Asianet Suvarna News Asianet Suvarna News

ಇಂಟರ್ನೆಟ್‌ ಇಲ್ಲದೆ ಫೀಚರ್‌ ಫೋನ್‌ನಲ್ಲಿ ಹಣ ವರ್ಗ!

- ಆರ್‌ಬಿಐನಿಂದ 123ಪೇ ಹೊಸ ಸೇವೆಗೆ ಚಾಲನೆ

- 40 ಕೋಟಿ ಮಂದಿಗೆ ಉಪಯೋಗ

- ಫೀಚರ್ ಫೋನ್ ಗಳಲ್ಲೂ ಯುಪಿಐ ಸೇವೆ

rbi launch upi123pay  for feature phones now you can make upi payment without internet san
Author
First Published Mar 9, 2022, 3:24 AM IST | Last Updated Mar 9, 2022, 3:24 AM IST

ಮುಂಬೈ (ಮಾ. 9): ಇಂಟರ್ನೆಟ್‌ ಸಂಪರ್ಕವೇ (Internet Connection) ಇಲ್ಲದ ಹಳೆಯ ತಂತ್ರಜ್ಞಾನದ ಫೀಚರ್‌ ಫೋನ್‌ಗಳ (Feature Phone) ಮೂಲಕವೂ ಹಣ ರವಾನಿಸಬಲ್ಲ ‘ಯುಪಿಐ’ (UPI) ಸೇವೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಂಗಳವಾರ ಚಾಲನೆ ನೀಡಿದೆ. ಇದರಿಂದ ದೇಶದಲ್ಲಿರುವ ಸುಮಾರು 40 ಕೋಟಿ ಫೀಚರ್‌ ಫೋನ್‌ ಬಳಕೆದಾರರಿಗೆ ಅನುಕೂಲವಾಗಲಿದೆ.

‘123ಪೇ’ (ಯುಪಿಐ123ಪೇ) ಹೆಸರಿನ ಈ ಸೇವೆಗೆ ಆರ್‌ಬಿಐ ಗವರ್ನರ್‌ ( RBI Governor) ಶಕ್ತಿಕಾಂತ ದಾಸ್‌ (Shaktikanta Das) ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಈವರೆಗೆ ಇಂಟರ್ನೆಟ್‌ ಸಂಪರ್ಕ ಹೊಂದಿದ್ದ ಸ್ಮಾರ್ಟ್‌ಫೋನ್‌ಗಳ (Smart Phone)ಮೂಲಕ ಮಾತ್ರ ಯುಪಿಐ ಸೇವೆ ಲಭ್ಯವಿತ್ತು ಹಾಗೂ ಈ ಸೇವೆ ಬಳಸಿಕೊಂಡು ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ರವಾನಿಸಬಹುದಾಗಿತ್ತು. ಆದರೆ ಆರ್ಥಿಕವಾಗಿ ಹಿಂದುಳಿದು ಕೇವಲ ಫೀಚರ್‌ ಫೋನ್‌ ಹೊಂದಿದವರು ಹಾಗೂ ಗ್ರಾಮೀಣ ಭಾಗದವರು (Rural) ಈ ಸೇವೆಯಿಂದ ವಂಚಿತರಾಗುತ್ತಿದ್ದರು. ಹೀಗಾಗಿ ಈ ವರ್ಗದ ಜನರನ್ನೂ ಯುಪಿಐ ಸೇವೆಗೆ ಸೇರ್ಪಡೆ ಮಾಡುವ ಉದ್ದೇಶದಿಂದ ‘123ಪೇ’ ಸೇವೆ ಆರಂಭಿಸಲಾಗಿದೆ’ ಎಂದರು.

2020-2021ನೇ ಸಾಲಿನಲ್ಲಿ 41 ಲಕ್ಷ ಕೋಟಿ ರು. ಯುಪಿಐ ವಿಧಾನದ ಮೂಲಕ ಹಣಕಾಸು ವ್ಯವಹಾರ (financial transaction) ನಡೆದಿತ್ತು. 2021-22ರಲ್ಲಿ ಅದು 76 ಲಕ್ಷ ಕೋಟಿ ರು. ತಲುಪಿದೆ. ಈಗ ಫೀಚರ್‌ಫೋನ್‌ ಬಳಕೆದಾರರೂ ಯುಪಿಐ ವ್ಯಾಪ್ತಿಗೆ ಬಂದಿರುವ ಕಾರಣ 100 ಲಕ್ಷ ಕೋಟಿ ರು. ವಾರ್ಷಿಕ ವಹಿವಾಟು ನಡೆಯುವ ದಿನ ದೂರವಿಲ್ಲ ಎಂದರು.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ:  ಈ ವ್ಯವಹಾರದ ವಿವರ ಪಡೆಯಲು ‘ಡಿಜಿಸಾಥಿ’ ( DigiSaathi ) ಎಂಬ ಹೆಲ್ಪ್‌ಲೈನ್‌ ( Help Line )  ಅನ್ನು ಆರ್‌ಬಿಐ ಆರಂಭಿಸಿದೆ. www.digisaathi.info ನಲ್ಲಿ ವಿವರ ಪಡೆಯಬಹುದು. ತಮ್ಮ ಫೋನ್‌ ಬಳಸಿ 14431 ಅಥವಾ 1800 891 3333 ಸಹಾಯವಾಣಿಗೆ ಕರೆ ಮಾಡಿದರೆ ಡಿಜಿಟಲ್‌ ಪೇಮೆಂಟ್‌ ( Digital Payments ) ಕುರಿತ ಎಲ್ಲ ವಿವರ ಲಭ್ಯವಿರಲಿದೆ.

Russia Ukraine War ಅಮೆರಿಕ ನಡೆಯಿಂದ ಕಚ್ಚಾ ತೈಲ ಬೆಲೆ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ 130 ದಾಟಿದರೂ ಆಶ್ಚರ್ಯವಿಲ್ಲ!
ಏನಿದು ಯುಪಿಐ ಸೇವೆ?: ಜನರು ತಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾಯಿಸಲು ಬ್ಯಾಂಕ್‌ ಖಾತೆ ಸಂಖ್ಯೆ ಪಡೆಯಬೇಕಿಲ್ಲ. ಬ್ಯಾಂಕ್‌ಗೆ ( Bank )ಸಂಯೋಜಿತವಾಗಿರುವ ಮೊಬೈಲ್‌ ಸಂಖ್ಯೆ ಬಳಸಿಯೇ ಹಣ ವರ್ಗಾಯಿಸಬಹುದು. ಇದು ಯುಪಿಐ ಸೇವೆ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ನೋಟು ಅಮಾನ್ಯೀಕರಣದ (demonetization) ನಂತರ UPI ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿ ಹೊರಹೊಮ್ಮಿದೆ. ವಹಿವಾಟಿನ ಪರಿಮಾಣದ ದೃಷ್ಟಿಯಿಂದ ಇದು ದೇಶದ ಏಕೈಕ ಅತಿದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯಾಗಿದೆ, ಇದು ಅದರ ವ್ಯಾಪಕ ಸ್ವೀಕಾರವನ್ನು ಸೂಚಿಸುತ್ತದೆ.

Gender Disparity: ಭಾರತದಲ್ಲಿ ಪ್ರತಿ 5 ಹೂಡಿಕೆದಾರರಲ್ಲಿ ಕೇವಲ ಒಬ್ಬಳು ಮಹಿಳೆ!
ಫೀಚರ್‌ ಫೋನ್‌ ಬಳಸಿ ವ್ಯವಹಾರ ಹೇಗೆ?

- ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಫೀಚರ್‌ ಫೋನ್‌ಗೆ ಲಿಂಕ್‌ ಮಾಡಿ ಪಿನ್‌ ಸೃಷ್ಟಿಸಬೇಕು.

-ಬಳಿಕ ನಾಲ್ಕು ವಿಧಾನದಿಂದ ಹಣ ವರ್ಗಾವಣೆ, ಬಿಲ್‌ ಪಾವತಿ ಮಾಡಬಹುದು

- ಇಂಟರಾರ‍ಯಕ್ಟಿವ್‌ ವಾಯ್ಸ್ ರೆಸ್ಪಾನ್ಸ್‌ (ಐವಿಆರ್‌) ನಂಬರ್‌ಗೆ ಕರೆ ಮಾಡಿ ಅಲ್ಲಿನ ಸೂಚನೆ ಪಾಲಿಸಿ ಹಣ ಪಾವತಿಸಬಹುದು

- ಫೀಚರ್‌ ಫೋನ್‌ಗಳಲ್ಲಿರುವ ಆ್ಯಪ್‌ಗಳ ಮೂಲಕವೂ ಹಣದ ವಹಿವಾಟು ನಡೆಸಬಹುದು

- ಮಿಸ್ಡ್‌ ಕಾಲ್‌ ಕೊಡುವ ಮೂಲಕ ಆ ನಂತರ ಹಣ ವರ್ಗಾಯಿಸಬಹುದು.

- ಬ್ಯಾಂಕ್‌ ಖಾತೆಗಳಲ್ಲಿನ ಹಣದ ವಿವರ ಪಡೆಯಬಹುದು

Latest Videos
Follow Us:
Download App:
  • android
  • ios