ಬಡ್ಡಿದರ ಯಥಾಸ್ಥಿತಿ: ಆರ್‌ಬಿಐ ಸಾಲ ನೀತಿ ಪ್ರಕಟ!

ಬಡ್ಡಿದರ ಯಥಾಸ್ಥಿತಿ: ಆರ್‌ಬಿಐ ನೀತಿ| ಶೇ.4ರ ರೆಪೋ ದರ ಬದಲಿಲ್ಲ| ಶೇ.10.5ರ ಜಿಡಿಪಿ ಅಂದಾಜು| ಪೇಮೆಂಟ್‌ ಬ್ಯಾಂಕ್‌ ಠೇವಣಿ ಮಿತಿ 2 ಲಕ್ಷ ರು.ಗೇರಿಕೆ| 1 ಲಕ್ಷ ಕೋಟಿ ರು. ಸರ್ಕಾರಿ ಬಾಂಡ್‌ ಖರೀದಿ ವಾಗ್ದಾನ

RBI Monetary Policy GDP growth forecast retained at 10 5 percent pod

ನವದೆಹಲಿ(ಏ.08): ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಬುಧವಾರ ತನ್ನ ದ್ವೈಮಾಸಿಕ ವಿತ್ತ ನೀತಿ ಪ್ರಕಟಿಸಿದೆ. ಕೊರೋನಾದ 2ನೇ ಅಲೆ ಎದ್ದು ಆರ್ಥಿಕತೆ ಮೇಲೆ ಕರಿನೆರಳು ಬೀಳುವ ಆತಂಕ ಉಂಟಾಗಿರುವ ಈ ಸಂದರ್ಭದಲ್ಲಿ ಹೆಚ್ಚು ಬದಲಾವಣೆ ಮಾಡಲು ಹೋಗದೇ, ರೆಪೋ (ಬಡ್ಡಿ) ದರವನ್ನು ಶೇ.4ರಲ್ಲೇ ಮುಂದುವರಿಸಿದೆ.

‘ಕೊರೋನಾ 2ನೇ ಅಲೆಯು ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ವೈರಸ್‌ ನಿಗ್ರಹಿಸಬೇಕು’ ಎಂದು ನೀತಿಯಲ್ಲಿ ಸರ್ಕಾರಕ್ಕೆ ಮನವಿ ಮಾಡಿರುವ ಆರ್‌ಬಿಐ, ಇಷ್ಟಾಗಿಯೂ ದೇಶವು ಈ ವಿತ್ತೀಯ ವರ್ಷದಲ್ಲಿ ಶೇ.10.5ರ ಪ್ರಗತಿ ದರ ದಾಖಲಿಸಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದೆ. ಕಳೆದ ವರ್ಷ ಆರ್ಥಿಕತೆ ಶೇ.7.5ರಷ್ಟುಕುಗ್ಗಿತ್ತು.

ಚಿಲ್ಲರೆ ಹಣದುಬ್ಬರ ಮಾರ್ಚ್ ತ್ರೈಮಾಸಿಕದಲ್ಲಿ ಶೇ.5 ಇರಬಹುದು ಎಂದಿರುವ ಅದು, 1 ಲಕ್ಷ ಕೋಟಿ ರು. ಮೌಲ್ಯದ ಸರ್ಕಾರಿ ಬಾಂಡ್‌ ಖರೀದಿಸಿ ಆರ್ಥಿಕತೆಗೆ ಉತ್ತೇಜನ ನೀಡುವ ವಾಗ್ದಾನ ಮಾಡಿದೆ. 2020-21ರಲ್ಲಿ ಆರ್‌ಬಿಐ 3 ಲಕ್ಷ ಕೋಟಿ ರು. ಮೌಲ್ಯದ ಬಾಂಡ್‌ ಖರೀದಿಸಿತ್ತು.

ನಬಾರ್ಡ್‌, ಎನ್‌ಎಚ್‌ಬಿ ಹಾಗೂ ಸಿಡ್‌ಬಿ ಸಂಸ್ಥೆಗಳಿಗೆ ಹೊಸದಾಗಿ ಸಾಲ ನೀಡಲು 50 ಸಾವಿರ ಕೋಟಿ ರು. ನೀಡುವುದಾಗಿಯೂ ತಿಳಿಸಿದೆ.

ಇದೇ ವೇಳೆ, ಪೇಮೆಂಟ್‌ ಬ್ಯಾಂಕ್‌ಗಳಲ್ಲಿ ಇಡಬಹುದಾದ ಗರಿಷ್ಠ ಠೇವಣಿ ಮಿತಿಯನ್ನು 1 ಲಕ್ಷ ರು.ನಿಂದ 2 ಲಕ್ಷ ರು.ಗೆ ಹೆಚ್ಚಿಸಿದೆ. ಇದು ಪೇಮೆಂಟ್‌ ಬ್ಯಾಂಕ್‌ ಠೇವಣಿದಾರರಿಗೆ ನೆರವಾಗಲಿದೆ.

Latest Videos
Follow Us:
Download App:
  • android
  • ios