Asianet Suvarna News Asianet Suvarna News

RBI ಗವರ್ನರ್ ಶಕ್ತಿಕಾಂತ್‌ ದಾಸ್‌ಗೆ ಕೊರೋನಾ!

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್‌ ದಾಸ್‌ಗೆ ಕೊರೋನಾ| ಟ್ವೀಟ್ ಮಾಡಿ ಮಾಹಿತಿ ನೀಡಿದ ಗವರ್ನರ್| ಆರ್‌ಬಿಐ ಕೆಲಸ ಕಾರ್ಯಗಳು ಎಂದಿನಂತೆ ನಡೆಯಲಿವೆ ಎಂದ ಆರ್‌ಬಿಐ ಗವರ್ನರ್

RBI Governor Shaktikanta Das Tests Positive For Coronavirus pod
Author
Bangalore, First Published Oct 26, 2020, 7:18 AM IST

ನವದೆಹಲಿ(ಅ.26): ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್‌ ದಾಸ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಭಾನುವಾರ ಈ ಸಂಬಂಧ ಟ್ವೀಟ್ ಮಾಡುವ ಮೂಲಕ ಖುದ್ದು ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಟ್ವೀಟ್ ಮಾಡಿರುವ ಶಕ್ತಿಕಾಂತ್ ದಾಸ್ 'ನನ್ನ ಕೊರೋನಾ ವರದಿ ಪಾಸಿಟಿವ್ ಬಂದಿದೆ. ಹೀಗಿದ್ದರೂ ಯಾವುದೇ ಕೊರೋನಾ ಲಕ್ಷಣಗಳು ಕಂಡು ಬಂದಿಲ್ಲ. ನಾನು ಸಂಪೂರ್ಣವಾಗಿ ಆರೋಗ್ಯವಂತನಾಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರೆಲ್ಲರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಐಸೋಲೇಟ್ ಆಗಿ ನನ್ನ ಕೆಲಸ ಕಾರ್ಯ ಮುಂದುವರೆಸುತ್ತೇನೆ. ಆರ್‌ಬಿಐನಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯಲಿವೆ. ನಾನು ಎಲ್ಲಾ ಸಹೋದ್ಯೋಗಿಗಳ ಸಂಪರ್ಕದಲ್ಲಿದ್ದೇನೆ' ಎಂದಿದ್ದಾಋಎ.

ದೇಶದಲ್ಲಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಈ ಪ್ರಮಾಣ ಶೇ. 90ರಷ್ಟಾಗಿದೆ. ಈ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಇಲಾಖೆ ಭಾನುವಾರ 62,077 ಮಂದಿ ಈ ಮಹಾಮಾರಿಯಿಂದ ಗುಣಮುಖರಾಗಿದ್ದಾರೆಂದು ತಿಳಿಸಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳಿಗಿಂತಕೊರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.

Follow Us:
Download App:
  • android
  • ios