Asianet Suvarna News Asianet Suvarna News

India No.1 Food Supplier:ಅರಬ್ ರಾಷ್ಟ್ರಗಳಿಗೆ ಆಹಾರ ಉತ್ಪನ್ನ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಭಾರತ

ಕೊರೋನಾ ಜಗತ್ತಿಗೆ ಕಾಲಿಟ್ಟ ಬಳಿಕ ಅರಬ್ ರಾಷ್ಟ್ರಗಳಿಗೆ ಭಾರತದಿಂದ ಆಹಾರ ಉತ್ಪನ್ನಗಳ ರಫ್ತಿನ ಪ್ರಮಾಣ ಹೆಚ್ಚಿದ್ದು,15 ವರ್ಷಗಳ ಬಳಿಕ ಬ್ರೆಜಿಲ್ ಅನ್ನು ಹಿಂದಿಕ್ಕಿ ಭಾರತ ನಂ.1 ಸ್ಥಾನ ಅಲಂಕರಿಸಿದೆ. 

First time in 15 years India become No.1 food supplier to Arab countries anu
Author
Bangalore, First Published Dec 8, 2021, 6:01 PM IST
  • Facebook
  • Twitter
  • Whatsapp

ಸಾವೊ ಪೌಲೊ (ಡಿ.8):  ಕೊರೋನಾ ವೈರಸ್ (Corona virus) ಭಾರತದ ಆರ್ಥಿಕತೆಗೆ ಸಾಕಷ್ಟು ಹೊಡೆತ ನೀಡಿದ್ದರೂ ಕೆಲವೊಂದು ವಿಷಯಗಳಲ್ಲಿ ಸಕಾರಾತ್ಮಕ ಪರಿಣಾಮವನ್ನೂ ಸೃಷ್ಟಿಸಿದೆ. ಅರಬ್ ರಾಷ್ಟ್ರಗಳಿಗೆ(Arab countries) ಆಹಾರ (Food)ಉತ್ಪನ್ನಗಳ ಪೂರೈಕೆ ಮಾಡೋ ದೇಶಗಳ ಪಟ್ಟಿಯಲ್ಲಿ ಭಾರತ (India)ಈಗ ನಂ.1 ಸ್ಥಾನದಲ್ಲಿರೋದು ಇದಕ್ಕೆ ತಾಜಾ ಉದಾಹರಣೆ. ಹೌದು, ಅರಬ್ ರಾಷ್ಟ್ರಗಳಿಗೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡೋ ರಾಷ್ಟ್ರಗಳಲ್ಲಿ ಭಾರತವೀಗ ಬ್ರೆಜಿಲ್ (Brazil) ಅನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದೆ.  ಇದಕ್ಕೆ ಮುಖ್ಯಕಾರಣ ಕೊರೋನಾ ಎಂದು ಹೇಳಲಾಗಿದೆ. ಬರೋಬರಿ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಮೊದಲ ಸ್ಥಾನ ಅಲಂಕರಿಸಿರೋದು ವಿಶೇಷ. ಅರಬ್- ಬ್ರೆಜಿಲ್ ವಾಣಿಜ್ಯ ಚೇಂಬರ್(Arab-Brazil Chamber of Commerce)ರಾಯ್ಟರ್ಸ್(Reuters) ಸುದ್ದಿಸಂಸ್ಥೆಗೆ ಈ ಮಾಹಿತಿಯನ್ನು ನೀಡಿದೆ. 

ಅರಬ್ ರಾಷ್ಟ್ರಗಳು ಬ್ರೆಜಿಲ್ ನ ಅತ್ಯಂತ ಪ್ರಮುಖ ವಾಣಿಜ್ಯ ಪಾಲುದಾರರು. ಆದ್ರೆ ಕೊರೋನಾ ಮಹಾಮಾರಿ ಜಗತ್ತನ್ನು ಒಕ್ಕರಿಸಿಕೊಂಡ ಬಳಿಕ ಬ್ರೆಜಿಲ್ ನಿಂದ ಅರಬ್ ರಾಷ್ಟ್ರಗಳಿಗೆ ಆಹಾರ ಉತ್ಪನ್ನಗಳ ಪೂರೈಕೆ ಕಷ್ಟಕರವಾಯ್ತು. ಎರಡೂ ರಾಷ್ಟ್ರಗಳ ನಡುವಿನ ದೂರವೂ ಆಹಾರ ಪೂರೈಕೆ ಮೇಲೆ ಪರಿಣಾಮ ಬೀರಿತು. ಈ ಸಮಯದಲ್ಲಿ ಅರಬ್ ರಾಷ್ಟ್ರಗಳು ಭಾರತವನ್ನು ನೆಚ್ಚಿಕೊಂಡವು. ಪರಿಣಾಮ ಭಾರತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉತ್ಪನ್ನಗಳನ್ನು ಅರಬ್ ರಾಷ್ಟ್ರಗಳಿಗೆ ಪೂರೈಕೆ ಮಾಡಿತು. ಅರಬ್ ರಾಷ್ಟ್ರಗಳ ಒಕ್ಕೂಟದಲ್ಲಿ 22 ರಾಷ್ಟ್ರಗಳಿವೆ. ಕಳೆದ ವರ್ಷ ಈ ರಾಷ್ಟ್ರಗಳು ಆಮದು ಮಾಡಿಕೊಂಡ  ಕೃಷಿ ಉದ್ಯಮ(Agrobusiness) ಸಂಬಂಧಿ ಉತ್ಪನ್ನಗಳಲ್ಲಿ ಬ್ರೆಜಿಲ್ ಪಾಲು ಶೇ.8.15ರಷ್ಟಿದ್ದರೆ, ಭಾರತದ ಪಾಲು ಶೇ.8.25ರಷ್ಟಿದೆ. ಈ ಮೂಲಕ ಅರಬ್ ರಾಷ್ಟ್ರಗಳೊಂದಿಗಿನ ಬ್ರೆಜಿಲ್ ನ15 ವರ್ಷಗಳ ಅಧಿಪತ್ಯಕ್ಕೆ ಭಾರತ ಕೊನೆ ಹಾಡಿದೆ. 

Bombay Stock Exchange: ಒಮಿಕ್ರಾನ್ ಭೀತಿಯಿಂದ ಹೊರಬಂದ ಷೇರುಮಾರುಕಟ್ಟೆ, ಮತ್ತೆ ಪುಟಿದ್ದೆದ್ದ ಸೆನ್ಸೆಕ್ಸ್

ಕೊರೋನಾ ಕಾಣಿಸಿಕೊಳ್ಳೋದಕ್ಕಿಂತ ಮುನ್ನ ಬ್ರೆಜಿಲ್ ನಿಂದ ಸೌದಿ ಅರೇಬಿಯಾಕ್ಕೆ ಹಡಗುಗಳು (Ships) ಪ್ರಯಾಣಿಸಲು 30 ದಿನಗಳು ಬೇಕಾಗಿತ್ತು. ಆದ್ರೆ ಕೊರೋನಾ ಬಿಕ್ಕಟ್ಟು ಪ್ರಾರಂಭವಾದ ಬಳಿಕ ಈ ಅವಧಿ 60 ದಿನಗಳಿಗೆ ಹೆಚ್ಚಳಗೊಂಡಿದೆ. ಆದ್ರೆ ಭಾರತದಿಂದ ಸೌದಿ ಅರೇಬಿಯಾಕ್ಕಿರೋ ಸಮುದ್ರ ಮಾರ್ಗದಲ್ಲಿ ಹಡಗುಗಳು ಸಂಚರಿಸಲು ಇಷ್ಟು ದೀರ್ಘಾವಧಿ ಅಗತ್ಯವಿಲ್ಲದ ಕಾರಣ ಒಂದು ವಾರದಲ್ಲೇ ಹಣ್ಣುಗಳು(Fruits), ತರಕಾರಿಗಳು(Vegetables), ಸಕ್ಕರೆ(Sugar), ಧಾನ್ಯಗಳು(Pulses) ಹಾಗೂ ಮಾಂಸವನ್ನು(Meat) ಸಾಗಾಟ ಮಾಡಬಹುದಾಗಿದೆ. ಹೀಗಾಗಿ ಕೊರೋನಾದ ಬಳಿಕ ಭಾರತ ಅರಬ್ ರಾಷ್ಟ್ರಗಳಿಗೆ ರಫ್ತಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳೋ ಮೂಲಕ ಬ್ರೆಜಿಲ್ ಅನ್ನು ಹಿಂದಿಕ್ಕಿದೆ.

Repo Rate:ಸತತ 9ನೇ ಬಾರಿ ರೆಪೋ, ರಿವರ್ಸ್ ರೆಪೋ ದರ ಬದಲಾಯಿಸದ RBI

ಅರಬ್ ರಾಷ್ಟ್ರಗಳಿಗೆ ಬ್ರೆಜಿಲ್ 8 ಬಿಲಿಯನ್ ಡಾಲರ್ ಗೂ ಅಧಿಕ ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಆದ್ರೆ ಕಳೆದ ವರ್ಷ ಈ ಮೌಲ್ಯದಲ್ಲಿ ಕೇವಲ ಶೇ.1.4ರಷ್ಟು ಏರಿಕೆಯಾಗಿದೆ. ಈ ವರ್ಷ ಜನವರಿ ಹಾಗೂ ಅಕ್ಟೋಬರ್ ನಡುವೆ 6.7 ಬಿಲಿಯನ್ ಡಾಲರ್ ಮಾರಾಟ ನಡೆದಿದ್ದು, ಮೌಲ್ಯದಲ್ಲಿ ಶೇ.5.5ರಷ್ಟು ಏರಿಕೆಯಾಗಿದೆ. ಕೊರೋನಾ ಪ್ರಕರಣಗಳು ಕಡಿಮೆಯಾಗಿ ಆರ್ಥಿಕ ಚೇತರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಪ್ರಗತಿಯಾಗಿದೆ ಎಂದು ಅರಬ್-ಬ್ರೆಜಿಲ್ ವಾಣಿಜ್ಯ ಚೇಂಬರ್ ಮಾಹಿತಿ ನೀಡಿದೆ. ಚೀನಾ ಕೂಡ ಬ್ರೆಜಿಲ್ ನೊಂದಿಗೆ ಆಹಾರ ಉತ್ಪನ್ನ ಖರೀದಿಗೆ ಮುಂದಾಗಿದ್ದು ಕೂಡ ಅರಬ್ ರಾಷ್ಟ್ರಗಳಿಗೆ ಪೂರೈಕೆ ಕಡಿಮೆಯಾಗಲು ಕಾರಣವಾಯ್ತು. 
 ಇದ್ರಿಂದ ಅರಬ್ ರಾಷ್ಟ್ರಗಳು ಆಹಾರ ಉತ್ಪನ್ನಗಳಿಗೆ ಬೇರೆ ದೇಶಗಳನ್ನು ಹೆಚ್ಚು ನೆಚ್ಚಿಕೊಳ್ಳಲು ಆರಂಭಿಸಿದವು. ಸೌದಿ ಅರೇಬಿಯಾ ಈಗಲೂ ಕೂಡ ನಮ್ಮ ದೊಡ್ಡ ಖರೀದಿದಾರರೇ ಎಂದು ಬ್ರೆಜಿಲ್ ಹೇಳಿದೆ. ಭಾರತದ ಪಾಲಿಗೆ ಇದು ಮಹತ್ವದ ಘಟ್ಟವಾಗಿದ್ದು, ಮುಂದಿನ ದಿನಗಳಲ್ಲಿ ಅರಬ್ ರಾಷ್ಟ್ರಗಳೊಂದಿಗೆ ಇನ್ನಷ್ಟು ವ್ಯವಹಾರ ಕುದುರಿಸಲು ಉತ್ತಮ ಅವಕಾಶವನ್ನು ಸೃಷ್ಟಿಸಿದೆ ಎಂದೇ ಹೇಳಬಹುದು. 
 

Follow Us:
Download App:
  • android
  • ios