ನಿಯಮ ಉಲ್ಲಂಘಿಸಿದ ಮಾಸ್ಟರ್‌ಕಾರ್ಡ್‌ಗೆ RBI ನಿರ್ಬಂಧ; ಜುಲೈ 22 ರಿಂದ ಆದೇಶ ಜಾರಿ!
- ನಿಯಮ ಉಲ್ಲಂಘಿಸಿದ ಮಾಸ್ಟರ್‌ಕಾರ್ಡ್‌ಗೆ ಸಂಕಷ್ಟ
- ಮಾಸ್ಟರ್‌ಕಾರ್ಡ್‌ಗೆ ನಿರ್ಬಂಧ ಹಾಕಿದ RBI
- ಜುಲೈ 22 ರಿಂದ ಹೊಸ ಗ್ರಾಹಕರಿಗೆ ಕಾರ್ಡ್ ವಿತರಣೆ ಇಲ್ಲ
ನವದೆಹಲಿ(ಜು.14): ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ರೂಪದಲ್ಲಿ ಮಾಸ್ಟರ್‌ಕಾರ್ಡ್ ಸೇವೆ ನೀಡುತ್ತಿದೆ. ಹಣ ಹಿಂಪಡೆಯುವಿಕೆ, ಪಾವತಿ ಸೇರಿದ ವಹಿವಾಟುಗಳಲ್ಲಿ ಬಹುತೇಕರು ಮಾಸ್ಟರ್‌ಕಾರ್ಡ್ ಬಳಕೆ ಮಾಡುತ್ತಾರ. ಇದೀಗ ನಿಯಮ ಉಲ್ಲಂಘಿಸಿದ ಮಾಸ್ಟರ್‌ಕಾರ್ಡ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸಿದೆ.
ATM ಹಣ ವಿತ್‌ಡ್ರಾ ಶುಲ್ಕ ಹೆಚ್ಚಿಸಿದ RBI; ಆಗಸ್ಟ್ 1 ರಿಂದ ಜಾರಿ!
ಪಾವತಿ ವ್ಯವಸ್ಥೆಗಳ ಡೇಟಾವನ್ನು ಸಂಗ್ರಹಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾವತಿ ವ್ಯವಸ್ಥೆ ಆಪರೇಟರ್ ಮಾಸ್ಟರ್‌ಕಾರ್ಡ್ ವಿರುದ್ಧ ಆರ್‌ಬಿಐ ಕ್ರಮ ಕೈಗೊಂಡಿದೆ. ಹೀಗಾಗಿ ಜುಲೈ 22 ರಿಂದ ಹೊಸ ಗ್ರಾಹಕರಿಗೆ ಮಾಸ್ಟರ್‌ಕಾರ್ಡ್ ವಿತರಿಸದಂತೆ ನಿರ್ಬಂಧ ಹೇರಿದೆ.
ಈಗಾಗಲೇ ಮಾಸ್ಟರ್‌ಕಾರ್ಡ್ ಬಳಕೆ ಮಾಡುತ್ತಿರುವ ಗ್ರಾಹಕರು ಆತಂಕ ಪಡಬೇಕಿಲ್ಲ. ಅಸ್ತಿತ್ವದಲ್ಲಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಈ ನಿರ್ಬಂಧ ಮಾಸ್ಟರ್‌ಕಾರ್ಡ್‌ಗೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ನಿರ್ಬಂಧ ವಿಧಿಸಿರುವುದಾಗಿದೆ.
ಚೆಕ್ ಮೂಲಕ ಹಣ ಪಾವತಿ ಇನ್ನು ಸುಲಭವಿಲ್ಲ, ಆರ್‌ಬಿಐ ಹೊಸ ನಿಯಮ ಜಾರಿ!
ಕಾರ್ಡ್ ನೀಡುವ ಬ್ಯಾಂಕುಗಳು ಮತ್ತು ಬ್ಯಾಂಕೇತರರಿಗೆ ಮಾಸ್ಟರ್ ಕಾರ್ಡ್ ಸಲಹೆ ನೀಡಬೇಕು. ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ 2007 (ಪಿಎಸ್‌ಎಸ್ ಕಾಯ್ದೆ) ಸೆಕ್ಷನ್ 17 ರ ಅಡಿಯಲ್ಲಿ ಆರ್‌ಬಿಐಗೆ ನೀಡಿರುವ ಅಧಿಕಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.