೊಸದಾಗಿ ಲೋನ್ ಪಡೆಯುವವರಿಗೆ ಮಾತ್ರವಲ್ಲದೆ, ರೆಪೋ ದರಕ್ಕೆ ಲಿಂಕ್ ಆಗಿರುವ ಹಳೆಯ ಸಾಲಗಳ ಇಎಂಐ (EMI) ಮೇಲೂ ಇದು ಪರಿಣಾಮ ಬೀರಲಿದೆ. ಯಾವ ಬ್ಯಾಂಕ್‌ ಎಷ್ಟು ಬಡ್ಡಿ ಏರಿಕೆ ಮಾಡಿದೆ ಎಂಬ ವಿವರ ಇಲ್ಲಿದೆ.

ಯಾವೆಲ್ಲಾ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಿಸಿವೆ?

ಬ್ಯಾಂಕ್ ಆಫ್ ಇಂಡಿಯಾ :

ರೆಪೋ ದರ ಏರಿಕೆಯ ಬಳಿಕ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೋ ಆಧಾರಿತ ಸಾಲದ ದರವನ್ನು ಅಂದರೆ RBLR ಅನ್ನು ಶೇಕಡಾ 8.10 ರಿಂದ ಶೇಕಡಾ 8.35ಕ್ಕೆ ಹೆಚ್ಚಿಸಿದೆ. ಈ ಹೊಸ ದರ ಅಕ್ಟೋಬರ್ 7ರಿಂದಲೇ ಜಾರಿಗೆ ಬಂದಿದೆ. ರೆಪೋ ದರಕ್ಕೆ ಲಿಂಕ್ ಆಗಿರುವ ಸಾಲ ಪಡೆದಿರುವ ಗ್ರಾಹಕರ ಇಎಂಐ ಹೆಚ್ಚಾಗಬಹುದು ಅಥವಾ ಸಾಲದ ಅವಧಿ ಹೆಚ್ಚಾಗಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್:

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ತನ್ನ ರೆಪೊ ಲಿಂಕ್ಡ್ ಲೆಂಡಿಂಗ್ ದರ ಅಂದರೆ RLLR ಅನ್ನು ಶೇಕಡಾ 8.10 ರಿಂದ ಶೇಕಡಾ 8.35ಕ್ಕೆ ಹೆಚ್ಚಿಸಿದೆ. ಈ ಹೊಸ ದರ ಅಕ್ಟೋಬರ್ 8 ಅಂದ್ರೆ ಇಂದಿನಿಂದ ಜಾರಿಗೆ ಬರಲಿದೆ. ಆದರೆ MCLR ಮತ್ತು ಬೇಸ್‌ ರೇಟ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇಂಡಿಯನ್ ಬ್ಯಾಂಕ್:

ಇಂಡಿಯನ್ ಬ್ಯಾಂಕ್ ತನ್ನ ರೆಪೊ ಲಿಂಕ್ಡ್ ಬೆಂಚ್ಮಾರ್ಕ್ ಸಾಲ ದರವನ್ನು ಶೇಕಡಾ 7.95 ರಿಂದ ಶೇಕಡಾ 8.20ಕ್ಕೆ ಹೆಚ್ಚಿಸಿದೆ. ಈ ಹೊಸ ದರ ಕೂಡ ಅಕ್ಟೋಬರ್ 8ರಿಂದ ಜಾರಿಗೆ ಬಂದಿದೆ.

ಇಂಡಿಯನ್ ಓವರ್ಸೀಸ್ ಬ್ಯಾಂಕ್:

ಇಂಡಿಯನ್ ಓವರ್ಸೀಸ್ ಬ್ಯಾಂಕ್ (Indian Overseas Bank) ಕೂಡ ತನ್ನ ರೆಪೋ ಆಧಾರಿತ ಸಾಲ ದರ ಅನ್ನು ಹೆಚ್ಚಿಸಿದ್ದು, ಅಕ್ಟೋಬರ್ 8 ರಿಂದ RBLR ಶೇಕಡಾ 8.35ರಷ್ಟಾಗಿದೆ.

ಬ್ಯಾಂಕ್ ಆಫ್ ಬರೋಡಾ:

ಬ್ಯಾಂಕ್ ಆಫ್ ಬರೋಡಾ ತನ್ನ ರೆಪೋ ಆಧಾರಿತ ಸಾಲ ದರ ಅನ್ನು ಶೇಕಡಾ 7.90 ರಿಂದ ಶೇಕಡಾ 8.15 ಕ್ಕೆ ಹೆಚ್ಚಿಸಿದೆ. ಅಂದರೆ 25 ಬೇಸಿಸ್ ಪಾಯಿಂಟ್ಗಳಷ್ಟು ಏರಿಕೆ ಮಾಡಿದೆ. ಬ್ಯಾಂಕ್‌ ಗಳು ದರ ಏರಿಕೆ ಮಾಡಿದ್ದರಿಂದ ರೆಪೋ ದರಕ್ಕೆ ಲಿಂಕ್ ಆಗಿರುವ ಹೋಮ್ ಲೋನ್, ಕಾರ್ ಲೋನ್ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ ಹೆಚ್ಚಾಗುವ ಸಾಧ್ಯತೆ ಇದೆ.