Tokenization Deadline:ಟೋಕನೈಸೇಷನ್ ಗಡುವು ಮತ್ತೆ ವಿಸ್ತರಣೆ; ಸೆ.30ರ ತನಕ ಕಾಲಾವಕಾಶ

*ಈ ಹಿಂದೆ ಕಾರ್ಡ್ ಟೋಕನೈಸೇಷನ್ ಗೆ ಜೂ.30ರ ಗಡುವು
*ಟೋಕನೈಸೇಷನ್ ಅನುಷ್ಠಾನಕ್ಕೆ ಸಂಬಂಧಿಸಿ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಮುಂದೂಡಿಕೆ
*ಟೋಕನೈಸೇಷನ್ ಗಡುವು ವಿಸ್ತರಿಸುತ್ತಿರೋದು ಇದು ಎರಡನೇ ಬಾರಿ
 

RBI extends card tokenization deadline by three months

ನವದೆಹಲಿ (ಜೂ.29): ಡೆಬಿಟ್ (Debit) ಹಾಗೂ  ಕ್ರೆಡಿಟ್ ಕಾರ್ಡ್ (Credit card) ಟೋಕನೈಸೇಷನ್  (tokenization) ಅಂತಿಮ ಗಡುವನ್ನು (Deadline) ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ 3 ತಿಂಗಳುಗಳ ಕಾಲ ಮುಂದೂಡಿದೆ. ಈ ಹಿಂದೆ ಕಾರ್ಡ್ ಟೋಕನೈಸೇಷನ್  ವ್ಯವಸ್ಥೆ ಅನುಷ್ಠಾನಕ್ಕೆ ಆರ್ ಬಿಐ (RBI) ಜೂನ್  30ರ ಗಡುವು ನೀಡಿತ್ತು. ಈಗ ಈ ಗಡುವನ್ನು (Deadline) ಸೆಪ್ಟೆಂಬರ್  30ರ ತನಕ ವಿಸ್ತರಿಸಿದೆ. 

ಕಾರ್ಡ್ ಟೋಕನೈಸೇಷನ್  ವ್ಯವಸ್ಥೆ ಅನುಷ್ಠಾನಕ್ಕೆ ಎಲ್ಲ  ಆನ್ ಲೈನ್ ವರ್ತಕರು ಹಾಗೂ ಇ-ಪಾವತಿ ಅಪ್ಲಿಕೇಷನ್ ಗಳು ಕಾರ್ಡ್ ಆನ್ ಫೈಲ್ (CoF) ಮಾಹಿತಿ ಅಳಿಸಿ ಹಾಕಿ ಅದರ ಬದಲು ಟೋಕನ್ ಗಳನ್ನು ಒದಗಿಸಬೇಕು. ಈ ವ್ಯವಸ್ಥೆ ಅನುಷ್ಠಾನಕ್ಕೆ ಸಂಬಂಧಿಸಿ ಅತಿಥಿ ( guest) ಚೆಕ್ ಔಟ್ (checkout) ವ್ಯವಹಾರಗಳಲ್ಲಿ ಕೆಲವು ಸಮಸ್ಯೆಗಳಿರೋದನ್ನು ಕೈಗಾರಿಕಾ ಪಾಲುದಾರರು ಆರ್ ಬಿಐ (RBI) ಗಮನಕ್ಕೆ ತಂದ ಬಳಿಕ  ಈ ಗಡುವನ್ನು ವಿಸ್ತರಿಸಲಾಗಿದೆ. ಈ ರೀತಿ ಟೋಕನೈಸೇಷನ್   (tokenization) ವ್ಯವಸ್ಥೆ ಅನುಷ್ಠಾನದ ಗಡುವು ವಿಸ್ತರಿಸುತ್ತಿರೋದು ಇದು ಎರಡನೇ ಬಾರಿ. ಈ ಹಿಂದೆ ಆರ್ ಬಿಐ 2021ರ ಡಿಸೆಂಬರ್ 31ರ ತನಕ ಗಡುವು ನೀಡಿತ್ತು. ಆದ್ರೆ,  ಆನ್ ಲೈನ್ ವರ್ತಕರು ಟೋಕನೈಸೇಷನ್ ಗಡುವು ವಿಸ್ತರಿಸುವಂತೆ  ಆರ್ ಬಿಐಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಗಡುವನ್ನು ಆರು ತಿಂಗಳ ಕಾಲ ಅಂದ್ರೆ ಜೂ.30ಕ್ಕೆ ವಿಸ್ತರಿಸಲಾಗಿತ್ತು. 

GST On Food Items:ಮೊಸರು, ಮೀನು, ಮಾಂಸ, ಪನ್ನೀರು ಇನ್ಮುಂದೆ ದುಬಾರಿ; ಪ್ರೀಪ್ಯಾಕ್ ಆಹಾರ ಪದಾರ್ಥಗಳಿಗೂ ಶೇ.5ರಷ್ಟು ಜಿಎಸ್ ಟಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ತಮ್ಮ ಸ್ವಂತ ಸುರಕ್ಷತೆಗಾಗಿ ಕಾರ್ಡ್ ದಾರರು (Cardholders) ತಮ್ಮ ಕಾರ್ಡ್ ಗಳನ್ನು ಟೋಕನೈಸ್ ಮಾಡುವ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದೆ.  ಈ ತನಕ ಸುಮಾರು 19.5 ಕೋಟಿ ಟೋಕನ್ ಗಳನ್ನು (Tokens) ಸೃಷ್ಟಿಸಲಾಗಿದೆ. ಇನ್ನು ಟೋಕನ್ ಸೃಷ್ಟಿಸಲು ಇಷ್ಟಪಡದವರು ಕಾರ್ಡ್ ಮಾಹಿತಿಗಳನ್ನು ವಹಿವಾಟಿನ ಸಮಯದಲ್ಲಿ ದಾಖಲಿಸುವ ಮೂಲಕ ವಹಿವಾಟು ನಡೆಸಬಹುದು. ಟೋಕನ್ ಗಳ ಸೃಷ್ಟಿ ಹಾಗೂ ಅವುಗಳನ್ನು ಬಳಸಿ ವಹಿವಾಟು ನಡೆಸೋದಕ್ಕೆ ಸಂಬಂಧಿಸಿ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಆರ್ ಬಿಐ ತಿಳಿಸಿದೆ. 

ಈ ತನಕ ಕಾರ್ಡ್ ಮಾಹಿತಿ ಸಂಗ್ರಹ
ಡೆಬಿಟ್ (Debit) ಅಥವಾ ಕ್ರೆಡಿಟ್ ಕಾರ್ಡ್ (Credit card) ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ತನಕ ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇದ್ರಿಂದ ತಕ್ಷಣವೇ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿತ್ತು. ಇದು ವರ್ತಕ ಹಾಗೂ ಗ್ರಾಹಕ ಇಬ್ಬರಿಗೂ ಸಮಯ ಉಳಿತಾಯ ಮಾಡುತ್ತಿತ್ತು. ಆದ್ರೆ  ಟೋಕನೈಸೇಷನ್ ಜಾರಿಗೆ ಬಂದ ಬಳಿಕ ಈ ವ್ಯವಸ್ಥೆ ಇರೋದಿಲ್ಲ.

ರಿಲಯನ್ಸ್ ರಿಟೇಲ್ ಕಂಪನಿಗೆ ಇಶಾ ಅಂಬಾನಿ ಚೇರ್ಮನ್?

ಟೋಕನೈಸೇಷನ್ ಅಂದ್ರೇನು ?
ಕ್ರೆಡಿಟ್ (Credit) ಅಥವಾ ಡೆಬಿಟ್ (Debit) ಕಾರ್ಡ್ ಮಾಹಿತಿಗಳನ್ನು ಟೋಕನ್ (Token) ಎಂಬ ಪರ್ಯಾಯ ಕೋಡ್ ಗೆ ಬದಲಾಯಿಸೋ ಪ್ರಕ್ರಿಯೆಯನ್ನು ಟೋಕನೈಸೇಷನ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಡ್ ಮಾಹಿತಿಗಳನ್ನು 'ಟೋಕನ್' ಎಂಬ ವಿಶಿಷ್ಟ ಪರ್ಯಾಯ ಕೋಡ್ ಗೆ ಬದಲಾಯಿಸಲಾಗುತ್ತದೆ. ಪ್ರತಿ ಕಾರ್ಡ್, ಸಾಧನ ಹಾಗೂ ಟೋಕನ್ ಮನವಿದಾರರನ್ನು ಪರಿಗಣಿಸಿ  ಹೊಸ ಟೋಕನ್ ನೀಡಲಾಗುತ್ತದೆ. ಈ ಟೋಕನ್ ವ್ಯವಸ್ಥೆಯಿಂದಾಗಿ ಗ್ರಾಹಕರ ಕಾರ್ಡ್ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ವ್ಯಾಪಾರಿಗೆ ತಿಳಿಯೋದಿಲ್ಲ.  

Latest Videos
Follow Us:
Download App:
  • android
  • ios