ಹಳೆಯ ಬಟ್ಟೆಗಳನ್ನು ಮರುಬಳಕೆ ಮಾಡಿ ಲಾಭದಾಯಕ ವ್ಯವಹಾರ ಆರಂಭಿಸಬಹುದು. ಚೆನ್ನೈನ ಕೆಲ ಕಂಪನಿಗಳು ಈಗಾಗಲೇ ಈ ಮಾದರಿಯಲ್ಲಿ ಯಶಸ್ವಿಯಾಗಿವೆ. ಹಳೆ ಬಟ್ಟೆಗಳನ್ನು ಯಂತ್ರಗಳ ಮೂಲಕ ನಾರುಗಳನ್ನಾಗಿ ಪರಿವರ್ತಿಸಿ ಹೊಸ ಉತ್ಪನ್ನಗಳನ್ನು ತಯಾರಿಸಬಹುದು. ಹತ್ತು ಲಕ್ಷ ರೂಪಾಯಿ ಬಂಡವಾಳದಲ್ಲಿ ಆರಂಭಿಸಬಹುದಾದ ಈ ವ್ಯವಹಾರದಲ್ಲಿ ತಿಂಗಳಿಗೆ ಹತ್ತು ರಿಂದ ಹದಿನೈದು ಲಕ್ಷದವರೆಗೆ ಗಳಿಸಬಹುದು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.

ಸದಾ ಬೇಡಿಕೆ ಇರುವ ವಸ್ತುಗಳಲ್ಲಿ ಬಟ್ಟೆ (clothes) ಕೂಡ ಒಂದು. ಜನರು ವಾರ, ತಿಂಗಳಿಗೆ ಬಟ್ಟೆ ಖರೀದಿ ಮಾಡ್ತಾರೆ. ಆದ್ರೆ ಹರಿದ, ಹಳೆಯದಾದ ಬಟ್ಟೆಯನ್ನು ಏನು ಮಾಡ್ಬೇಕು ಎಂಬುದು ತಿಳಿಯೋದಿಲ್ಲ. ಜೊತೆಗೆ ಅನೇಕ ಬಟ್ಟೆ ಕಾರ್ಖಾನೆಯಲ್ಲಿ ಕೂಡ ಬಟ್ಟೆ ಚೂರುಗಳ ರಾಶಿ ಬಿದ್ದಿರುತ್ತದೆ. ಈ ರಾಶಿ ಬಟ್ಟೆಯನ್ನು ಬಳಸಿಕೊಂಡು ನೀವು ಬ್ಯುಸಿನೆಸ್ (Business) ಶುರು ಮಾಡ್ಬಹುದು. 

ವಿಶ್ವದ ಜವಳಿ ತ್ಯಾಜ್ಯ (textile waste)ದಲ್ಲಿ ಭಾರತದ ಪಾತ್ರ ಶೇಕಡಾ 8.5ರಷ್ಟಿದೆ. ಇವುಗಳಲ್ಲಿ 10 ಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಹಳೆಯ ಅಥವಾ ತ್ಯಾಜ್ಯ ಬಟ್ಟೆಗಳಿದ್ದು, ಅವು 200 ವರ್ಷಗಳಾದರೂ ಕೊಳೆಯೋದಿಲ್ಲ. ಮನೆಯಲ್ಲೇ ಕುಳಿತು, ಹಳೆ ಬಟ್ಟೆಗಳಿಗೆ ಹೊಸ ರೂಪ ನೀಡುವ ಮೂಲಕ ನೀವು ಬ್ಯುಸಿನೆಸ್ ಶುರು ಮಾಡಿ ಲಾಭ ಗಳಿಸಬಹುದು.

Gold Rate Comparison: ಭಾರತದಲ್ಲಿ ಲಕ್ಷಕ್ಕೂ ಹೆಚ್ಚು, ಪಾಕಿಸ್ತಾನದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಎಷ್ಟು ಗೊತ್ತಾ?

ಅಪ್ಸೈಕ್ಲಿಂಗ್ (upcycling) ಒಂದು ಹೊಸ ಪರಿಕಲ್ಪನೆ. ಇದರಲ್ಲಿ, ನಿಷ್ಪ್ರಯೋಜಕ ಮತ್ತು ಹಳೆಯ ಬಟ್ಟೆಗಳನ್ನು ಹೊಸದು ಮಾಡಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತೆ. ಪ್ರಸ್ತುತ, ತಮಿಳುನಾಡಿನ ರಾಜಧಾನಿ ಚೆನ್ನೈನ ಎರಡು ಕಂಪನಿಗಳು ಈ ಕೆಲಸ ಮಾಡ್ತಿವೆ. ಓ ಸ್ಕ್ರ್ಯಾಪ್ (Oh scrap) ಮತ್ತು ಅಪ್ಸೈಕಲ್ (Upcycle) ಈ ಎರಡೂ ಕಂಪನಿಗಳು ಟೈಲರ್ಗಳು ಮತ್ತು ಕಾರ್ಖಾನೆಗಳಿಂದ ಕತ್ತರಿಸಿದ ಬಟ್ಟೆಗಳನ್ನು ಸಂಗ್ರಹಿಸುತ್ತವೆ. ಅವುಗಳಿಗೆ ಸ್ಕೂಲ್ ಬ್ಯಾಕ್, ಬ್ಯಾಕ್ ಪ್ಯಾಕ್ ರೂಪ ನೀಡುತ್ವೆ.

ಈ ಕಂಪನಿಯಂತೆ ನೀವೂ ಕೂಡ ಹಳೆಯ ಬಟ್ಟೆ ಹಾಗೂ ಚಿಕ್ಕಪುಟ್ಟ ಬಟ್ಟೆ ಚೂರುಗಳನ್ನು ಬಳಸಿಕೊಂಡು ಸ್ಟಾರ್ಟ್ಅಪ್ ಪ್ರಾರಂಭಿಸಬಹುದು. 

ಜವಳಿ ಮರುಬಳಕೆ ಹೇಗೆ? : ಹಳೆಯ ಬಟ್ಟೆಗಳನ್ನು ಯಂತ್ರಗಳ ಮೂಲಕ ವಿವಿಧ ನಾರುಗಳಾಗಿ ವಿಭಜಿಸಲಾಗುತ್ತದೆ. ಇದರ ನಂತರ ಬಟ್ಟೆಗಳನ್ನು ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ನಾರುಗಳನ್ನು ನಂತರ ಹೊಸ ಬಟ್ಟೆಗಳನ್ನು ಅಥವಾ ಇತರ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಹಳೆಯ ಬಟ್ಟೆಗಳಿಂದ ಹೊಸ ಬಟ್ಟೆಗಳು, ಕಂಬಳಿಗಳು ಅಥವಾ ದಿಂಬಿನ ಕವರ್ಗಳನ್ನು ತಯಾರಿಸಬಹುದು. ಮನೆ ಅಲಂಕಾರಿಕ ವಸ್ತುಗಳನ್ನು ಸಹ ತಯಾರಿಸಬಹುದು. 

ಈ ಬ್ಯುಸಿನೆಸ್ ಗೆ ಎಷ್ಟು ಹಣ ಖರ್ಚಾಗುತ್ತೆ? : ಬಟ್ಟೆಗಳ ಮರುಬಳಕೆ ಮಾಡಲು ಪ್ರತಿ ಕಿಲೋಗ್ರಾಂಗೆ 35 ರಿಂದ 65 ರೂಪಾಯಿ ಖರ್ಚಾಗುತ್ತದೆ. ಮರುಬಳಕೆಯ ಫೈಬರ್ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 60 ರಿಂದ 100 ರೂಪಾಯಿಗೆ ಲಭ್ಯವಿದೆ. ಆರಂಭದಲ್ಲಿ ಈ ವ್ಯವಹಾರ ಮಾಡಲು 10 ರಿಂದ 12 ಲಕ್ಷ ರೂಪಾಯಿ ವೆಚ್ಚವಾಗುತ್ತದೆ.

ಯಾವ ಯಂತ್ರಗಳು ಬೇಕಾಗುತ್ತವೆ? : ಬಟ್ಟೆಗಳನ್ನು ಮರುಬಳಕೆ ಮಾಡುವ ವ್ಯವಹಾರದಲ್ಲಿ, ನಿಮಗೆ ಕತ್ತರಿಸುವ ಮತ್ತು ಚೂರುಚೂರು ಮಾಡುವ ಯಂತ್ರಗಳು, ಫೈಬರ್ ಓಪನರ್ ಯಂತ್ರಗಳು, ಫೈಬರ್ ಶುಚಿಗೊಳಿಸುವ ಯಂತ್ರಗಳು ಮತ್ತು ಬೇಲಿಂಗ್ ಯಂತ್ರಗಳು ಬೇಕಾಗುತ್ತವೆ. ಎಲ್ಲಾ ಯಂತ್ರಗಳು 8 ರಿಂದ 9 ಲಕ್ಷ ರೂಪಾಯಿಗಳಿಗೆ ಲಭ್ಯವಿರುತ್ತವೆ. ನಿಮ್ಮ ಬಳಿ 3 ರಿಂದ 4 ಸಾವಿರ ಚದರ ಅಡಿ ಜಾಗವಿದ್ರೆ ಅಲ್ಲಿಯೇ ನೀವು ಬ್ಯುಸಿನೆಸ್ ಶುರು ಮಾಡ್ಬಹುದು. 

Dubai Chocolate: ದುಬೈ ಚಾಕೊಲೇಟ್ ಕ್ರೇಜ್, ಪಿಸ್ತಾ ಬೆಲೆ

ಎಷ್ಟು ಗಳಿಸ್ಬಹುದು? : ಈ ವ್ಯವಹಾರದಲ್ಲಿ ನೀವು ತಿಂಗಳಿಗೆ 10 ಲಕ್ಷದಿಂದ 15 ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು. ಗುಣಮಟ್ಟದ ಉತ್ಪನ್ನಕ್ಕೆ ಬೆಲೆ ಹೆಚ್ಚು.

ಮಾರ್ಕೆಟಿಂಗ್ ಹೇಗೆ? :  ನಿಮ್ಮ ಉತ್ಪನ್ನವನ್ನು ಇ-ಕಾಮರ್ಸ್ ಸೈಟ್ಗಳಲ್ಲಿ ನೀವು ಮಾರಾಟ ಮಾಡಬಹುದು. ಕರಕುಶಲ ಕಂಪನಿಗಳಿಗೆ ನೀಡಬಹುದು. ಇವುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಕೂಡ ಮಾರಾಟ ಮಾಡಬಹುದು.