ಇದು ಚಮತ್ಕಾರ: RTGS, NEFT ಶುಲ್ಕ ಕೈಬಿಡಲು ನಿರ್ಧಾರ!

ದೇಶದ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದ RBI|ಪಾಲಿಸಿ ರೆಪೋ ದರ 25 ಬೇಸಿಸ್ ಪಾಯಿಂಟ್ ಕಡಿತ| RBIನ ಈ ಕ್ರಮದಿಂದಾಗಿ ಬ್ಯಾಂಕ್ ಸಾಲಗಳು ಮತ್ತಷ್ಟು ಅಗ್ಗ| ಆರ್ಥಿಕ ಬೆಳವಣಿಗೆಗೆ ಪೂರಕವಾಗಿ RBI ಮಹತ್ವದ ನಿರ್ಧಾರ| RTGS, NEFT ಶುಲ್ಕ ಕೈಬಿಡಲು ನಿರ್ಧಾರ| ಎಟಿಎಂ ಶುಲ್ಕಗಳ ಕಡಿತಕ್ಕೆ ಸಮಿತಿ ರಚನೆ| ಜಿಡಿಪಿ ಬೆಳವಣಿಗೆ ಕುಂಠಿತ ಸಾಧ್ಯತೆ ಎಂದ RBI|

RBI Cuts Rate To Boost Growth

ಮುಂಬೈ(ಜೂ.06): ಮೋದಿ 2.0 ಸರ್ಕಾರದ ಆರಂಭದ ಅವಧಿಯಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ದೇಶಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದೆ.

ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿರುವ RBI, ಶೇ. 5.75ಕ್ಕೆ ಇಳಿಸಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. ಮುಂಬೈನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ RBI ಗವರ್ನರ್ ಶಕ್ತಿಕಾಂತ್ ದಾಸ್, ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

2019ರ ಸಾಲಿನಲ್ಲಿ ಸತತ ಮೂರನೇ ಬಾರಿ ರೆಪೋ ದರ ಕಡಿತಗೊಳಿಸಿರುವ RBI, ಈ ಹಿಂದೆ ಶೇ. 6ರಷ್ಟಿದ್ದ ರೆಪೋ ದರವನ್ನು ಶೇ 5.75 ಕ್ಕೆ ಇಳಿಸಿದೆ. ಈ ಮೂಲಕ ಕಳೆದ 9 ವರ್ಷದಲ್ಲೇ ಕನಿಷ್ಠ ರೆಪೋ ದರವನ್ನು RBI ಮುಂದಿಟ್ಟಿದೆ.

ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ RBI ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಿವರ್ಸ್ ರೆಪೋ ದರ ಮತ್ತು ಬ್ಯಾಂಕ್ ದರ ಕ್ರಮವಾಗಿ 5.50 ಮತ್ತು 6.0 ಇರಲಿದೆ.

RBIನ ಈ ಕ್ರಮದಿಂದಾಗಿ ಬ್ಯಾಂಕ್ ಸಾಲಗಳು ಮತ್ತಷ್ಟು ಅಗ್ಗವಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಗೃಹಸಾಲದ ಮೇಲಿನ ಬಡ್ಡಿದರ ಶೇ.0.3ರಷ್ಟು ಕಡಿತಗೊಳ್ಳಲಿದೆ.

ATM ಸೇವಾ ಶುಲ್ಕ ಕಡಿತಕ್ಕೆ ಸಮಿತಿ:

ಇನ್ನು ಎಟಿಎಂ ಶುಲ್ಕಗಳ ಕುರಿತು ಸಿಇಒ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(ಐಬಿಎ) ಅಧ್ಯಕ್ಷತೆಯಡಿಯಲ್ಲಿ ಎಲ್ಲ ಪಾಲುದಾರರನ್ನು ಒಳಗೊಂಡ ಸಮಿತಿ ಸ್ಥಾಪಿಸಲು RBI ತೀರ್ಮಾನಿಸಿದೆ.

RTGS ಹಾಗೂ NEFT ವಹಿವಾಟುಗಳ ಮೇಲೆ ವಿಧಿಸಲಾಗುವ ಶುಲ್ಕಗಳನ್ನು ಕೈಬಿಡಲು RBI ನಿರ್ಧರಿಸಿದೆ ಎನ್ನಲಾಗಿದೆ. 

GDP ಬೆಳವಣಿಗೆ:

ಅದರಂತೆ ಜಿಡಿಪಿ ಬೆಳವಣಿಗೆ ಅಂದಾಜನ್ನು ಈ ಹಿಂದಿನ ಶೇ. 7.2ರಿಂದ ಶೇ. 7ಕ್ಕೆ ಕಡಿತ ಮಾಡಿರುವ RBI, ಹಣದುಬ್ಬರ ಪ್ರಮಾಣ 2019-20 ರ ಮೊದಲಾರ್ಧದಲ್ಲಿ 3.0% -3.1% ಮತ್ತು ದ್ವಿತೀಯಾರ್ಧದಲ್ಲಿ 3.4% -3.7% ರಷ್ಟು ಇರಲಿದೆ ಎಂದು ಅಂದಾಜಿಸಿದೆ.

Latest Videos
Follow Us:
Download App:
  • android
  • ios