ಮುಕೇಶ್ ಅಂಬಾನಿಗೆ ಬಿಗ್ ಶಾಕ್- 12ನೇ ಸ್ಥಾನ ಕುಸಿತ, ಹಿಂದಿಕ್ಕಿದ ಉದ್ಯಮಿ ಯಾರು?

ಭಾರತದ ಆಗರ್ಭ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ಬಿಗ್ ಶಾಕ್ ಎದುರಾಗಿದೆ. ಅಮೆರಿಕದ ಉದ್ಯಮಿಯೊಬ್ಬರು ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿದ್ದಾರೆ.

Reliance industries chief mukesh-ambani-slips-11thto-12th-place-in-worlds-richest-people-list mrq

ನವದೆಹಲಿ: ರಿಲಯನ್ಸ್ ಇಂಡಸ್ಟ್ರಿಸ್‌ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿನ ಸ್ಥಾನ ಕುಸಿತವಾಗಿದೆ. ಈ ಮೊದಲು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 11ನೇ ಸ್ಥಾನದಲ್ಲಿದ್ದರು. ಇದೀಗ 12ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಹಾಗಾದ್ರೆ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿದ್ದು ಯಾರು ಎಂಬುದರ ಮಾಹಿತಿ ಇಲ್ಲಿದೆ. 

ಅಮೆರಿಕದ ಪ್ರಮುಖ ಉದ್ಯಮಿ ಎಐ ಚಿಪ್ ಮೇಕರ್, ಎನ್‌ವಿಡಿಯಾ ಸ್ಥಾಪಕ ಮತ್ತು ಸಿಇಓ ಜೆನ್‌ಸೆನ್‌ ಹುವಾಂಗ್ ಅವರು ಭಾರತದ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಏರಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಇದ್ದಾರೆ. ಮಾರ್ಕ್ ಜುಕರ್‌ಬರ್ಗ್ ಅವರ ಆಸ್ತಿ ಈ ವರ್ಷದಲ್ಲಿ 59.5 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಜುಕರ್‌ಬರ್ಗ್ ಒಟ್ಟು ಆಸ್ತಿ 188 ಬಿಲಿಯನ್ ಡಾಲರ್ ಆಗಿದೆ. 104 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಗೌತಮ್ ಅದಾನಿ 15ನೇ ಸ್ಥಾನದಲ್ಲಿದ್ದಾರೆ. 

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅಂಬಾನಿ  ಮತ್ತು ಹುವಾಂಗ್ ಇಬ್ಬರ ಆಸ್ತಿ 113 ಬಿಲಿಯನ್ ಡಾಲರ್ ಆಗಿದೆ. ಕೆಲ ಮೊತ್ತದ ಅಂತರದಿಂದ ಹುವಾಂಗ್ 12 ರಿಂದ 11ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಕಳೆದ ಶುಕ್ರವಾರ ಮಾರುಕಟ್ಟೆ  ಮುಕ್ತಾಯಕ್ಕೆ ಹುವಾಂಗ್ ಒಟ್ಟು ಸಂಪತ್ತಿನಲ್ಲಿ 4.73 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇತ್ತ  ಮುಕೇಶ್ ಅಂಬಾನಿಯವರ ಸಂಪತ್ತಿನಲ್ಲಿ 12.1 ಮಿಲಿಯನ್  ಡಾಲರ್  ವೃದ್ಧಿಯಾಗಿದೆ. ಈ ವರ್ಷದ ಎನ್‌ವಿಡಿಯಾ ಶೇರುಗಳ ಬೆಲೆ ಗಣನೀಯವಾಗಿ ಏರಿಕೆ ಕಾಣುತ್ತಿರೋದನ್ನು ಗಮನಿಸಬಹುದು. ಹಾಗಾಗಿ ಹುವಾಂಗ್ ಆಸ್ತಿಯ ಪ್ರಮಾಣ ಏರಿಕೆಯಾಗುತ್ತಿದದೆ. ಈ ವರ್ಷ ಹುವಾಂಗ್ ಅವರ ಒಟ್ಟು ಆಸ್ತಿಯಲ್ಲಿ 69.3 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಳವಾಗಿದೆ. 

ಏರ್‌ಟೈಲ್, ವೊಡಾಫೋನ್ ಐಡಿಯಾಗೆ ಚೆಕ್‌ಮೇಟ್ ಕೊಟ್ಟ ರಿಲಯನ್ಸ್ ಜಿಯೋದ ಡೇಟಾ ಬೂಸ್ಟರ್ ಪ್ಲಾನ್

ದೇಶದ ಟಾಪ್ 10 ಶ್ರೀಮಂತರು ಮತ್ತು ಆಸ್ತಿ

ಎಲೋನ್ ಮಸ್ಕ್ - $244 ಬಿಲಿಯನ್

ಬರ್ನಾರ್ಡ್ ಅರ್ನಾಲ್ಟ್ - $201 ಬಿಲಿಯನ್.

ಜೆಫ್ ಬೆಜೋಸ್- $200 ಬಿಲಿಯನ್

ಮಾರ್ಕ್ ಜುಕರ್‌ಬರ್ಗ್- $188 ಬಿಲಿಯನ್

ಬಿಲ್ ಗೇಟ್ಸ್ - 159 ಬಿಲಿಯನ್.

ಲ್ಯಾರಿ ಎಲಿಸನ್ - $154 ಬಿಲಿಯನ್

ಲ್ಯಾರಿ ಪೇಜ್ - $149 ಬಿಲಿಯನ್

ಸ್ಟೀವ್ ಬಾಲ್ಮರ್ - $145 ಬಿಲಿಯನ್

ವಾರೆನ್ ಬಫೆಟ್ - $143 ಬಿಲಿಯನ್

ಸೆರ್ಗೆ ಬ್ರಿನ್ - $141 ಬಿಲಿಯನ್

ಕೋಟಿ ಕೋಟಿ ಇದ್ರೂ ರಾತ್ರೋ ರಾತ್ರಿ ಫುಟ್‌ಪಾತ್‌ನಲ್ಲಿ ಕಾಣಿಸಿಕೊಂಡ ಅಂಬಾನಿ ದಂಪತಿ

Latest Videos
Follow Us:
Download App:
  • android
  • ios