ನಿಯಮ ಉಲ್ಲಂಘಿಸಿದ ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಿದ ಆರ್ ಬಿಐ; ಎಸ್ ಬಿಐ,ಕೆನರಾ, ಸಿಟಿ ಯೂನಿಯನ್ ಬ್ಯಾಂಕಿಗೆ 3 ಕೋಟಿ ದಂಡ

ನಿಯಮ ಉಲ್ಲಂಘಿಸಿದ ಬ್ಯಾಂಕುಗಳಿಗೆ ಆರ್ ಬಿಐ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ. ಎಸ್ ಬಿಐ, ಕೆನರಾ, ಸಿಟಿ ಯೂನಿಯನ್ ಬ್ಯಾಂಕಿಗೆ  ಒಟ್ಟು  3 ಕೋಟಿ ರೂ. ದಂಡ ವಿಧಿಸಿದೆ. 


 

RBI Imposes Nearly Rs 3 Cr Fine On SBI Canara Bank and City Union Bank anu

Business Desk:ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಕೆನರಾ ಬ್ಯಾಂಕ್ ಹಾಗೂ ಸಿಟಿ ಯೂನಿಯನ್ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸುಮಾರು 3 ಕೋಟಿ ರೂ. ಮೊತ್ತದ ದಂಡ ವಿಧಿಸಿದೆ. ಠೇವಣಿದಾರರ ಶಿಕ್ಷಣ ಜಾಗೃತಿ ನಿಧಿ ಯೋಜನೆ  2014ಕ್ಕೆ ಸಂಬಂಧಿಸಿ ನಿರ್ದಿಷ್ಟ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್ ಬಿಐ) ಆರ್ ಬಿಐ 2 ಕೋಟಿ ರೂ. ದಂಡ ವಿಧಿಸಿದೆ. ಇನ್ನು ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್  ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಹಾಗೂ ಅಡ್ವಾನ್ಸಗೆ ಸಂಬಂಧಿಸಿದ ನಿಯಮಗಳಿಗೆ ಆರ್ ಬಿಐ ರೂಪಿಸಿರುವ ನಿರ್ದಿಷ್ಟ ನಿರ್ದೇಶನಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ 66 ಲಕ್ಷ ರೂ. ದಂಡ ವಿಧಿಸಿದೆ. ಹಾಗೆಯೇ ಕೆವೈಸಿ ಸಂಬಂಧಿಸಿದ ನಿಯಮಗಳನ್ನು ಕೂಡ ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್ ಉಲ್ಲಂಘಿಸಿದೆ ಎಂದು ಆರ್ ಬಿಐ ತಿಳಿಸಿದೆ. ಇನ್ನು ಕೆನರಾ ಬ್ಯಾಂಕಿಗೆ ನಿರ್ದಿಷ್ಟ ನಿರ್ದೇಶನಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಆರ್ ಬಿಐ 32.30 ಲಕ್ಷ ರೂ. ದಂಡ ವಿಧಿಸಿದೆ.

ಇನ್ನು ಬ್ಯಾಂಕಿಗೇತರ ಹಣಕಾಸು ಕಂಪನಿಗಳಿಗೆ ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಒಡಿಶಾದ ರೋರ್ಕೆಲಾದ ಒಸಿಯನ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್ ಮೇಲೆ ಆರ್ ಬಿಐ 16 ಲಕ್ಷ ರೂ. ದಂಡ ವಿಧಿಸಿದೆ. 

Bank Holidays: ಮಾರ್ಚ್ ತಿಂಗಳಲ್ಲಿ 14 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ..

ಇತ್ತೀಚಿನ ದಿನಗಳಲ್ಲಿ ಆರ್ ಬಿಐ ಬ್ಯಾಂಕ್, ಹಣಕಾಸು ಸಂಸ್ಥೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.  ಇತ್ತೀಚೆಗಷ್ಟೇ ನಿಮಯ ಉಲ್ಲಂಘನೆ  ಆರೋಪದಲ್ಲಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ನಿರ್ಬಂಧ ವಿಧಿಸಿತ್ತು. ಇದರಿಂದ ಮಾರ್ಚ್ 15ರ ಬಳಿಕ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಕೆಲ ಸೇವೆಗಳು ಬಂದ್ ಆಗಲಿವೆ. ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್‌ಗಳಿಗೆ ಹಣ ಸ್ವೀಕರಿಸದಂತೆ ಪೇಟಿಎಂ ಬ್ಯಾಂಕ್‌ಗೆ ನಿರ್ಬಂಧ ಹೇರಿರುವ ರಿಸರ್ವ್‌ ಬ್ಯಾಂಕ್, ಪೇಟಿಎಂ ಆ್ಯಪ್‌ನ ಮೂಲಕ ಯುಪಿಐ ಸೇವೆ ಮುಂದುವರಿಕೆಯಾಗುವಂತೆ ನೋಡಿಕೊಳ್ಳಲು ನೆರವಾಗುವಂತೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೆಷನ್‌ (ಎನ್‌ಪಿಸಿಐ)ಗೆ ಸೂಚಿಸಿದೆ. ಯುಪಿಐ ಗ್ರಾಹಕರು ತಡೆರಹಿತ ಸೇವೆಯನ್ನು ಪಡೆಯುವ ಸಲುವಾಗಿ ‘ಥರ್ಡ್ ಪಾರ್ಟಿ ಅಪ್ಲಿಕೇಷನ್‌ ಪ್ರೊವೈಡರ್‌’ ಆಗುವ ಬೇಡಿಕೆಯನ್ನು ಪರಿಶೀಲಿಸುವಂತೆ ರಿಸರ್ವ್‌ ಬ್ಯಾಂಕ್‌ ನಿರ್ದೇಶಿಸಿದೆ. 

ಪೇಟಿಎಂಗೆ ಆರ್ ಬಿಐ ನಿರ್ಬಂಧ, ಈ ಮೂರು ಕಂಪನಿಗಳಿಗೆ ಭಾರೀ ಲಾಭ!

ಈ ತಿಂಗಳ ಎರಡನೇ ವಾರದಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ರೆಪೋ ದರಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಮೂಲಕ ಸತತ ಆರನೇ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಇಎಂಐಯಲ್ಲಿ ಯಾವುದೇ ಬದಲಾವಣೆಯಾಗೋದಿಲ್ಲ. ಇದು ಸಹಜವಾಗಿ ಸಾಲಗಾರರಿಗೆ ನೆಮ್ಮದಿ ನೀಡಿದೆ. ರೆಪೋ ದರ ಅನ್ನೋದು ಆರ್ ಬಿಐ  ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆಯಿಂದ ಸಾಲಗಾರರು ಕಂಗೆಟ್ಟಿದ್ದರು. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚುತ್ತದೆ. ಇಲ್ಲವಾದರೆ ಸಾಲದ ಅವಧಿ ವಿಸ್ತರಣೆಯಾಗುತ್ತದೆ. 

Latest Videos
Follow Us:
Download App:
  • android
  • ios