20 ಲಕ್ಷ ಕೋಟಿ ರೂ. ದಾಟಿದ ರಿಲಯನ್ಸ್ ಮಾರುಕಟ್ಟೆ ಬಂಡವಾಳ; ಈ ಸಾಧನೆ ಮಾಡಿದ ಮೊದಲ ಭಾರತೀಯ ಸಂಸ್ಥೆ, ದಾಖಲೆ ಸೃಷ್ಟಿ

ರಿಲಯನ್ಸ್ ಮಾರುಕಟ್ಟೆ ಬಂಡವಾಳ 20 ಲಕ್ಷ ಕೋಟಿ ರೂ. ದಾಟಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಸಂಸ್ಥೆ ಎಂಬ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. 

Reliance makes history becomes 1st Indian firm to cross Rs 20 lakh crore market cap anu

ನವದೆಹಲಿ (ಫೆ.13): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಮಾರುಕಟ್ಟೆ ಬಂಡವಾಳ ಮಂಗಳವಾರ  20 ಲಕ್ಷ ಕೋಟಿ ರೂ. ದಾಟಿದೆ. ಈ ಮೂಲಕ ಮಾರುಕಟ್ಟೆ ಬಂಡವಾಳದಲ್ಲಿ 20 ಲಕ್ಷ ಕೋಟಿ ರೂ. ಗಡಿ ದಾಟಿದ ಮೊದಲ ಭಾರತೀಯ ಕಂಪನಿ  ಎಂಬ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದೆ. ಕಚ್ಚಾ ತೈಲದಿಂದ ಹಿಡಿದು ದೂರಸಂಪರ್ಕದ ತನಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ 52 ವಾರಗಳ ಅತ್ಯಧಿಕ ಮಟ್ಟ  2,958ರೂ. ತಲುಪಿದ ಬಳಿಕ ಈ ಸಾಧನೆ ಮಾಡಿದೆ. ರಿಲಯನ್ಸ್ ಷೇರಿನ ಬೆಲೆಯಲ್ಲಿ ಸುಮಾರು ಶೇ.2ರಷ್ಟು ಏರಿಕೆಯಾಗಿದೆ. ಆರ್ ಐಎಲ್ ಷೇರುಗಳ ಬೆಲೆ ಬಾಂಬೈ ಷೇರು ವಿನಿಮಯ (ಬಿಎಸ್ ಇ) ಕೇಂದ್ರದಲ್ಲಿ ಶೇ.1.88ರಷ್ಟು ಏರಿಕೆ ಕಂಡು  2,957.80ರೂ. ತಲುಪಿದೆ. ಆರ್ ಐಎಲ್ ಮಾರುಕಟ್ಟೆ ಬಂಡವಾಳದಲ್ಲಿನ ಇತ್ತೀಚಿನ ಹೆಚ್ಚಳ ಮುಖೇಶ್ ಅಂಬಾನಿ ಅವರ ಸಂಪತ್ತಿನ ಹೆಚ್ಚಳಕ್ಕೆ ಕೂಡ ಕಾರಣವಾಗಿದೆ. ಅಂಬಾನಿ ಸಂಪತ್ತು ಈಗ 109 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ 2024ನೇ ಸಾಲಿನಲ್ಲೇ 12.5 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಅನ್ವಯ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ 11ನೇ ಸ್ಥಾನದಲ್ಲಿದ್ದಾರೆ. 

ಕಳೆದ ಒಂದು ದಶಕದಲ್ಲಿ ರಿಲಯನ್ಸ್ ತನ್ನ ಉದ್ಯಮವನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದೆ. ಕಚ್ಚಾ ತೈಲ ಹಾಗೂ ಅನಿಲ ಕ್ಷೇತ್ರದಿಂದ ಹಿಡಿದು ಡಿಜಿಟಲ್ ಸೇವೆಗಳು ಹಾಗೂ ರಿಟೇಲ್ ಮಾರುಕಟ್ಟೆ ತನಕ ರಿಲಯನ್ಸ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ರಿಲಯನ್ಸ್ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದು ಹೇಳಬಹುದು. 5ಜಿ ಮೂಲಸೌಕರ್ಯದ ಮೇಲೆ ರಿಲಯನ್ಸ್ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ ಎಂದು ಬ್ರೋಕರೇಜ್ ಸಂಸ್ಥೆ ಬಿಎನ್ ಪಿ ಪರಿಭಾಷ್ ತಿಳಿಸಿದೆ. 

ಅತ್ಯಂತ ಹೆಚ್ಚು ಆದಾಯವಿರೋ ಕಂಪನಿಗಳ ಪಟ್ಟಿ ಬಿಡುಗಡೆ, ರಿಲಯನ್ಸ್ ಟಾಪ್‌, ಕರ್ನಾಟಕದ ನವೋದ್ಯಮವೇ ಪ್ರಾಬಲ್ಯ!

ಕಳೆದ ವರ್ಷ ಮುಖೇಶ್ ಅಂಬಾನಿ ತಮ್ಮ ಮೂವರು ಮಕ್ಕಳಿಗೆ ಉದ್ಯಮದ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದರು. ಮೂವರಿಗೂ ಆರ್ ಐಎಲ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳನ್ನು ನೀಡಿದ್ದರು. ಆಕ್ಸಿಸ್ ಬ್ಯಾಂಕ್‌ನ ಖಾಸಗಿ ಬ್ಯಾಂಕಿಂಗ್ ಘಟಕಗಳಾದ ಬರ್ಗಂಡಿ ಪ್ರೈವೇಟ್ ಮತ್ತು ಹುರುನ್ ಇಂಡಿಯಾ ಜಂಟಿಯಾಗಿ ಇತ್ತೀಚೆಗೆ ಬಿಡುಗಡೆ ಮಾಡಿರುವ  ಭಾರತದ ಗರಿಷ್ಠ ಮೌಲ್ಯದ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಮೊದಲ ಸ್ಥಾನ ಅಗ್ರಸ್ಥಾನ ಅಲಂಕರಿಸಿದೆ.

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ವಿಶ್ವದ ಅತಿದೊಡ್ಡ ಪೆಟ್ರೋಲಿಯಂ ಸಂಸ್ಕರಣಾಗಾರವಾಗಿದೆ. ವಿಶ್ವದ ಅತಿದೊಡ್ಡ ತಳಮಟ್ಟದ ಪೆಟ್ರೋಕೆಮಿಕಲ್ ಸಂಕೀರ್ಣವನ್ನು ನಿರ್ವಹಿಸುವುದರಲ್ಲಿ ದಾಖಲೆಗಳನ್ನು ಸ್ಥಾಪಿಸುವ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅಂಬಾನಿ ಗ್ರೂಪ್‌ನ ಈ ಉದ್ಯಮ ಅತಿ ಹೆಚ್ಚು ಲಾಭವನ್ನು ಸಹ ಗಳಿಸುತ್ತಿದೆ.

ನೆಟ್‌ಫ್ಲಿಕ್ಟ್‌, ಅಮೆಜಾನ್‌ ಪ್ರೈಂಗೆ ಭರ್ಜರಿ ಪೈಪೋಟಿ; ಬೃಹತ್ OTT ಒಪ್ಪಂದಕ್ಕೆ ಸಹಿ ಹಾಕಲಿರುವ ಮುಕೇಶ್ ಅಂಬಾನಿ!

2023ನೇ ಸಾಲಿನ ಅಕ್ಟೋಬರ್ ನಲ್ಲಿ ತ್ರೈಮಾಸಿಕ ಲಾಭಾಂಶದ ವರದಿ ಬಿಡುಗಡೆಯಾದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಷೇರುಗಳಲ್ಲಿ ಶೇ.22ರಷ್ಟು ಇಳಿಕೆ ಕಂಡುಬಂದಿತ್ತು. ಮುಖೇಶ್ ಅಂಬಾನಿ ಕಂಪನಿಯಲ್ಲಿ ಶೇ.42ರಷ್ಟು ಷೇರುಗಳನ್ನು ಹೊಂದಿದ್ದಾರೆ. ಷೇರು ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಅಂಬಾನಿ ಅವರ ನಿವ್ವಳ ಸಂಪತ್ತಿನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2024ರ ಜನವರಿಯಲ್ಲಿ ಮುಖೇಶ್ ಅಂಬಾನಿ ಭಾರತ ಹಾಗೂ ಏಷ್ಯಾದ ನಂ.1 ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಇದೇ ಅವಧಿಯಲ್ಲಿ ಅಂಬಾನಿ ಅವರ ನಿವ್ವಳ ಸಂಪತ್ತು 100 ಶತಕೋಟಿ ಡಾಲರ್ ದಾಟಿದೆ. ಈ ಮೂಲಕ ಅವರು ಸೆಂಟಿಬಿಲಿಯನೇರ್ ಕೂಡ ಆಗಿದ್ದಾರೆ. 

Latest Videos
Follow Us:
Download App:
  • android
  • ios