ಎಸ್ ಬಿಐಗೆ 1.3 ಕೋಟಿ ರೂ. ದಂಡ; ನಿಯಮ ಉಲ್ಲಂಘಿಸಿದ ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಿದ ಆರ್ ಬಿಐ

ನಿಯಮ ಉಲ್ಲಂಘಿಸಿದ ಬ್ಯಾಂಕುಗಳಿಗೆ ಆರ್ ಬಿಐ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ. ಆರ್ ಬಿಐ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಇಂಡಿಯನ್ ಬ್ಯಾಂಕ್, ಪಂಜಾಬ್ & ಸಿಂಧ್ ಬ್ಯಾಂಕಿಗ ದಂಡ ವಿಧಿಸಿದೆ. 

RBI imposes monetary penalty on State Bank of India Indian Bank Punjab Sind Bank anu

ಮುಂಬೈ (ಸೆ.26): ವಿವಿಧ ನಿಯಂತ್ರಕ ನಿಯಮಗಳನ್ನು ಮೀರಿದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸೇರಿದಂತೆ ಸರ್ಕಾರಿ ಸ್ವಾಮ್ಯದ ಮೂರು ಬ್ಯಾಂಕ್ ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್  (ಆರ್ ಬಿಐ)  ಸುಮಾರು ಒಂದರಿಂದ ಎರಡು ಕೋಟಿ ರೂ. ದಂಡ ವಿಧಿಸಿದೆ. ಇಂಡಿಯನ್ ಬ್ಯಾಂಕ್, ಪಂಜಾಬ್ & ಸಿಂಧ್ ಬ್ಯಾಂಕ್ (ಪಿಎಸ್‌ಬಿ)  ಇನ್ನೆರಡು ಬ್ಯಾಂಕ್ ಗಳಾಗಿವೆ. ಈ ಬ್ಯಾಂಕ್ ಗಳು ಆರ್ ಬಿಐ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಲಾಗಿದೆ. ಈ ಬ್ಯಾಂಕ್ ಗಳಿಗೆ ಮಾರ್ಗಸೂಚಿಗಳನ್ನು ಪಾಲಿಸದ ಬಗ್ಗೆ ಸ್ಪಷ್ಟನೆ ನೀಡುವಂತೆ ಮೊದಲು ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಗೆ ಬ್ಯಾಂಕ್ ಗಳು ಉತ್ತರಿಸಿದ ಬಳಿಕ ಆರ್ ಬಿಐ ದಂಡ ವಿಧಿಸುವ ನಿರ್ಧಾರ ಕೈಗೊಂಡಿದೆ. ಸಾಲ ಹಾಗೂ ಮುಂಗಡಕ್ಕೆ ಸಂಬಂಧಿಸಿದ ಆರ್ ಬಿಐ ಮಾರ್ಗಸೂಚಿಗಳು, ಕೆವೈಸಿ ನಿರ್ದೇಶನಗಳು ಹಾಗೂ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿ ಯೋಜನೆ ಕೆಲವು ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಗಳಿಗೆ ದಂಡ ವಿಧಿಸಲಾಗಿದೆ.

ಎಸ್ ಬಿಐಗೆ  1.3 ಕೋಟಿ ರೂ. ದಂಡ 
ಸಾಲ ಹಾಗೂ ಮುಂಗಡಕ್ಕೆ ಸಂಬಂಧಿಸಿದ ಆರ್ ಬಿಐ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಎಸ್ ಬಿಐಗೆ 1.3 ಕೋಟಿ ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಇಂಟ್ರ-ಗ್ರೂಪ್ ಟ್ರಾನ್ಸಕ್ಷನ್ ಹಾಗೂ ಎಕ್ಸ್ ಪೋಸರ್' ನಿಯಮಗಳನ್ನು ಕೂಡ ಎಸ್ ಬಿಐ ಉಲ್ಲಂಘಿಸಿದೆ ಎಂದು ಆರ್ ಬಿಐ ಹೇಳಿದೆ. 

ಬರೀ 5 ದಿನಗಳಷ್ಟೇ ಬಾಕಿ, 2 ಸಾವಿರ ರೂ. ನೋಟಿದ್ರೆ ಬೇಗ ಬ್ಯಾಂಕಿಗೆ ನೀಡಿ; ಚಲಾವಣೆಯಲ್ಲಿ ಇನ್ನೂ 240 ಬಿಲಿಯನ್ ರೂ.!

ಇಂಡಿಯನ್ ಬ್ಯಾಂಕ್ ಗೆ 1.62 ಕೋಟಿ ರೂ. ದಂಡ 
ಸಾಲ ಮತ್ತು ಮುಂಗಡ, ಕೆವೈಸಿ ಹಾಗೂ ಆರ್ ಬಿಐ ನಿರ್ದೇಶನಗಳು 2016 ಪಾಲಿಸದ ಹಿನ್ನೆಲೆಯಲ್ಲಿ ಇಂಡಿಯನ್ ಬ್ಯಾಂಕ್ ಮೇಲೆ  ಆರ್ ಬಿಐ  1.62 ಕೋಟಿ ರೂ. ದಂಡ ವಿಧಿಸಿದೆ. 

ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ 
ಇನ್ನು ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿ ಯೋಜನೆ ಕೆಲವು ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಮೇಲೆ ಆರ್ ಬಿಐ 1 ಕೋಟಿ ರೂ. ದಂಡ ವಿಧಿಸಿದೆ.  ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆ 2014-ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಸೆಕ್ಷ್  26A ಕುರಿತ ಆರ್ ಬಿಐ ನಿರ್ದೇಶನಗಳನ್ನು ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಅನುಸರಿಸಿಲ್ಲ ಎಂದು ಹೇಳಲಾಗಿದೆ.

ಫೆಡರಲ್ ಫೈನಾನ್ಷಿಯಲ್ ಸರ್ವೀಸ್ ಗೂ ದಂಡ
ಫೆಂಡ್ ಬ್ಯಾಂಕ್ ಫಿನ್ ಟೆಕ್ ಸಂಸ್ಥೆ ಫೆಡ್ ಬ್ಯಾಂಕ್‌ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಮೇಲೆ ಕೂಡ ಆರ್ ಬಿಐ 8.80 ಲಕ್ಷ ರೂ. ದಂಡ ವಿಧಿಸಿದೆ. ಎನ್ ಬಿಎಫ್ ಸಿಗಳಲ್ಲಿ ವಂಚನೆಗಳನ್ನು ನಿಯಂತ್ರಿಸಲು ಇರುವ ನಿರ್ದೇಶನಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಈ ಸಂಸ್ಥೆಗೆ ದಂಡ ವಿಧಿಸಲಾಗಿದೆ. 

ಸಾಲದ ಕಂತು ಡೆಡ್‌ಲೈನ್‌ ಬಂದ್ರೂ ಕಟ್ಟದೋರಿಗೆ ಚಾಕೊಲೇಟ್‌ ಗಿಫ್ಟ್‌ ಕೊಡಲಿದೆ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ!

ಬ್ಯಾಂಕಿಗೆ ದಂಡ ವಿಧಿಸುತ್ತಿರೋದು ಇದೇ ಮೊದಲೇನಲ್ಲ
ಆರ್ ಬಿಐ ಬ್ಯಾಂಕುಗಳಿಗೆ ದಂಡ ವಿಧಿಸುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಆರ್ ಬಿಐ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 84.50 ಲಕ್ಷ ರೂ. ದಂಡ ವಿಧಿಸಿತ್ತು. ಕೆನರಾ ಬ್ಯಾಂಕಿಗೆ ಕೂಡ 2.92 ಕೋಟಿ ರೂ. ದಂಡ ವಿಧಿಸಿತ್ತು. ಹಾಗೆಯೇ ಎಚ್ ಎಸ್ ಬಿಸಿ ಬ್ಯಾಂಕ್ ಮೇಲೆ ಆರ್ ಬಿಐ 1.73 ಕೋಟಿ ರೂ. ದಂಡ ವಿಧಿಸಿದೆ. 


 

Latest Videos
Follow Us:
Download App:
  • android
  • ios