ರಿಲಯನ್ಸ್ ಜಿಯೋ, ಕ್ರಾಫ್ಟನ್ ಇಂಡಿಯಾ ಜೊತೆಗೂಡಿ BGMI ಗೇಮರ್‌ಗಳಿಗಾಗಿ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.
ಮುಂಬೈ: ದೇಶದ ನಂಬರ್ ಒನ್ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಎರಡು ಬಂಪರ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಕ್ರಾಫ್ಟನ್ ಇಂಡಿಯಾ (Krafton India) ಸಹಯೋಗದೊಂದಿಗೆ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಮೊಬೈಲ್ ಗೇಮ್ ಇಷ್ಟಪಡುವ ಬಳಕೆದಾರರಿಗೆ ಪರಿಚಯಿಸಿದೆ. ವಿಶೇಷವಾಗಿ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ (BGMI) ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ ಎರಡು ಹೊಸ ಪ್ಲಾನ್‌ಗಳನ್ನು ತಂದಿದೆ.
ಪ್ಲಾನ್ ಬೆಲೆ ಮತ್ತು ವ್ಯಾಲಿಡಿಟಿ
ಜಿಯೋ 495 ರೂಪಾಯಿ ಮತ್ತು 545 ರೂ. ಬೆಲೆಯ ಎರಡು ಪ್ರಿಪೇಯ್ಡ್ ಪ್ಲಾನ್ ತಂದಿದ್ದು, ಈ ಎರಡು ಯೋಜನೆಗಳ ವ್ಯಾಲಿಡಿಟಿ 28 ದಿನಗಳಾಗಿವೆ. ಈ ಯೋಜನೆಯಲ್ಲಿ ಹೈ ಸ್ಪೀಡ್ ಡೇಟಾದ ಆನಂದವನ್ನು ಗ್ರಾಹಕರು ಪಡೆದುಕೊಳ್ಳಬಹುದು. 495 ರೂ. ಪ್ಲಾನ್‌ನಲ್ಲಿ ಪ್ರತಿದಿನ 1.5GB ಡೇಟಾ, 5G ಬೋನಸ್ ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ಲಾಭಗಳು ಸಿಗುತ್ತದೆ. ಇನ್ನು 545 ರೂ. ಪ್ಯಾಕೇಜ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಮತ್ತು ಅನ್‌ಲಿಮಿಟೆಡ್ 5G ಡೇಟಾ ಬಳಕೆ ಮಾಡಬಹುದು.
ಏನಿದು BGMI ರಿವಾರ್ಡ್ಸ್?
ಈ ಎರಡು ಪ್ಲಾನ್‌ಗಳಲ್ಲಿ ಬಳಕೆದಾರರಿಗೆ ಎಕ್ಸ್‌ಕ್ಲೂಸಿವ್ ರಿವಾರ್ಡ್ ಕೂಪನ್ ಸಿಗುತ್ತದೆ. ಇದರಲ್ಲಿ ಬಾರ್ಡ್ಸ್ ಜರ್ನಿ ಸೆಟ್, ಡೆಸರ್ಟ್ ಟಾಸ್ಕ್‌ಫೋರ್ಸ್ ಮಾಸ್ಕ್ ಮತ್ತು ಟ್ಯಾಪ್ ಬೂಮ್ ಮೊಲೊಟೊವ್ ಕಾಕ್‌ಟೈಲ್‌ನಂತಹ ಗೇಮ್‌ಗಳಲ್ಲಿ ಸುಲಭವಾಗಿ ಭಾಗಿಯಾಗಬಹುದು.
BGMI ರಿವಾರ್ಡ್ಸ್ ಪಡೆಯೋದು ಹೇಗೆ?
ಈ ಎರಡು ರೀಚಾರ್ಜ್ ಬಳಿಕ ಗ್ರಾಹಕರಿಗೆ ಕನ್ಫರ್ಮೇಶನ್ ಮೆಸೇಜ್ ಬರುತ್ತದೆ. ತದನಂತರ MyJio ಆಪ್‌ನ Profile > Coupons & Winningsನಲ್ಲಿ ನಿಮಗೆ ರಿವಾರ್ಡ್ ಕೋಡ್ ಸಿಗುತ್ತದೆ. ಈ ಕೋಡ್‌ನ್ನು BGMIನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕೇರ್‌ಟೇಕರ್ ಐಡಿ ಜೊತೆ ಲಾಗಿನ್ ಮಾಡಬೇಕು. ಆ ನಿಮ್ಮ ಪಾಯಿಂಟ್ ರಿದೀಮ್ ಆಗುತ್ತದೆ.
JioGames Cloud ವೈಶಿಷ್ಟ್ಯ
ಬಳಕೆದಾರರು ಜಿಯೋಗೇಮ್ಸ್ ಕ್ಲೌಡ್ ಮೂಲಕ ಹೈ-ಎಂಡ್ ಡಿವೈಸ್ ಇಲ್ಲದೇ 500ಕ್ಕೂ ಅಧಿಕ ಪ್ರೀಮಿಯಮ್ ಗೇಮ್‌ಗಳನ್ನು ಆಡಬಹುದು. ಜಿಯೋಗೇಮ್ಸ್ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡು ಜಿಯೋ ಸಂಖ್ಯೆಯಿಂದಲೇ ಇದನ್ನು ಲಾಗಿನ್ ಮಾಡಿಕೊಳ್ಳಬೇಕಾಗುತ್ತದೆ. ಈ ಗೇಮ್‌ಗಳನ್ನು ಟಿವಿ, ವೆಬ್ ಬ್ರೌಸರ್ ಅಥವಾ ಸ್ಮಾರ್ಟ್‌ಫೋನ್‌ಗಳ ಮೂಲಕ ಆಡಬಹುದಾಗಿದೆ.
ಗೇಮಿಂಗ್‌ಗಾಗಿ ಭಾರತದ ಮೊದಲ ಟೆಲಿಕಾಂ ಯೋಜನೆ
ಗೇಮಿಂಗ್‌ಗಾಗಿ ಮೊದಲ ಬಾರಿಗೆ ಪರಿಚಯಿಸಿದ ಪ್ರಿಪೇಯ್ಡ್ ಪ್ಲಾನ್ ಇದಾಗಿದೆ. ರಿಲಯನ್ಸ್ ಜಿಯೋ ಗೇಮಿಂಗ್ ಮೊದಲ ಪ್ಲಾನ್ ಪರಿಚಯಿಸಿದ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ರಾಫ್ಟನ್ ಇಂಡಿಯಾ ಜೊತೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಜಿಯೋ ಗೇಮಿಂಗ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಭವಿಷ್ಯದಲ್ಲಿ ಇಂತಹ ಹೊಸ ಹೊಸ ಯೋಜನೆಗಳು ಬರುವ ಸಾಧ್ಯತೆಗಳಿವೆ.