ಮುಂಬೈ(ಡಿ.31): 2019 ವರ್ಷದ ಕೊನೆಯ ದಿನವಾದ ಡಿ.31ರಂದು ರಿಲಯನ್ಸ್ ಜಿಯೋ ದೇಶದ ಜನತೆಗೆ ಭಾರೀ ಗಿಫ್ಟ್ ನೀಡಿದೆ. ಜಿಯೋ ಸಿಮ್ ಬಳಿಕ ಇದೀಗ ಇ-ಜಿಯೋ ಮಾರ್ಟ್'ಗಳನ್ನು ದೇಶಾದ್ಯಂತ ತೆರೆಯಲು ರಿಲಯನ್ಸ್ ಮುಂದಡಿ ಇಟ್ಟಿದೆ.

ರಿಲಯನ್ಸ್ ರಿಟೇಲ್ ನಿಯಂತ್ರಣದಲ್ಲಿ ದೇಶಾದ್ಯಂತ ಇ-ಜಿಯೋ ಮಾರ್ಟ್'ಗಳನ್ನು ಸ್ಥಾಪಿಸಲು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಜ್ಜಾಗಿದೆ.

ಸಿಮ್ ಆಯ್ತು, ಬರಲಿವೆ 5 ಸಾವಿರಕ್ಕೂ ಅಧಿಕ ಜಿಯೋ ಪೆಟ್ರೋಲ್‌ ಬಂಕ್‌!

ಇಂದು ಮುಂಬೈ, ಥಾಣೆ ಹಾಗೂ ಕಲ್ಯಾಣದಲ್ಲಿ ಮೊದಲ ಇ-ಜಿಯೋ ಮಾರ್ಟ್ ವ್ಯವಸ್ಥೆಯನ್ನು ಉದ್ಘಾಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಿಯೋ ಮಾರ್ಟ್'ಗಳನ್ನು ತೆರೆಯಲಾಗುವುದು ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇ- ಕಾಮರ್ಸ್‌ ಕ್ಷೇತ್ರದಲ್ಲಿ ಪಾರುಪತ್ಯ ಮೆರೆಯುತ್ತಿರುವ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗೆ ಪೈಪೋಟಿಯಾಗಿ ಇ- ಕಾಮರ್ಸ್‌ನ ದೈತ್ಯ ಸಂಸ್ಥೆಯನ್ನು ನಿರ್ಮಿಸುವುದಾಗಿ ಮುಖೇಶ್ ಅಂಬಾನಿ ಈ ಹಿಂದೆಯೇ ಘೋಷಿಸಿದ್ದರು. ಅದರಂತೆ ಇಂದು ಮೂರು ಮಳಿಗೆಗಳನ್ನು ತೆರೆಯಲಾಗಿದೆ.

ಮುಕೇಶ್‌ ಅಂಬಾನಿಯಿಂದ ಮತ್ತೊಂದು ದೈತ್ಯ ಇ-ಕಾಮರ್ಸ್ ಕಂಪನಿ

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ತನ್ನ ಒಡೆತನದಲ್ಲಿ ಸುಮಾರು 1 ಲಕ್ಷ ಕೋಟಿ ರೂ. ಮೊತ್ತದ ಇ-ಜಿಯೋ ಮಾರ್ಟ್ ಸ್ಥಾಪಿಸಿದೆ. ಈ ಸಂಸ್ಥೆ ರಿಲಯನ್ಸ್‌ ಜಿಯೊ ಇಸ್ಫೋಕಾಮ್‌ನಲ್ಲಿ ಹೂಡಿಕೆ ಮಾಡಿದೆ ಎಂದು ಸ್ಪಷ್ಟಪಡಿಸಲಾಗಿದೆ.

50 ಸಾವಿರಕ್ಕೂ ಹೆಚ್ಚು ಗ್ರಹೋಪಯೋಗಿ ವಸ್ತುಗಳ ಮಾರಾಟದ ಉದ್ದೇಶವಿದ್ದು, ಮನೆಗೆ ಉಚಿತವಾಗಿ ಸಾಮಾನು ಸರಂಜಾಮುಗಳನ್ನು ತಲುಪಿಸುವ ವ್ಯವಸ್ಥೆಯೂ ಇದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಮತ್ತೊಂದು ಕ್ಷೇತ್ರಕ್ಕೆ ರಿಲಯನ್ಸ್ ಲಗ್ಗೆ: ಅಂಬಾನಿ ಒಡೆತನಕ್ಕೆ 250 ವರ್ಷ ಹಳೆಯ ಕಂಪೆನಿ!

ಇನ್ನು ಜಿಯೋ ಮಾರ್ಟ್ ಉದ್ಘಾಟನೆಯಿಂದಾಗಿ ಭಾರತೀಯ ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್'ಕಾರ್ಟ್ ಚಿಂತೆಗೀಡಾಗಿದ್ದು, ಭಾರತದ ಡಿಜಿಟಲ್ ಮಾರುಕಟ್ಟೆಯ ಚಹರೆಯೇ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.