ನವದೆಹಲಿ(ಮಾ. 05) ಒಂದು ಕಡೆ ಬ್ಯಾಂಕ್‌ ಗಳ ವಿಲೀನ ಪರ್ವ ನಡೆದಿದ್ದರೆ ಇನ್ನೊಂದು ಕಡೆ ದೊಡ್ಡ ದೊಡ್ಡ ಬ್ಯಾಂಕ್ ಗಳು ಆರ್ಥಿಕ ಹೊಡೆತಕ್ಕೆ ಸಿಲುಕುತ್ತಿವೆ. ಗುರುವಾರ ರಾತ್ರಿ ಅಂಥದ್ದೊಂದು ಶಾಕ್ ಸಿಕ್ಕಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ರಾತ್ರಿ ತೆಗೆದುಕೊಂಡ ನಿರ್ಧಾರ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಎಂದೇ ಗುರುತಿಸಿಕೊಂಡಿದ್ದ ಯೆಸ್ ಬ್ಯಾಂಕ್ ಮತ್ತು ಅದರ ಗ್ರಾಹಕರನ್ನು ಆತಂಕಕ್ಕೆ ದೂಡಿದೆ.

ಬ್ಯಾಂಕ್‌ನ ಆಡಳಿತವನ್ನು ಕೈಗೆ ತೆಗೆದುಕೊಂಡಿರುವ ‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ’ ಹಣ ವಿತ್‌ ಡ್ರಾ ಮೇಲೆ ನಿರ್ಬಂಧ ಹೇರಿದೆ.  ಯೆಸ್ ಬ್ಯಾಂಕ್ ಗ್ರಾಹಕರು ಆನ್ ಲೈನ್ ವಹಿವಾಟಿಗೆ ಮುಗಿಬಿದ್ದಿದ್ದು ಸೈಟ್ ಓಪನ್ ಆಗದೇ ಪರಿತಪಿಸುತ್ತಿದ್ದಾರೆ.

'ನಿಷೇಧದ ಆದೇಶ' (ಆರ್ಡರ್‌ ಆಫ್‌ ಮೊರಟೋರಿಯಂ) ಹೊರಡಿಸಿರುವ ಆರ್‌ಬಿಐ ತೊಂದರೆಗೆ ಒಳಗಾಗಿರುವ ಖಾಸಗಿ ಬ್ಯಾಂಕಿಂಗ್‌ ಸಂಸ್ಥೆ ಯೆಸ್ ಬ್ಯಾಂಕ್‌ನ ಎಲ್ಲಾ ಕಾರ್ಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದೆ.

ಕರ್ನಾಟಕ ಬಜೆಟ್‌ ನಲ್ಲಿ ನಿಮ್ಮ ಜಿಲ್ಲೆಗೆ ಸಿಕ್ಕಿದ್ದೇನು?

ಇನ್ನೊಂದು ಆದೇಶ ಹೊರಡಿಸಿ  ಬ್ಯಾಂಕ್ ಆಡಳಿತ ಮಂಡಳಿಯನ್ನು 30 ದಿನಗಳ ಕಾಲ ಸೂಪರ್‌ಸೀಡ್‌ ಮಾಡಿರುವುದಾಗಿ ಹೇಳಿದೆ. ಬ್ಯಾಂಕಿನ ಆರ್ಥಿಕ ಸ್ಥಿತಿ ಗಂಭೀರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

 ಯೆಸ್ ಬ್ಯಾಂಕಿನಲ್ಲಿ ಶೇರನ್ನು ಖರೀದಿಸಲು ದೇಶದ ಅತಿದೊಡ್ಡ ಬ್ಯಾಂಕ್‌ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಸರಕಾರ ಅನುಮೋದನೆ ನೀಡಿದೆ ಎಂಬ ಸುದ್ದಿಗಳು ಹರಿದಾಡಿದ್ದು ಮಾರುಕಟ್ಟೆಯಲ್ಲಿ ದೊಡ್ಡ ಸುದ್ದಿಯಾಗಿತ್ತು.

ಠೇವಣಿಗಳ ಮೇಲೆ ಹಣ ವಿತ್‌ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಿದೆ. 2020ರ ಏಪ್ರಿಲ್‌ 3ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.

ಗ್ರಾಹಕರು ಹಣ ವರ್ಗಾವಣೆ ಮಾಡಲು, ಹಣ ತೆಗೆಯಲು ಆನ್ ಲೈನ್ ಗೆ ಮುಗಿಬಿದ್ದಿದ್ದಾರೆ. ಆದರೆ ಸದ್ಯಕ್ಕೆ ಯೆಸ್ ಬ್ಯಾಂಕ್ ಸೈಟ್ ಓಪನ್ ಆಗದೆ ಹಿಡಿಶಾಪ ಹಾಕಿಕೊಳ್ಳುತ್ತ ನಾಳೆ ಏನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ