ವಿಧಾನಸಭೆ ಚುನಾವಣೆ ವೇಳೆ ಚಿಕ್ಕಮಗಳೂರಿನಲ್ಲಿ ಶತಕೋಟಿ ದಾಟಿದ ಮದ್ಯ ಮಾರಾಟ!

ಕಾಫಿನಾಡನಲ್ಲಿ ಶತಕೋಟಿ ದಾಟಿದ ಮದ್ಯ ಮಾರಾಟ. ಒಂದೂವರೆ ತಿಂಗಳಲ್ಲಿ 104 ಕೋಟಿ ರೂ ವಹಿವಾಟು. ಚುನಾವಣೆ ಬಿಸಿಗೆ ಈ ಬಾರಿ 1,70,048.35 ಲೀ. ಹೆಚ್ಚುವರಿ ಮಾರಾಟ.

Record Liquor sale in Chikkamagaluru  during Karnataka assembly election 2023 gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ.24): ವಿಧಾನಸಭೆ ಚುನಾವಣೆ ವೇಳೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮದ್ಯದ ಹೊಳೆಯೇ ಹರಿದಿದೆ. ಕಾಫಿನಾಡಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 104 ಕೋಟಿ ರೂ. ವಹಿವಾಟು ನಡೆದಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದುಕೊಟ್ಟಿದೆ. ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಕಾವು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ  ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ತಂದುಕೊಟ್ಟಿದೆ. ಜಿಲ್ಲೆಯಲ್ಲಿ ಎಲ್ ಕ್ಷನ್ ಬಿಸಿ ಜೊತೆಗೆ ಮದ್ಯದ ಕಿಕ್ ಕೂಡ ಜೋರಾಗಿದೆ. ಇದಕ್ಕೆ ಅಬಕಾರಿ ಇಲಾಖೆಯ ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ. 2022ರ ಏಪ್ರೀಲ್ ಮೇ ಗೆ ಹೋಲಿಸಿದ್ರೆ 8.37 ಕೋಟಿ ರೂ ಹೆಚ್ಚಿನ ವಹಿವಾಟು ನಡೆದಿದೆ. ಜೊತೆಗೆ 1.62 ಕೋಟಿ ರೂ ಮೌಲ್ಯದ ಮದ್ಯವನ್ನು ಸೀಜ್ ಮಾಡಿ 9 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. 2022ರ ಏಪ್ರಿಲ್ -ಮೇ ತಿಂಗಳಲ್ಲಿ 95.62 ಕೋಟಿ ರೂ. ಮದ್ಯ ಮಾರಾಟವಾಗಿತ್ತು.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಂದೂವರೆ ತಿಂಗಳಲ್ಲೇ 8.37 ಕೋಟಿ ರೂ. ಹೆಚ್ಚುವರಿ ಆದಾಯ ಖಜಾನೆ ಸೇರಿದೆ. 

ಮದ್ಯ ಮಾರಾಟದಲ್ಲಿ ಏರಿಕೆ: 
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ಏರಿಕೆ ಕಂಡಿದೆ. 104 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. 2022ರ ಏಪ್ರಿಲ್ ಮತ್ತು ಮೇನಲ್ಲಿ 95,62 ಕೋಟಿ ರೂ. ಮೌಲ್ಯದ ಮದ್ಯ ಮತ್ತು ಬಿಯರ್ ಮಾರಾಟವಾಗಿತ್ತು. ಈ ಬಾರಿ ಚುನಾವಣೆ ಇದ್ದ ಕಾರಣ ಕೊಂಚ ಮದ್ಯ ಮಾರಾಟ ಹೆಚ್ಚಾಗಿದೆ. ಇದೇ ವೇಳೆ ಪರವಾನಗಿ ಇಲ್ಲದ 1.62 ಕೋಟಿ ರೂ. ಮೌಲ್ಯದ ಮದ್ಯವನ್ನು ಜಿಲ್ಲಾಡಳಿತದಿಂದ ಜಪ್ತಿ ಮಾಡಲಾಗಿದೆ.

ಬಿಯರ್ ಗೆ ಹೆಚ್ಚಿನ ಆದ್ಯತೆ: 
ಪ್ರಸಕ್ತ ವರ್ಷ ಬಿಸಿಲು ಹೆಚ್ಚಾಗಿದ್ದ ಕಾರಣ  ಜನರು  ಇತರೆ ಮದ್ಯಕ್ಕಿಂತ ಬಿಯರ್ ಮೊರೆ ಹೋಗಿದ್ದಾರೆ. ಒಂದೂವರೆ ತಿಂಗಳಲ್ಲಿ 84.35 ಕೋಟಿ ರೂ.ಮೌಲ್ಯದ ಮದ್ಯ ಮಾರಾಟವಾದರೆ, 19.65 ಕೋಟಿ ರೂ. ಮೌಲ್ಯದ ಬಿಯರ್ ಮಾರಾಟವಾಗಿದೆ. 2022ರ ಏಪ್ರಿಲ್, ಮೇನಲ್ಲಿ 16.08 ಕೋಟಿ ರೂ. ಮೌಲ್ಯದ 7,85,568.57 ಲೀಟರ್  ಬಿಯರ್ ಮಾರಾಟವಾಗಿತ್ತು.ಆದರೆ ಈ ಬಾರಿ ಒಂದೂವರೆ ತಿಂಗಳಲ್ಲೇ 19.65 ಕೋಟಿ ರೂ. ಮೌಲ್ಯದ 9,55,615.92 ಲೀಟರ್ ಬಿಯರ್ ಮಾರಾಟವಾಗಿದೆ. ಚುನಾವಣೆ ಬಿಸಿಗೆ  ಈ ಬಾರಿ 1,70,048.35 ಲೀ. ಹೆಚ್ಚುವರಿ ಮಾರಾಟವಾಗಿದೆ.

ಚುನಾವಣೆ ವರ್ಷವಗಿದ್ದರಿಂದ ಮದ್ಯ ಮತ್ತು ಬಿಯರ್ ಗೆ ವ್ಯಾಪಕ ಬೇಡಿಕೆಯಿತ್ತು. ಅದರಲ್ಲೂ  ಜಿಲ್ಲೆಯ ಜನರಿಗೆ ಚುನಾವಣೆ ಸಂದರ್ಭದಲ್ಲಿ ದಮದ್ಯ ಕಿಕ್ ಏರುವಂತೆ ಮಾಡಿದೆ. ಜಿಲ್ಲೆಯಲ್ಲಿ ಆರು ವಲಯಗಳಾದ ಕಡೂರಿನಲ್ಲಿ 23.68 ಕೋಟಿ, ಚಿಕ್ಕಮಗಳೂರು 29.,12 ಕೋಟಿ, ಮೂಡಿಗೆರೆಯಲ್ಲಿ 12.89 ಕೋಟಿ, ಎನ್ ಆರ್ ಪುರದಲ್ಲಿ 69.63 ಕೋಟಿ, ಕೊಪ್ಪದಲ್ಲಿ 10.60 ಕೋಟಿ, ತರೀಕೆರೆ ವಲಯದಲ್ಲಿ 20.73 ಕೋಟಿ ರೂ ಮೌಲ್ಯದ ಮದ್ಯ ಮತ್ತು ಬಿಯರ್ ಜನರ ಹೊಟ್ಟೆ ತುಂಬಿಸಿದೆ.

Latest Videos
Follow Us:
Download App:
  • android
  • ios