ರಿಲಯನ್ಸ್‌ನಲ್ಲಿ ಕೆಕೆಆರ್‌ 5500 ಕೋಟಿ ರು. ಹೂಡಿಕೆ

ಅಂಬಾನಿ ನೇತೃತ್ವದ ಬೃಹತ್ ಸಂಸ್ಥೆ ರಿಲಯನ್ಸ್‌ನಲ್ಲಿ ಇದೀಗ ಸಾವಿರಾರು ಕೋಟಿ ಹೂಡಿಕೆ ಮಾಡಲು ಕೆಕೆಆರ್ ಮುಂದಾಗಿದೆ. ಎಷ್ಟು ಕೋಟಿ ಹೂಡಿಕೆಯಾಗಲಿದೆ?

Reliance Retail KKR deal  KKR invests Rs 5550 crore snr

ಮುಂಬೈ (ಸೆ.25): ಅಮೆರಿಕದ ಪ್ರಖ್ಯಾತ ಹೂಡಿಕೆ ಸಂಸ್ಥೆಗಳಲ್ಲಿ ಒಂದಾದ ಕೆಕೆಆರ್‌ ರಿಲಯನ್ಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿದೆ. 

ರಿಲಯನ್ಸ್‌ ವೆಂಚರ್ಸ್‌ ಲಿಮಿಟೆಡ್‌ನಲ್ಲಿ ಕೆಕೆಆರ್‌ 5500 ಕೋಟಿ ರು. ಹೂಡಿಕೆ ಮಾಡಿ, ಇದು ರಿಲಯನ್ಸ್‌ ರಿಟೇಲ್‌ನ ಶೇ.1.28ರಷ್ಟುಬಂಡವಾಳವನ್ನು ಕೊಂಡು ಕೊಂಡಿದೆ. 

ಈ ಹಿಂದೆ ಜಿಯೋ ಫ್ಲಾಟ್‌ಫಾರಂನಲ್ಲಿಯೂ ಕೂಡ ಕೆಕೆಆರ್‌ 11,367 ಕೋಟಿ ರು. ಹೂಡಿಕೆ ಮಾಡಿತ್ತು. ಈ ಹಿಂದೆ ರಿಲಯನ್ಸ್‌ ಜಿಯೋನಲ್ಲಿ ಗೂಗಲ್‌ 33737 ಕೋಟಿ ರು. ಹಾಗೂ ಅಮೆಜಾನ್‌ 43,574ಕೋಟಿ ರು.ಗಳನ್ನು ಹೂಡಿಕೆ ಮಾಡಿತ್ತು.

ಕೊರೋನಾ ಮಧ್ಯೆ ಏರಿದ್ದ ಚಿನ್ನ, ಬೆಳ್ಳಿ ದರ ಇಳಿಕೆ ಹಾದಿಯಲ್ಲಿ: ಇಲ್ಲಿದೆ ಸೆ.24ರ ರೇಟ್! ...

ಈಗಾಗಲೇ ರಿಲಯನ್ಸ್ ಸಂಸ್ಥೆಯಲ್ಲಿ ಭಾರೀ ಪ್ರಮಾಣದ ಹೂಡಿಕೆಗಳು ಮಾಡಲಾಗಿದ್ದು ಇದಕ್ಕೆ ಇದೀಗ ಅಮೆರಿಕಾದ ಸಂಸ್ಥೆಯೂ ಹೊಸ ಸೇರ್ಪಡೆಯಾಗಿದೆ. 

ಅಂಬಾನಿ ಒಡೆತನದ ರಿಲಯನ್ಸ್ ಮಾರುಕಟ್ಟೆ ವಿಶ್ವವ್ಯಾಪಿ ವಿಸ್ತರಿಸಿದ್ದು, ಕೊಟ್ಯಂತ ವ್ಯವಹಾರಗಳು ನಡೆಯುತ್ತವೆ. 

Latest Videos
Follow Us:
Download App:
  • android
  • ios