ರಿಲಯನ್ಸ್ ಇಂಡಸ್ಟ್ರೀಸ್ ನೌಕರರು ದೀಪಾವಳಿ ಉಡುಗೊರೆ ಬಾಕ್ಸ್‌ ಪಡೆದುಕೊಂಡಿದ್ದಾರೆ. ಈ ಗಿಫ್ಟ್‌ ಬಾಕ್ಸ್‌ಅನ್ನು  ಅನ್ಬಾಕ್ಸ್ ಮಾಡುವ ಉದ್ಯೋಗಿಯ ವೈರಲ್ ವೀಡಿಯೊ 1.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ನೇಕ ಭಾರತೀಯ ಕಂಪನಿಗಳು ತಮ್ಮ ಸಿಬ್ಬಂದಿಗೆ ದೀಪಾವಳಿ ಹಬ್ಬಕ್ಕೆ ಉಡುಗೊರೆ ನೀಡುತ್ತಿದೆ. ಕೆಲವು ಕಂಪನಿಗಳು ಬೋನಸ್‌ ನೀಡಿ ಖುಷಿ ಪಡಿಸಿದರೆ, ಇನ್ನೂ ಕೆಲವು ಕಂಪನಿಗಳು ಸ್ವೀಟ್‌ ಬಾಕ್ಸ್‌, ಡ್ರೈ ಫ್ರೂಟ್‌ ಬಾಕ್ಸ್‌ಗಳನ್ನು ನೀಡುತ್ತದೆ.ಕೋಟ್ಯಧಿಪತಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಸಿಬ್ಬಂದಿಗೆ ಮೂರು ಪ್ಯಾಕೆಟ್‌ಗಳನ್ನು ಒಳಗೊಂಡಿರುವ ಗಿಫ್ಟ್‌ ಬಾಕ್ಸ್‌ಅನ್ನು ಉಡುಗೊರೆಯಾಗಿ ನೀಡಿದೆ. ಇದರಲ್ಲಿ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಗಳು ಇವೆ. ಪ್ರತಿ ಪ್ಯಾಕೆಟ್ ಅನ್ನು ಹತ್ತಿ ಚೀಲದಲ್ಲಿ ಸುತ್ತಿಡಲಾಗಿತ್ತು. ರಿಲಯನ್ಸ್ ಜಿಯೋ ಇನ್ಫೋಕಾಮ್ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಉಡುಗೊರೆಯನ್ನು ತೆರೆಯುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. "ದೀಪಾವಳಿ ಶುಭಾಶಯಗಳು" ಮತ್ತು "ಶುಭ್ ದೀಪಾವಳಿ" ಎಂದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾದ ಬಿಳಿ ಪೆಟ್ಟಿಗೆಯೊಳಗೆ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಗಳ ತಲಾ ಒಂದು ಪ್ಯಾಕೆಟ್‌ಗಳು ಇವೆ.

Add Asianetnews Kannada as a Preferred SourcegooglePreferred

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ, ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮತ್ತು ಕುಟುಂಬದ ನಾಲ್ಕು ಮೊಮ್ಮಕ್ಕಳ ಹೆಸರನ್ನು ಹೊಂದಿರುವ ಕಾರ್ಡ್‌ನೊಂದಿಗೆ ಈ ದುಂಡಗಿನ ಬಾಕ್ಸ್‌ಅನ್ನು ನೀಡಲಾಗಿದೆ.

"ಜಿಯೋ ಕಂಪನಿಯಿಂದ ದೀಪಾವಳಿ ಉಡುಗೊರೆ @ಕ್ಲೈಂಟ್ ಕಂಪನಿ," ಇನ್‌ಸ್ಟಾಗ್ರಾಮ್ ಬಳಕೆದಾರರು ಜನಪ್ರಿಯ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ, ಇದು 1.6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಬೈಸಿಕಲ್‌ನಲ್ಲಿ ಡಿಟರ್ಜಂಟ್‌ ಮಾರ್ತಿದ್ದ 'ರೈತನ ಮಗ' ಇಂದು 23 ಸಾವಿರ ಕೋಟಿ ಮೌಲ್ಯದ ಕಂಪನಿ ಮಾಲೀಕ!

ಈ ವಿಡಿಯೋಗೆ 500ಕ್ಕೂ ಅಧಿಕ ಕಾಮೆಂಟ್‌ಗಳು ಬಂದಿದೆ. ರಿಲಯನ್ಸ್‌ ನೀಡಿರುವ ಉಡುಗೊರೆಗೆ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಯೂಸರ್‌ ತಮ್ಮ ಕಂಪನಿ ಏರ್ ಫ್ರೈಯರ್‌ಅನ್ನು ಉಡುಗೊರೆಯಾಗಿ ನೀಡಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ತಮ್ಮ ಕಂಪನಿ ದೀಪಾವಳಿಗೆ ಕಂಪನಿ ಬೋಸನ್‌ ನೀಡಿದ್ದಾಗಿ ತಿಳಿಸಿದ್ದಾರೆ.

ಕೊಹ್ಲಿ, ಸಿರಾಜ್‌ ರಿಟೇನ್‌, ಕೆಎಲ್‌ ರಾಹುಲ್‌ ಆರ್‌ಸಿಬಿ ಕ್ಯಾಪ್ಟನ್‌?

ಈ ಹಿಂದೆ ರಿಲಯನ್ಸ್ ಸಿಬ್ಬಂದಿಗೆ ಹಬ್ಬದ ಸಮಯದಲ್ಲಿ ಇದೇ ರೀತಿಯ ನೀಡಲಾಗುತ್ತಿತ್ತು.ಹಿಂದಿನ ವರ್ಷಗಳಲ್ಲಿ ಸಿಬ್ಬಂದಿಗೆ ಇದೇ ರೀತಿಯ ದೀಪಾವಳಿ ಉಡುಗೊರೆಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ. ಅಂಬಾನಿ ಕುಟುಂಬದ ಹಲವು ವರ್ಷಗಳಿಂದ ದೀಪಾವಳಿ ಹಬ್ಬಕ್ಕೆ ಸಿಬ್ಬಂದಿಗೆ ಗಿಫ್ಟ್‌ಬಾಕ್ಸ್‌ ನೀಡುತ್ತದೆ. ಈ ಬಾರಿಯೂ ಅದನ್ನು ಮುಂದುವರೆಸಿದೆ. 2023 ರಲ್ಲಿ ಸಿಬ್ಬಂದಿಗೆ ಗುಲಾಬಿ ಬಣ್ಣದ ಬಾಕ್ಸ್‌ಅನ್ನು ನೀಡಲಾಗಿತ್ತು. ಅದರ ಒಳಗೆ ಡ್ರೈಫ್ರೂಟ್ಸ್‌ಗಳನ್ನು ಇಡಲಾಗಿತ್ತು ಈ ವರ್ಷದ ಜುಲೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ವೇಳೆ ರಿಲಯನ್ಸ್ ಉದ್ಯೋಗಿಗಳಿಗೆ ಉಡುಗೊರೆ ಬಾಕ್ಸ್‌ ನೀಡಲಾಗಿತ್ತು. ಮುಖೇಶ್ ಮತ್ತು ನೀತಾ ಅಂಬಾನಿ ಅವರ ಕಿರಿಯ ಮಗ ಅನಂತ್.

View post on Instagram