Asianet Suvarna News Asianet Suvarna News

ಆರ್‌ಬಿಐಗೆ ಎಸ್‌ಬಿಐ ಸಲಹೆ: ಈಗ್ಲಾದ್ರೂ ಕೇಳು ಪ್ರಭುವೇ!

ರೂಪಾಯಿ ಮೌಲ್ಯ ಕುಸಿತ ತಡೆಯಲು ಮನವಿ! ಎಸ್‌ಬಿಐ ವರದಿಯಲ್ಲಿ ಆರ್‌ಬಿಐಗೆ ಮನವಿ! ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ! ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ ಜವಾಬ್ದಾರಿ! ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆ
 

RBI can sell USD 25 billion more to arrest rupee fall
Author
Bengaluru, First Published Sep 19, 2018, 2:12 PM IST

ಮುಂಬೈ(ಸೆ.19): ರೂಪಾಯಿ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಾಟ್ ಮಾರ್ಕೆಟ್(ತುರ್ತು ಒಪ್ಪಂದ ಮತ್ತು ತುರ್ತು ವಹಿವಾಟು) ಮತ್ತು ಫಾರ್ವರ್ಡ್ ಮಾರ್ಕೆಟ್( ತುರ್ತು ಒಪ್ಪಂದ ಮತ್ತು ಭವಿಷ್ಯದಲ್ಲಿ ಮಾರಾಟ) ನಲ್ಲಿ ಮಧ್ಯೆ ಪ್ರವೇಶಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಕೊರಾಪ್ ವರದಿ ತಿಳಿಸಿದೆ.

ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ನೀಡಿರುವ ದರದಲ್ಲಿ ಮಾರಾಟ ಮಾಡುವುದು ಅಥವಾ ಖರೀದಿಸಬಹುದಾಗಿದೆ.

ಎಕೊರಾಪ್ ವರದಿಯ ಪ್ರಕಾರ, ಜೂನ್ 2008ರಿಂದ ಮೇ 2009ರವರೆಗೆ ಭಾರತೀಯ ರೂಪಾಯಿ ಬೆಲೆ ಶೇ. 13ರಷ್ಟು ಇಳಿಕೆಯಾದ ಸಮಯದಲ್ಲಿ, ವಿದೇಶಿ ವಿನಿಮಯ ಮೀಸಲು 312 ಶತಕೋಟಿ ಡಾಲರ್‌ನಷ್ಟು ಇದ್ದರೂ ಕೂಡ ಆರ್‌ಬಿಐ 43 ಶತಕೋಟಿ ಡಾಲರ್‌ಗೆ ಮಾರಾಟ ಮಾಡಿತ್ತು ಎಂದು ತಿಳಿಸಿದೆ.

1990ರ ದಶಕದಲ್ಲಿ ಕೂಡ ಒಟ್ಟು ವಿದೇಶಿ ವಿನಿಮಯ ಮೀಸಲು 40 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದ್ದಾಗ, ವಿದೇಶಿ ವಿನಿಮಯ ಮಾರುಕಟ್ಟೆಗೆ ಆರ್‌ಬಿಐ ಮಧ್ಯ ಪ್ರವೇಶಿಸಿ ರೂಪಾಯಿ ಕುಸಿತವನ್ನು ತಡೆಗಟ್ಟಲು ಒಟ್ಟು ವಿದೇಶಿ ವಿನಿಮಯವನ್ನು ಶೇ. 8ರಿಂದ 9ರಷ್ಟು ಮಾರಾಟ ಮಾಡಿತ್ತು ಎಂಬುದನ್ನು ವರದಿ ನೆನಪಿಸಿದೆ.

ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯನ್ನು ನೋಡುತ್ತಿದ್ದರೆ, ಆರ್‌ಬಿಐ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ 25 ಶತಕೋಟಿ ಡಾಲರ್‌ನ್ನು ಮಾರಾಟ ಮಾಡಬಹುದಾಗಿದೆ ಎಂದು ಎಸ್‌ಬಿಐ ವರದಿ ತಿಳಿಸಿದೆ.

ಡಾಲರ್ ಎದುರು ರೂಪಾಯಿ ಬೆಲೆ ಸ್ಥಿರವಾಗಿ ಉಳಿಯಲು ಆರ್‌ಬಿಐ ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ.

Follow Us:
Download App:
  • android
  • ios