Asianet Suvarna News Asianet Suvarna News

UPI Payment Limit ಐಪಿಒ, ಸರ್ಕಾರಿ ಬಾಂಡ್ ಹೂಡಿಕೆಗೆ ಯುಪಿಐ ವಹಿವಾಟು ಮಿತಿ 5ಲಕ್ಷ ರೂ.ಗೆ ಏರಿಕೆ

UPI ಪಾವತಿ ವ್ಯವಸ್ಥೆಯನ್ನು ದೇಶಾದ್ಯಂತ ಜನಪ್ರಿಯಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿಯೇ ಈಗ ಐಪಿಒ, ಸರ್ಕಾರಿ ಬಾಂಡ್ಗಳಲ್ಲಿ ಯುಪಿಐ ಮೂಲಕ ಮಾಡೋ ವಹಿವಾಟಿನ ಮಿತಿಯನ್ನು ಹೆಚ್ಚಿಸಿದೆ.

RBI hikes UPI transactions limit for IPOs govt bonds from 2lakh to 5lakh anu
Author
Bangalore, First Published Dec 9, 2021, 2:11 PM IST

ನವದೆಹಲಿ (ಡಿ.9): ಯುಪಿಐ (UPI) ಪಾವತಿಗೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರ ಪ್ರಯತ್ನಿಸುತ್ತಿರೋ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ ಪಾವತಿಗೆ ಸಂಬಂಧಿಸಿ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.  ರೀಟೇಲ್ ಡೈರೆಕ್ಟ್ ಸ್ಕೀಮ್ (RDS)ಮೂಲಕ ಸರ್ಕಾರದ ಸೆಕ್ಯುರಿಟಿಗಳು (government securities) ಹಾಗೂ ಐಪಿಒಗಳಲ್ಲಿ (IPO) ಹೂಡಿಕೆ ಮಾಡಲು ಯುಪಿಐ (UPI) ಬಳಸಿ ಮಾಡೋ ವಹಿವಾಟಿನ ಮಿತಿಯನ್ನು 2ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ (RBI) ಗವರ್ನರ್ (Governor)ಶಕ್ತಿಕಾಂತ ದಾಸ್ ಬುಧವಾರ (ಡಿ.8) ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ತಿಳಿಸಿದ್ದಾರೆ.

Forbes Most Powerful Women list: ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡ ನಿರ್ಮಲಾ ಸೀತಾರಾಮನ್

ಏರಿಕೆ ಮಾಡಲು ಕಾರಣವೇನು?
ದೇಶದಲ್ಲಿ ಬಹುತೇಕ ಚಿಲ್ಲರೆ ಹೂಡಿಕೆದಾರರು(Retail Investors) ಸರ್ಕಾರಿ ಬಾಂಡ್ ಗಳು(Government bonds) ಹಾಗೂ ಐಪಿಒಗಳಲ್ಲಿ ಹೂಡಿಕೆ(Invest) ಮಾಡಲು ಯುಪಿಐ ಪಾವತಿಯನ್ನೇ ಬಳಸುತ್ತಾರೆ. ಆದ್ರೆ ಈ ತನಕ ಯುಪಿಐ ಮೂಲಕ 2ಲಕ್ಷ ರೂಪಾಯಿಯಷ್ಟೇ ಪಾವತಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ 2ಲಕ್ಷ ರೂ.ಗಿಂತ ಹೆಚ್ಚಿನ ಹೂಡಿಕೆಗೆ ಬೇರೆ ಪಾವತಿ ವಿಧಾನವನ್ನು ಆಯ್ದುಕೊಳ್ಳೋದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಚಿಲ್ಲರೆ ಹೂಡಿಕೆದಾರರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆರ್ ಬಿಐ ಯುಪಿಐ ವಹಿವಾಟಿನ ಮಿತಿಯನ್ನು 2ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಹೆಚ್ಚಿಸಿದೆ. 'ಇತ್ತೀಚಿನ ದಿನಗಳಲ್ಲಿ ಐಪಿಒಗಳಿಗೆ ಯುಪಿಐ ಅತ್ಯಂತ ಜನಪ್ರಿಯ ಪಾವತಿ ಮಾಧ್ಯಮವಾಗಿದೆ. ಐಪಿಒನಲ್ಲಿ 2ಲಕ್ಷ ರೂ.ನಿಂದ 5ಲಕ್ಷ ರೂ.ತನಕದ ಅರ್ಜಿಗಳ ಪಾಲು ಒಟ್ಟು ಚಂದಾದಾರಿಕೆ ಅರ್ಜಿಗಳಲ್ಲಿ ಶೇ.10ರಷ್ಟಿದೆ. ಯುಪಿಐ ವ್ಯವಸ್ಥೆ ಮೂಲಕ ಮಾಡೋ ವಹಿವಾಟಿನ ಮಿತಿಯನ್ನು 2020ರ ಮಾರ್ಚ್ ನಲ್ಲಿ 1ಲಕ್ಷ ರೂ.ನಿಂದ 2ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು' ಎಂದು ಆರ್ ಬಿಐ ಗರ್ವನರ್ ಹೇಳಿದರು. ' ಹಣಕಾಸು ಮಾರುಕಟ್ಟೆಯಲ್ಲಿ ಚಿಲ್ಲರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ರಿಸರ್ವ್ ಬ್ಯಾಂಕ್ ಅನೇಕ ಪ್ರಯತ್ನಗಳನ್ನು ನಡೆಸುತ್ತಿದೆ. ಅದರ ಭಾಗವಾಗಿಯೇ ಸರ್ಕಾರಿ ವಲಯಗಳಲ್ಲಿ ಹೂಡಿಕೆ ಮಾಡಲು ಚಿಲ್ಲರೆ ನೇರ ಯೋಜನೆ (RDS)ಪರಿಚಯಿಸಲಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಇತರ ಆಯ್ಕೆಗಳ ಜೊತೆ ಯುಪಿಐ ಬಳಸಿ ಕೂಡ ಗ್ರಾಹಕರು ಪ್ರೈಮರಿ ಹಾಗೂ ಸೆಕೆಂಡರಿ ಮಾರುಕಟ್ಟೆಗಳಲ್ಲಿ ಪಾಲ್ಗೊಳ್ಳಬಹುದು' ಎಂದು ಗವರ್ನರ್ ತಿಳಿಸಿದ್ದಾರೆ. 

ಅರಬ್ ರಾಷ್ಟ್ರಗಳಿಗೆ ಆಹಾರ ಉತ್ಪನ್ನ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಭಾರತ

ಇಂಟರ್ನೆಟ್‌ ಇಲ್ಲದೆ ಫೀಚರ್ ಫೋನ್ ನಿಂದ ಯುಪಿಐ  ಪಾವತಿ
ಯುಪಿಐ (UPI)ಮೂಲಕ ಹಣ ಪಾವತಿಸೋ ವ್ಯವಸ್ಥೆಯನ್ನು ಸರಳಗೊಳಿಸೋ ಮೂಲಕ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಅದರ ಭಾಗವಾಗಿಯೇ ಇಂಟರ್ನೆಟ್ ಸೌಲ್ಯಭ್ಯವಿಲ್ಲದ  (Internet) ಫೀಚರ್ ಫೋನ್ ಮೂಲಕ ಕೂಡ ಯುಪಿಐ ಪಾವತಿ ಸಾಧ್ಯವಾಗೋವಂತೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಪ್ರಸ್ತುತ ಇಂಟರ್ನೆಟ್ ಸೌಲಭ್ಯವಿರೋ ಮೊಬೈಲ್ ಗಳ ಮೂಲಕ ಮಾತ್ರ ಯುಪಿಐ ಪಾವತಿ ಸಾಧ್ಯವಾಗಿದೆ. ಆದ್ರೆ ಕಡಿಮೆ ಬೆಲೆಯ ಇಂಟರ್ನೆಟ್ ಸೌಲಭ್ಯ ಹೊಂದಿರದ ಮೊಬೈಲ್ ಬಳಕೆದಾರರಿಗೆ ಈ ಸೇವೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಚಿಲ್ಲರೆ ವ್ಯವಹಾರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಳಕೆಯಾಗುತ್ತಿರೋ ಡಿಜಿಟಲ್ ಪಾವತಿ ವಿಧಾನವೆಂದ್ರೆ ಯುಪಿಐ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೊದಲಾದ ಅಪ್ಲಿಕೇಷನ್ ಮೂಲಕ ಸದ್ಯ ಜನರು ಯುಪಿಐ ವ್ಯವಸ್ಥೆ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗ್ರಾಹಕರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಈ ವ್ಯವಸ್ಥೆ ನೆರವು ನೀಡುತ್ತದೆ ಎಂಬದು ಆರ್ ಬಿಐ ವಿಶ್ವಾಸ. ಫೀಚರ್ ಫೋನ್ ಗಳಲ್ಲಿನ ಯುಪಿಐ ಆಧರಿತ ಪಾವತಿ ವ್ಯವಸ್ಥೆಯನ್ನು ಆರ್ ಬಿಐನ ರೆಗ್ಯುಲೇಟರಿ ಸ್ಯಾಂಡ್ ಬಾಕ್ಸ್ ನಿಯಂತ್ರಿಸಲಿದೆ ಎಂಬ ಮಾಹಿತಿಯನ್ನು ಗವರ್ನರ್ ನೀಡಿದ್ದಾರೆ.


 

Follow Us:
Download App:
  • android
  • ios