ಎದುರಾಳಿ ಟೆಲಿಕಾಂ ಕಂಪನಿಗಳು ಶೇಕ್ ಆಗುವಂತಹ ಪ್ಲಾನ್ ಘೋಷಿಸಿದ ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ಎದುರಾಳಿಗಳು ಶೇಕ್ ಆಗುವಂತಹ ಯೋಜನೆಗಳನ್ನು ಕಡಿಮೆ ಬೆಲೆ ಮತ್ತು ಅತ್ಯಧಿಕ ಬೆನೆಫಿಟ್ ಘೋಷಣೆ ಮಾಡುತ್ತಿವೆ. 200 ರೂಪಾಯಿಗೂ ಕಡಿಮೆ ಬೆಲೆಯ ಜಿಯೋ ಪ್ಲಾನ್ ಹೊರ ಬಂದಿದೆ.

Reliance Jio Rs 198 Prepaid Plan Offers Unlimited 5G Data mrq

ಮುಂಬೈ: ರಿಲಯನ್ಸ್ ಜಿಯೋ ಕಂಪನಿ ತನ್ನ ಎದುರಾಳಿ ಟೆಲಿಕಾಂ ಕಂಪನಿಗಳು ಶೇಕ್‌ ಆಗುವಂತಹ ಪ್ಲಾನ್ ಘೋಷಿಸಿದೆ. ಕೇವಲ 198 ರೂಪಾಯಿಯ 14 ದಿನ ವ್ಯಾಲಿಡಿಟಿಯ ಪ್ಲಾನ್ ಘೋಷಣೆ ಮಾಡಿದೆ. ನೀವು 198 ರೂಪಾಯಿ ರೀಚಾರ್ಜ್‌ ಮಾಡಿಕೊಂಡರೆ ನಿಮಗೆ ಅನಿಯಮಿತ ಕರೆಗಳ ಸೌಲಭ್ಯದ ಜೊತೆ ಡೇಟಾ ಹಾಗೂ ಎಸ್‌ಎಂಎಸ್ ಸಹ ಸಿಗಲಿವೆ. ಜಿಯೋ ಬಳಕೆದಾರರಿಗೆ ಒಳ್ಳೆಯ ಪ್ಲಾನ್ ಇದಾಗಿದ್ದು, ಇದರ ಹೊರತಾಗಿಯೂ ಹಲವು ಆಯ್ಕೆಗಳು ನಿಮಗೆ ಸಿಗುತ್ತವೆ. ಜಿಯೋದಲ್ಲಿ 189 ರೂ. ಮತ್ತು 199 ರೂ. ಪ್ಲಾನ್ ಇವೆ. ಈ ಎರಡೂ ಆಫರ್‌ನಲ್ಲಿ ಅನಿಯಮಿತ ಕರೆಗಳ ಜೊತೆ ಹಲವು ಆಫರ್‌ಗಳನ್ನು ನೀಡಲಾಗಿದೆ. 

ಯಾವ ಆಫರ್‌ಗಳು ಕಡಿಮೆ ಮತ್ತು  ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಬಳಕೆದಾರರು ಕೇಳುತ್ತಿರುತ್ತಾರೆ. ಇಂದು ನಾವು ನಿಮಗೆ ಜಿಯೋ ನೀಡುತ್ತಿರುವ ಮೂರು ಆಫರ್‌ಗಳ ಬಗ್ಗೆ ಹೇಳುತ್ತಿದ್ದೇವೆ. ಇದರಿಂದ ಯಾವ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ನಿಮ್ಮ ಬಳಕೆಗನುಗುಣವಾಗಿ ಕಡಿಮೆ ಬೆಲೆಯ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. 

ಕಡಿಮೆ ಬೆಲೆಯ ಪ್ಲಾನ್
ನೀವು ಕಡಿಮೆ ಬೆಲೆಯ ಪ್ಲಾನ್ ಹುಡುಕುತ್ತಿದ್ದರೆ 198 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬಹುದು. ಈ ಪ್ಲಾನ್‌ನಲ್ಲಿ ಅನಿಯಮಿತ ಕರೆಯ ಸೌಲಭ್ಯ ಇರುತ್ತದೆ. ಸೋಶಿಯಲ್ ಮೀಡಿಯಾ, ವಿಡಿಯೋ ನೋಡಲು ಪ್ರತಿದಿನ 2 ಜಿಬಿ ಡೇಟಾ ಸಿಗಲಿದೆ. ಜಿಯೋ ಆಪ್ ಮೂಲಕ ಹಲವು ವಾಹಿನಿಗಳನ್ನು ಲೈವ್ ವೀಕ್ಷಿಸಬಹುದು. ಜಿಯೋ ಆಪ್ ಸಬ್‌ಸ್ಕ್ರಿಪ್ಷನ್ ಉಚಿತವಾಗಿರಲಿದೆ. ಈ ಪ್ಲಾನ್ ವ್ಯಾಲಿಡಿಟಿ 14 ದಿನ ಇರುತ್ತದೆ. 

ಎರಡನೇ ಆಯ್ಕೆ 
14 ದಿನದ ವ್ಯಾಲಿಡಿಟಿ ಕಡಿಮೆ ಅಂತ ಅನ್ನಿಸಿದ್ರೆ 18 ದಿನದ  199 ರೂಪಾಯಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಈ ಪ್ಲಾನ್‌ನಲ್ಲಿಯೂ ನಿಮಗೆ ಹಲವು ಲಾಭ ಸಿಗಲಿವೆ. 189 ರೂಪಾಯಿ ಹೆಚ್ಚು ಜನಪ್ರಿಯವಾಗಿದ್ದು, ಇದು 28 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 2 ಜಿಬಿ ಡೇಟಾ ಸಿಗಲಿದೆ.

ಮುಕೇಶ್ ಅಂಬಾನಿ ರಚಿಸಿದ ರಣವ್ಯೂಹದಲ್ಲಿ ಏರ್‌ಟೈಲ್? ತನ್ನ ಎದುರಾಳಿಗೆ ಟಕ್ಕರ್ ಕೊಟ್ಟ ಜಿಯೋ!

ನೀವು ಹೇಗೆ ಮೊಬೈಲ್ ಬಳಕೆ ಮಾಡುತ್ತೀರಿ ಎಂಬುದರ ಮೇಲೆ ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅತಿ ಹೆಚ್ಚು ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ರೆ ಡೇಟಾಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಜಿಯೋ ನೀಡುವ ಎಲ್ಲಾ ಪ್ಲಾನ್‌ಗಳಲ್ಲಿ ಅನಿಯಮಿತ ಕಾಲ್, 100 ಎಸ್‌ಎಂಎಸ್ ಕಾಮನ್ ಆಗಿದೆ. ಇಂಟರ್‌ನೆಟ್ ಎಷ್ಟು ಬೇಕಾಗುಬಹುದು ಎಂಬುವುದು ನಿಮ್ಮ ಬಳಕೆ ಮೇಲೆ ನಿರ್ಧರಿತವಾಗುತ್ತದೆ. ಇದನ್ನು ಹೊರತುಪಡಿಸಿಯೂ ಜಿಯೋ ಹೆಚ್ಚುವರಿ ಡೇಟಾ ರೀಚಾರ್ಜ್ ಅವಕಾಶವನ್ನು ನೀಡುತ್ತದೆ.

ಜಿಯೋ 5ಜಿ ಸೇವೆಯನ್ನು ನೀಡುತ್ತಿದೆ. ಸಮಯ ಬದಲಾದಂತೆ ನೀವು ಹೊಸ ಹೊಸ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಡಿಮೆ ಸಮಯದ ಉತ್ತಮ ಡೇಟಾ ಪ್ಲಾನ್‌ಗಾಗಿ ಜನರು 198 ರೂಪಾಯಿ ಪ್ಲಾನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ರತನ್ ಟಾಟಾಗೆ ಮುಕೇಶ್ ಅಂಬಾನಿ ಸವಾಲು; Zudioಗೆ ಟಕ್ಕರ್ ಕೊಡುತ್ತಾ ರಿಲಯನ್ಸ್ ?

Latest Videos
Follow Us:
Download App:
  • android
  • ios