ಇದೆನಪ್ಪಾ ಆರ್​ಬಿಐಗೆ ಬೀಗ ಹಾಕಲಿದ್ದಾರಂತೆ ನೌಕರರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Aug 2018, 12:14 PM IST
RBI staff to go on mass leave over pension issues
Highlights

ಬೇಡಿಕೆ ಈಡೇರಿಕೆಗಾಗಿ ಆರ್​ಬಿಐ ನೌಕರರ ಸಾಮೂಹಿಕ ರಜೆ! ಸೆ.4 ಮತ್ತು 5 ರಂದು ಆರ್​ಬಿಐಗೆ ಬೀಳಲಿದೆ ಬೀಗ! ಪಿಂಚಣಿ ಸಂಬಂಧಿತ ಬೇಡಿಕೆ ಈಡೇರದ ಕಾರಣಕ್ಕೆ ಪ್ರತಿಭಟನೆ! ಸರ್ಕಾರದ ವಿಳಂಬ ನೀತಿಗೆ ನೌಕರರ ಆಕ್ರೋಶ

ನವದೆಹಲಿ(ಆ.21): ತಮ್ಮ ಬಹುಕಾಲದ ಪಿಂಚಣಿ ಸಂಬಂಧಿತ ಬೇಡಿಕೆ ಈಡೇರದ ಕಾರಣಕ್ಕೆ ಭಾರತೀಯ ರಿಸರ್ವ್​ ಬ್ಯಾಂಕ್​ ಅಧಿಕಾರಿಗಳು ಹಾಗೂ ನೌಕರರು ಸೆಪ್ಟೆಂಬರ್​ 4,5ರಂದು ಸಾಮೂಹಿಕ ರಜೆಯ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಯುನೈಟೆಡ್​ ಫೋರಂ ಆಫ್​ ರಿಸರ್ವ್​ ಬ್ಯಾಂಕ್​ ಅಫೀಸರ್ಸ್ ಅಂಡ್​ ಎಂಪ್ಲಾಯೀಸ್​ನ ಮುಖ್ಯ ಕಾಯರ್ದರ್ಶಿ ಜಿ. ಜಗದೀಶ್, ದಶಕ ಕಳೆದರೂ ಪಿಂಚಣಿ ಸಂಬಂಧಿತ ಬೇಡಿಕೆ ಈಡೇರದ ಕಾರಣ ಸಾಮೂಹಿಕ ರಜೆಯ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಇದೇ ಕಾರಣಕ್ಕೆ ಈ ಹಿಂದೆಯೂ ಹಲವು ಹೋರಾಟಗಳು ನಡೆದಿದ್ದು, ಸರ್ಕಾರ  ಮಾತ್ರ ನಮ್ಮ ಬೇಡಿಕೆ ಈಡೇರಿಸುವುದರತ್ತ ಗಮನಹರಿಸಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂಬ ಕಾರಣಕ್ಕೆ ಎರಡು ದಿನಗಳ ಕಾಲ ಆರ್​ಬಿಐ ಅಧಿಕಾರಿಗಳು ಹಾಗೂ ನೌಕರರು ಸಾಮಾನ್ಯ ರಜೆ ಪಡೆದುಕೊಳ್ಳಲಿದ್ದಾರೆ ಎಂದು ಜಗದೀಶ್ ತಿಳಿಸಿದ್ದಾರೆ.

ಆಗಸ್ಟ್​ 27ರಂದು ಆರ್​ಬಿಐನ ನಿರ್ದೇಶಕರಿಗೆ ಮನವಿ ಪತ್ರ ನೀಡಲು ನಿರ್ಧರಿಸಲಾಗಿದ್ದು, ಅದರಲ್ಲಿ ಪಿಂಚಣಿ ನೀತಿ ಸುಧಾರಣೆ, ಕಾಂಟ್ರಿಬ್ಯೂಟರಿ ಪ್ರಾವಿಡಂಟ್​ ಫಂಡ್​  (ಸಿಪಿಎಫ್​) ಉಳಿಸಿಕೊಂಡವರಿಗೆ ಪಿಂಚಣಿ ಆಯ್ಕೆಯ ಮರು ನೀಡಿಕೆ ಹಾಗೂ 2012ರಿಂದ ನೇಮಕವಾದವರಿಗೆ ಸಿಪಿಎಫ್​ ಹಾಗೂ ಹೆಚ್ಚುವರಿ ಭವಿಷ್ಯ ನಿಧಿ ಪಡೆಯಲು ಅವಕಾಶ ಸೇರಿ ಮತ್ತಿತರ ಬೇಡಿಕೆಗಳನ್ನು ಉಲ್ಲೇಖಿಸಲಾಗುತ್ತದೆ ಎಂದು ಜಗದೀಶ್​ ತಿಳಿಸಿದ್ದಾರೆ.

loader