Asianet Suvarna News Asianet Suvarna News

ಎಟಿಎಂ ಬಳಸೋರು ಈ ಸುದ್ದಿ ತಪ್ಪದೇ ನೋಡಿ, ಹೊಸ ಸೌಲಭ್ಯ ಶೀಘ್ರದಲ್ಲೇ ಜಾರಿ!

ಎಟಿಎಂ ಬಳಸುವ ಗ್ರಾಹಕರಿಗೆ ಹಣ ವಿತ್ಡ್ರಾ ಮಾಡುವ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಲು ಬ್ಯಾಂಕ್ ನೂತನ ಸೌಲಭ್ಯವನ್ನು ಅತೀ ಶೀಘ್ರದಲ್ಲೇ ಜಾರಿಗೊಳಿಸಲಿದೆ. 

RBI Monetary Policy Soon you can make cardless withdrawals from any bank ATM in India pod
Author
Bangalore, First Published Apr 9, 2022, 10:47 AM IST | Last Updated Apr 9, 2022, 11:12 AM IST

ಮುಂಬೈ(ಏ.09): ಇದುವರೆಗೆ ಕೆಲವೇ ಸೀಮಿತ ಬ್ಯಾಂಕ್‌ಗಳಿಗೆ ಮಾತ್ರ ನೀಡಲಾಗಿದ್ದ ಎಟಿಎಂಗಳಲ್ಲಿ ಕಾರ್ಡ್‌ರಹಿತ ಹಣ ಹಿಂಪಡೆತ ವ್ಯವಸ್ಥೆಯನ್ನು ಎಲ್ಲಾ ಬ್ಯಾಂಕ್‌ಗಳ, ಎಲ್ಲಾ ಎಟಿಎಂಗಳಿಗೂ ವಿಸ್ತರಣೆ ಮಾಡಲು ಆರ್‌ಬಿಐ ನಿರ್ಧರಿಸಿದೆ.

ಹಾಲಿ ಕೆಲ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ತಮ್ಮ ಎಟಿಎಂಗಳ ಮೂಲಕ ಮಾತ್ರವೇ ಈ ರೀತಿಯ ಕಾರ್ಡ್‌ ಬಳಸದೇ ಹಣ ಹಿಂಪಡೆಯುವ ಅವಕಾಶವನ್ನು ಕಲ್ಪಿಸಿದ್ದವು. ಇದನ್ನು ಇದೀಗ ಎಲ್ಲಾ ಬ್ಯಾಂಕ್‌ಗಳ ಎಲ್ಲಾ ಎಟಿಎಂಗಳಿಗೆ ವಿಸ್ತರಿಸಲಾಗುತ್ತಿದೆ. ಹೀಗಾಗಿ ಯಾವುದೇ ಬ್ಯಾಂಕಿನ ಗ್ರಾಹಕರು ಇನ್ಯಾವುದೇ ಬ್ಯಾಂಕಿನ ಎಟಿಎಂಗಳ ಮೂಲ ಹಣ ಹಿಂದಕ್ಕೆ ಪಡೆಯಬಹುದು.

ಯುಪಿಐ (ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌) ಬಳಸಿ ಎಟಿಎಂಗಳ ಮೂಲಕ ಹಣ ಹಿಂಪಡೆಯುವ ವ್ಯವಸ್ಥೆ ಜಾರಿಯಿಂದಾಗಿ ಕಾರ್ಡ್‌ ಸ್ಕಿಮ್ಮಿಂಗ್‌, ಕಾರ್ಡ್‌ ಕ್ಲೋನಿಂಗ್‌ ಮೊದಲಾದ ಅಕ್ರಮಗಳಿಗೆ ತಡೆ ಹಾಕಬಹುದು ಎಂದು ಆರ್‌ಬಿಐ ಹೇಳಿದೆ. ಇದೇ ವೇಳೆ ಭಾರತ್‌ ಬಿಲ್‌ ಪೇಮೆಂಟ್‌ ವ್ಯವಸ್ಥೆ ಮೂಲಕ ಹಣ ಪಾವತಿ ಹೆಚ್ಚಳವನ್ನು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿರುವ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌, ಈ ವಲಯದಲ್ಲಿ ಇನ್ನಷ್ಟುಸಂಸ್ಥೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಸ್ಥಾಪನೆಗೆ ಕಂಪನಿಗಳಿಗೆ ವಿಧಿಸಲಾಗಿದ್ದ 100 ಕೋಟಿ ನಿವ್ವಳ ಆಸ್ತಿ ಮೌಲ್ಯದ ಮಿತಿಯನ್ನು 25 ಕೋಟಿ ರು.ಗೆ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.

ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರುವ ಹಣ ಪಡೆಯೋದು ಹೇಗೆ?

 

ಕಷ್ಟಪಟ್ಟು ಹಣ (Money) ಸಂಪಾದನೆ ಮಾಡಿರುತ್ತೇವೆ. ಅದರಲ್ಲಿ ಅಲ್ಪಸ್ವಲ್ಪ ಹಣವನ್ನು ಕೂಡಿಡಲು ಮುಂದಾಗ್ತೇವೆ. ಹಣವನ್ನು ಬಹುತೇಕರು ಬ್ಯಾಂಕ್ (Bank) ಖಾತೆ (Account)ಯಲ್ಲಿಡುತ್ತಾರೆ. ಬ್ಯಾಂಕ್ ನಲ್ಲಿ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ. ಇದ್ರ ಜೊತೆಗೆ ಖಾತೆಯಲ್ಲಿರುವ ಹಣಕ್ಕೆ ಬ್ಯಾಂಕ್ ಬಡ್ಡಿ ನೀಡುತ್ತದೆ. ಇದೇ ಕಾರಣಕ್ಕೆ ನಾವುನೀವೆಲ್ಲ ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಬ್ಯಾಂಕ್ ನಲ್ಲಿಡುತ್ತೇವೆ. ಅಗತ್ಯಬಿದ್ದಾಗ ಹಣ ವಿತ್ ಡ್ರಾ ಮಾಡುತ್ತೇವೆ. ಬ್ಯಾಂಕ್ ನಲ್ಲಿ ಖಾತೆ ತೆರೆದು ಹಣವಿಟ್ಟ ವ್ಯಕ್ತಿ ಸಾವ(Death)ನ್ನಪ್ಪಿದ್ರೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡುವುದು ಸಹಜ. ಮನೆಯ ದುಡಿಯುವ ವ್ಯಕ್ತಿ ಮರಣ ಹೊಂದಿದಾಗ,ಕುಟುಂಬಸ್ಥರಿಗೆ ಹಣಕಾಸಿ ಅಗತ್ಯವಿರುತ್ತದೆ. ಆ ಸಂದರ್ಭದಲ್ಲಿ ಮೃತ ವ್ಯಕ್ತಿ ಖಾತೆಯಲ್ಲಿರು ಹಣವನ್ನು ಹೇಗೆ ಪಡೆಯುವುದು ಎಂಬುದನ್ನು ನಾವಿಂದು ಹೇಳ್ತೆವೆ.

ಸತ್ತ ವ್ಯಕ್ತಿ ಖಾತೆಯಿಂದ ಹಣ ತೆಗೆಯಲು ಬ್ಯಾಂಕ್ ನಿಯಮ :  ಸತ್ತವರ ಖಾತೆಯಿಂದ ಹಣ ತೆಗೆಯಲು ಬ್ಯಾಂಕ್ ನಲ್ಲಿ 3 ನಿಯಮಗಳಿವೆ. ಸಾಮಾನ್ಯವಾಗಿ ಹೊಸ ಬ್ಯಾಂಕ್ ಖಾತೆಯನ್ನು ತೆರೆಯುವಾಗ, ಖಾತೆದಾರನಿಗೆ ನಾಮಿನಿಯ ಬಗ್ಗೆ ಮಾಹಿತಿ ನೀಡುವಂತೆ ಬ್ಯಾಂಕ್ ಕೇಳುತ್ತದೆ. ಖಾತೆದಾರ ನಾಮಿನಿ ಹೆಸರನ್ನು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಅಪಘಾತದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿ ಸಾವನ್ನಪ್ಪಿದರೆ, ಮೃತ ವ್ಯಕ್ತಿಯಿಂದ ನಾಮನಿರ್ದೇಶನಗೊಂಡ ವ್ಯಕ್ತಿ ಈ ಹಣವನ್ನು ಪಡೆಯುತ್ತಾನೆ.  

ಜಂಟಿ ಖಾತೆಯಿದ್ದಲ್ಲಿ ಹಣ ವಿತ್ ಡ್ರಾ ಹೇಗೆ? : ಇಬ್ಬರು ಸೇರಿ ಜಂಟಿ ಖಾತೆ ತೆರೆದಿದ್ದರೆ ಹಣ ವಿತ್ ಡ್ರಾ ಮಾಡುವುದು ಸುಲಭ. ಖಾತೆ ತೆರೆದಿರುವ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರೆ ಇನ್ನೊಬ್ಬ ವ್ಯಕ್ತಿ, ಮರಣ ಪ್ರಮಾಣಪತ್ರದ ಪ್ರತಿಯನ್ನು ಬ್ಯಾಂಕ್ ಶಾಖೆಗೆ ಸಲ್ಲಿಸಬೇಕಾಗುತ್ತದೆ. ಇದರ ನಂತರ ಮೃತ ವ್ಯಕ್ತಿಯ ಹೆಸರನ್ನು ಜಂಟಿ ಖಾತೆಯಿಂದ ತೆಗೆದುಹಾಕಲಾಗುತ್ತದೆ. 

ನಾಮಿನಿ ಹೆಸರು ನಮೂದಿಸಿದ್ದರೆ : ಹಿಂದೆ ಹೇಳಿದಂತೆ ಖಾತೆ ಹೊಂದಿರುವ ವ್ಯಕ್ತಿ ನಾಮಿನಿ ಹೆಸರು ನಮೂದಿಸಿದ್ದರೆ, ಆತನ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಹಣ ನೀಡುವ ಮೊದಲು, ಬ್ಯಾಂಕ್ ಸುದೀರ್ಘ ಪ್ರಕ್ರಿಯೆ ನಡೆಸುತ್ತದೆ.ಮರಣ ಪ್ರಮಾಣಪತ್ರದ ಮೂಲ ಪ್ರತಿಯನ್ನು ಪರಿಶೀಲಿಸುತ್ತದೆ. ಮೂಲ ನಾಮಿನಿಗೆ ಹಣವನ್ನು ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಬ್ಬರು ಸಾಕ್ಷಿಗಳನ್ನು ಬ್ಯಾಂಕ್ ಕೇಳುತ್ತದೆ.

LIC Policy: ವಾರಸುದಾರರ ಕೈತಪ್ಪುವ ವಿಮೆ, ಠೇವಣಿ ಹಣ, ಏನು ಮಾಡಬೇಕು.?

ಖಾತೆದಾರ ನಾಮಿನಿ ಹೆಸರು ನಮೂದಿಸದೆ ಹೋದಲ್ಲಿ : ಒಂದು ವೇಳೆ ಖಾತೆದಾರ ನಾಮಿನಿ ಹೆಸರನ್ನು ನಮೂದಿಸದೆ ಹೋದಲ್ಲಿ, ಸಂಬಂಧಟ್ಟ ವ್ಯಕ್ತಿಗಳಿಗೆ ಹಣ ಪಡೆಯುವುದು ಕಷ್ಟವಾಗುತ್ತದೆ. ಸುದೀರ್ಘ ಕಾನೂನು ಪ್ರಕ್ರಿಯೆಯ ಮೂಲಕ ಹಣ ಪಡೆಯಬೇಕಾಗುತ್ತದೆ. ಮೃತ ವ್ಯಕ್ತಿಯ ವಿಲ್ ಅಥವಾ ಉತ್ತರಾಧಿಕಾರಿ ಪ್ರಮಾಣಪತ್ರವನ್ನು ನೀಡಬೇಕು. ಉತ್ತರಾಧಿಕಾರ ಪ್ರಮಾಣಪತ್ರವು, ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಗೆ ನೀಡಲಾಗುವ ದಾಖಲೆಯಾಗಿದೆ.  

ATM Safety Tips : ಎಟಿಎಂ ಬಳಸುವ ಮುನ್ನ ಹಸಿರು ಲೈಟ್ ಬಗ್ಗೆ ಗಮನವಿರಲಿ!

ಬೇರೆ ಬೇರೆ ಬ್ಯಾಂಕ್ ಗಳ ನಿಯಮಗಳು ಬೇರೆ ಬೇರೆಯಾಗಿವೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನಲ್ಲಿ ಮೃತ ವ್ಯಕ್ತಿ ಖಾತೆ ಹೊಂದಿದ್ದರೆ ಹಣವನ್ನು ಹೇಗೆ ಡ್ರಾ ಮಾಡಬೇಕೆಂಬುದನ್ನು ನಾವು ಹೇಳ್ತೆವೆ. ಎಸ್‌ಬಿಐ ಖಾತೆದಾರರು ಮೃತಪಟ್ಟರೆ, ಅವರ ಸಂಬಂಧಿಕರು ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿರುವ ಮೊತ್ತವನ್ನು ಕ್ಲೈಮ್ ಮಾಡಬಹುದು. ಕ್ಲೈಮ್ ಮಾಡುವ ಮೊದಲು,ಖಾತೆದಾರ ಜಂಟಿ ಖಾತೆ ಹೊಂದಿದ್ದಾನೆಯೇ ಮತ್ತು ನಾಮಿನಿ ಹೆಸರು ಸೂಚಿಸಿದ್ದಾನೆಯೇ ಎಂಬುದನ್ನು ನೋಡಬೇಕು. ಎಸ್ಬಿಐ ಖಾತೆದಾರನ ಸಾವಿನ ನಂತ್ರ ನಾಮಿನಿ ಬ್ಯಾಂಕ್ ಶಾಖೆಯಿಂದ ಲಭ್ಯವಿರುವ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಕ್ಲೈಮ್ ಫಾರ್ಮ್ ಭರ್ತಿ ಮಾಡಿದ ನಂತರ, ನಾಮಿನಿ ಅದರ ಮೇಲೆ ಫೋಟೋ ಅಂಟಿಸಬೇಕು ಮತ್ತು ಮೂಲ ಪಾಸ್‌ಬುಕ್ ಖಾತೆಯ ಟಿಡಿಆರ್, ಚೆಕ್ ಬುಕ್, ಎಟಿಎಂ ಕಾರ್ಡ್ ಮತ್ತು ಸತ್ತವರ ಮರಣ ಪ್ರಮಾಣಪತ್ರವನ್ನು ನೀಡಬೇಕು. ನಾಮನಿರ್ದೇಶನದ ರಸೀದಿ, ನಾಮಿನಿಯ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಲಗತ್ತಿಸಬೇಕು.ನಂತ್ರ ನಾಮಿನಿ ಹಣ ಕ್ಲೈಮ್ ಮಾಡಬಹುದು.

Latest Videos
Follow Us:
Download App:
  • android
  • ios