ಆನ್‌ಲೈನ್ ಶಾಂಪಿಂಗ್ ಇದೀಗ ಭಾರತದ ಸೇಲ್ಸ್ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿದೆ. ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳು ಇದರಲ್ಲಿ ಅಗ್ರಗಣ್ಯ. ಇದೀಗ ಈ ಆನ್‌ಲೈನ್ ಸೇಲ್ಸ್ ಕಂಪೆನಿಗಳಿಗೆ ಸೆಡ್ಡುಹೊಡೆಯಲು ರಿಲಾಯನ್ಸ್ ಎಂಟ್ರಿ ಕೊಡುತ್ತಿದೆ. ಇಲ್ಲಿದೆ ರಿಲಯನ್ಸ್ ಆನ್‌ಲೈನ್ ಶಾಂಪಿಂಗ್ ಮಾಹಿತಿ.

ಕೋಲ್ಕತ್ತಾ(ಜು.30): ಜಿಯೋ ಸಿಮ್ ಬಿಡುಗಡೆ ಮಾಡೋ ಮೂಲಕ ಏರ್‌ಟೆಲ್, ವೋಡಾಫೋನ್ ಸೇರಿದಂತೆ ಎಲ್ಲಾ ಕಂಪೆನಿಗಳಿಗೆ ಭಾರಿ ಹೊಡೆತ ನೀಡಿದ ರಿಲಯನ್ಸ್ ಇದೀಗ ಆನ್‌ಲೈನ್ ಶಾಪಿಂಗ್ ಕಡೆ ಚಿತ್ತ ಹರಿಸಿದೆ. ಭಾರತದಲ್ಲಿ ಆನ್‌ಲೈನ್ ಸೇಲ್‌ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ರಿಲಯನ್ಸ್ ತಯಾರಿ ಆರಂಭಿಸಿದೆ.

ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳು ಆರ್ಭಟಕ್ಕೆ ಬ್ರೇಕ್ ಹಾಕಲು ಇದೀಗ ರಿಲಾಯನ್ಸ್ ರಿಟೇಲ್ ಸಿದ್ಧವಾಗಿದೆ. ಇದೀಗ ರಿಲಾಯನ್ಸ್ ಹೊಸದಾಗಿ ರಿಲಾಯನ್ಸ್ ರಿಟೇಲ್ ಆನ್‌ಲೈನ್ ಶಾಪಿಂಗ್ ಆರಂಭಿಸುತ್ತಿದೆ. ರಿಲಯನ್ಸ್ ರಿಟೇಲ್ ಈಗಾಗಲೇ ಪ್ರತಿ ನಗರಗಳಲ್ಲಿ ಮಳಿಗೆ ಹೊಂದಿದೆ. ಭಾರತದಲ್ಲಿ ಓಟ್ಟು 305 ರಿಲಾಯನ್ಸ್ ಮಳಿಗೆ ಹಾಗೂ 4530 ಜಿಯೋ ಸೆಂಟರ್‌ಗಳಿವೆ. ಎಲೆಕ್ಟ್ರಾನಿಕ್ಸ್, ಫ್ಯಾಶನ್, ಉಡುಪುಗಳು, ತಿನಿಸುಗಳು ಸೇರಿದಂತೆ ಎಲ್ಲಾ ವಸ್ತುಗಳ ಈ ಮಳಿಗೆಗಳಲ್ಲಿ ಲಭ್ಯವಿದೆ.

ರಿಲಯನ್ಸ್ ರಿಟೇಲ್ ಅಂಗಗಳಾದ ರಿಲಾಯನ್ಸ್ ಡಿಜಿಟಲ್, ರಿಲಾಯನ್ಸ್ ಟ್ರೆಂಡ್, ರಿಲಾಯನ್ಸ್ ಮಾರ್ಟ್, ರಿಲಾಯನ್ಸ್ ಫ್ರೆಶ್ ಇದೀಗ ಆನ್‌ಲೈನ್ ಸೇಲ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳ ರೀತಿಯಲ್ಲೇ ವಸ್ತುಗಳನ್ನ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ರೆಡಿಯಾಗಿದೆ.

ಜಿಯೋ ಆಫರ್ ಮೂಲಕ ಇತರ ಎಲ್ಲಾ ಸಿಮ್ ಕಂಪೆನಿಗಳಿಗೆ ಬಾರಿ ಹೊಡೆತ ನೀಡಿ ಗ್ರಾಹಕರ ಮನಸ್ಸು ಗೆದ್ದ ರಿಲಯನ್ಸ್ ಇದೇ ರೀತಿ ಆನ್‌ಲೈನ್ ಸೇಲ್ ಮಾರುಕಟ್ಟೆ ಆಕ್ರಮಿಸಿಕೊಳ್ಳೋ ಪ್ರಯತ್ನದಲ್ಲಿದೆ. ಅನ್‌ಲೈನ್‌ನಲ್ಲಿ ಖರೀದಿಸೋ ಗ್ರಾಹಕರಿಗೆ ಭಾರಿ ರಿಯಾಯಿತಿ ನೀಡಲು ರಿಲಯನ್ಸ್ ನಿರ್ಧರಿಸಿದೆ.

ಮುಂಬರುವ ದೀಪಾವಳಿ ಹಬ್ಬದ ವೇಳೆ ರಿಲಯನ್ಸ್ ರಿಟೇಲ್ ಆನ್‌ಲೈನ್ ಅಧೀಕೃತವಾಗಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ವಿಶೇಷ ಅಂದರೆ, ರಿಲಯನ್ಸ್ ರಿಟೇಲ್ ಆನ್‌ಲೈನ್ ಮೂಲಕ ಕೇವಲ ರಿಲಯನ್ಸ್ ಬ್ರ್ಯಾಂಡ್ ಮಾತ್ರವಲ್ಲ ಇತರ ಎಲ್ಲಾ ಬ್ರ್ಯಾಂಡ್‌ಗಳು ಲಭ್ಯವಿದೆ.

ಎಲ್‌ಜಿ, ಸಾಮ್ಸಂಗ್, ಸೋನಿ, ರೆಡ್ ಮಿ, ಪನಾಸೋನಿಕ್ ಸೇರಿದಂತೆ ಎಲ್ಲಾ ಬ್ರ್ಯಾಂಡ್‌ಗಳ ಎಲೆಕ್ಟ್ರಾನಿಕ್ ವಸ್ತುಗಳು ರಿಲಯನ್ಸ್ ರಿಟೇಲ್ ಆನ್‌ಲೈನ್ ಶಾಪಿಂಗ್‌ನಲ್ಲಿ ಲಭ್ಯವಾಗಲಿದೆ. ಇಷ್ಟೇ ಅಲ್ಲ, ಕಡಿಮೆ ಬೆಲೆ ಜೊತೆಗೆ ಭರ್ಜರಿ ಆಫರ್ ನೀಡಲು ರಿಲಾಯನ್ಸ್ ನಿರ್ಧರಿಸಿದೆ. ಇದು ಜಿಯೋ ರೀತಿಯಲ್ಲೇ ಇತರ ಆನ್‌ಲೈನ್ ಶಾಪಿಂಗ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.