ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ನಿಂದ ಪಾಠ! ಸಾರ್ವಜನಿಕ ಹಿತಾಸಕ್ತಿ ಎಂದರೇನು ಎಂದು ತಿಳಿಸಿದ ಆರ್‌ಬಿಐ! ತನಗೆ ಸಲಹೆ ನೀಡಲು ಬಂದಿದ್ದ ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಆರ್‌ಬಿಐ! ಠೇವಣಿದಾರರು, ತೆರಿಗೆದಾರರನ್ನು ರಕ್ಷಿಸುವುದೇ ಸಾರ್ವಜನಿಕ ಹಿತಾಸಕ್ತಿ ಎಂದ ಆರ್‌ಬಿಐ! ಕೇಂದ್ರಕ್ಕೆ ಸಾವರ್ವಜನಿಕ ಹಿತಾಸಕ್ತಿಯ ಪಾಠ ಹೇಳಿದ ಉಪ ಗವರ್ವನರ್ ಎನ್.ಎಸ್ ವಿಶ್ವನಾಥನ್
ಮುಂಬೈ(ನ.4): ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್‌ಪಿಎ)ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ-ಆರ್‌ಬಿಐ ನಡುವಿನ ಸಮರ ಮುಂದುವರೆದಿದ್ದು, ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಮತ್ತೊಮ್ಮೆ ಪಾಠ ಮಾಡಿದೆ.
ಈ ಬಾರಿ ಆರ್‌ಬಿಐ ನ ಉಪ ಗರ್ವನರ್ ಎನ್.ಎಸ್ ವಿಶ್ವನಾಥನ್ ಈ ಬಗ್ಗೆ ಮಾತನಾಡಿದ್ದು, ಸಾಲ ವಾಪಸ್ ಪಡೆಯುವುದಕ್ಕೆ ಬ್ಯಾಂಕ್‌ಗಳು ಮುಂದಾಗಿವೆ ಎಂದರೆ ಅದು ಬ್ಯಾಂಕ್‌ಗಳು ಠೇವಣಿದಾರರು ಹಾಗೂ ತೆರಿಗೆದಾರರ ಹಣ ವಾಪಸ್ ಪಡೆಯುವುದಕ್ಕೆ ಯತ್ನಿಸುತ್ತಿದೆ ಎಂದರ್ಥ ಎಂದು ಹೇಳಿದರು.
ಆರ್‌ಬಿಐ ಈ ನಡೆಯನ್ನು ನಿರ್ದಯ ಕೇಂದ್ರೀಯ ಬ್ಯಾಂಕ್, ನಿಸ್ಸಹಾಯಕ ಸಾಲಗಾರ ಎಂದೆಲ್ಲಾ ವ್ಯಾಖ್ಯಾನಿಸುವವರಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ ಎಂದಾಗುತ್ತದೆ ಎಂದು ದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ವಿಶ್ವನಾಥನ್ ಹೇಳಿದ್ದಾರೆ.
2 ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಸಾಲ ಪಡೆದು ಸುಸ್ತಿದಾರರಾಗುವ ಹಂತ ತಲುಪಿರುವವರಿಂದ, ಸಾಲ ವಾಪಸ್ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಲು ಆರ್‌ಬಿಐ ಕ್ರಮ ಕೈಗೊಂಡಿತ್ತು. ಆದರೆ ಈ ಬಗ್ಗೆ ಆರ್‌ಬಿಐ ಗೆ ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರ, ಸಾಲ ಪಡೆದಿರುವ ಬೇರೆ ಕ್ಷೇತ್ರಗಳ ಉದ್ಯಮಿಗಳಿಗಿಂತ ವಿದ್ಯುತ್ ಉತ್ಪಾದಕರ ಕ್ಷೇತ್ರ ಭಿನ್ನವಾದದ್ದು, ಕೆಲವು ವಿನಾಯಿತಿ ನೀಡಬೇಕೆಂದು ಹೇಳಿತ್ತು.
ಈ ಹಿನ್ನೆಲೆಯಲ್ಲಿ ಆರ್‌ಬಿಐ - ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಹಣಕಾಸು ಸಚಿವಾಲಯ, ಎರಡೂ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯನ್ನೇ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿತ್ತು.
ಇದಕ್ಕೆ ಪ್ರತ್ಯುತ್ತರವಾಗಿ ಠೇವಣಿದಾರರು, ತೆರಿಗೆದಾರರನ್ನು ರಕ್ಷಿಸುವುದಕ್ಕೆ ಸಾರ್ವಜನಿಕ ಹಿತಾಸಕ್ತಿ ಎನ್ನುತ್ತಾರೆ ಎಂದು ಆರ್‌ಬಿಐ ತಿರುಗೇಟು ನೀಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 4, 2018, 1:16 PM IST