ಯುಪಿಐ ಬಳಸಿ ಕ್ಯಾಶ್ ಡೆಫಾಸಿಟ್ ಸೌಲಭ್ಯ ಘೋಷಿಸಿದ ಆರ್ ಬಿಐ; ಇದರ ಬಳಕೆ ಹೇಗೆ? ಇಲ್ಲಿದೆ ಮಾಹಿತಿ

ಸಿಡಿಎಂ ಮೂಲಕ ಎಟಿಎಂ ಕಾರ್ಡ್ ಬಳಸಿ ಬ್ಯಾಂಕ್ ಖಾತೆಗೆ ಹಣ ಡೆಫಾಸಿಟ್ ಮಾಡುವ ಸೌಲಭ್ಯ ಈಗ ಲಭ್ಯವಿದೆ. ಆದರೆ, ಇನ್ಮುಂದೆ ಎಟಿಎಂ ಕಾರ್ಡ್ ಅಗತ್ಯವಿಲ್ಲದೆ ಯುಪಿಐ ಬಳಸಿ ಕ್ಯಾಶ್ ಡೆಫಾಸಿಟ್ ಮಾಡುವ ಹೊಸ ವ್ಯವಸ್ಥೆಯನ್ನು ಆರ್ ಬಿಐ ಘೋಷಿಸಿದೆ. 
 

RBI Announces Cash Deposit Facility Via UPI No Need Of ATM Card Now Check Details anu

ಮುಂಬೈ (ಏ.5): ಎಟಿಎಂ ಬಳಸಿ ಹಣ ವಿತ್ ಡ್ರಾ ಮಾಡೋದರ ಜೊತೆಗೆ ನಗದು ಠೇವಣಿಯಿಡುವ ಸೌಲಭ್ಯ ಕೂಡ ಲಭ್ಯವಿದೆ. ಅಂದರೆ ಕ್ಯಾಶ್ ಡೆಫಾಸಿಟ್ ಮಷಿನ್ ಗಳಲ್ಲಿ ಎಟಿಎಂ ಕಾರ್ಡ್ ಬಳಸಿ ನಗದು ಠೇವಣಿಯಿಡುವ ಸೌಲಭ್ಯ ಲಭ್ಯವಿದೆ. ಈಗ ಅದೇ ಮಾದರಿಯಲ್ಲಿ ಯುಪಿಐ ಬಳಸಿ ನಗದು ಠೇವಣಿಯಿಡುವ ಸೌಲಭ್ಯವನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು (ಏ.5) ಘೋಷಿಸಿದ್ದಾರೆ. ಅಂದರೆ ಕ್ಯಾಶ್ ಡೆಫಾಸಿಟ್ ಮಷಿನ್ ನಲ್ಲಿ (ಸಿಡಿಎಂ) ಎಟಿಎಂ ಬದಲು ಯುಪಿಐ ಬಳಸಿ ನಗದು ಠೇವಣಿಯಿಡಬಹುದು. 2024-25ನೇ ಹಣಕಾಸು ಸಾಲಿನ ಮೊದಲ ಹಣಕಾಸು ನೀತಿ ಸಮಿತಿ ಸಭೆಯ ವಿವರಗಳನ್ನು ನೀಡುವ ಸಂದರ್ಭದಲ್ಲಿ ಶಕ್ತಿಕಾಂತ ದಾಸ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಯುಪಿಐ ಬಳಸಿ ಹಣದ ವರ್ಗಾವಣೆ, ಬಿಲ್ ಪಾವತಿಗಳು, ವ್ಯಾಪಾರದ ವಹಿವಾಟುಗಳು ಹಾಗೂ ಇತರ ಡಿಜಿಟಲ್ ಪಾವತಿಗಳನ್ನು ನಾವೀಗ ಮಾಡುತ್ತಿದ್ದೇವೆ. ಈಗ ಸಿಡಿಎಂಗಳಲ್ಲಿ ಯುಪಿಐ ಬಳಸಿ ನಗದು ಠೇವಣಿ ಸೌಲಭ್ಯ ಕಲ್ಪಿಸಲಾಗಿದೆ.

ಅನುಕೂಲತೆ, ವೇಗ ಹಾಗೂ ಪರಸ್ಪರ ಕಾರ್ಯಸಾಧ್ಯತೆ ಕಾರಣದಿಂದ ಯುಪಿಐ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಅಲ್ಲದೆ, ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿತ್ತು. ಭವಿಷ್ಯದಲ್ಲಿ ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಆರ್ ಬಿಐ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. 

ಯುಪಿಐ ಪಿನ್ ಮರೆತು ಹೋಯ್ತಾ? ಡೋಂಟ್ ವರಿ, ಬದಲಾಯಿಸಲು ಇಲ್ಲಿದೆ ಸರಳ ವಿಧಾನ

ಈ ಸೌಲಭ್ಯದ ಪ್ರಯೋಜನಗಳು
ಈಗಾಗಲೇ ಬ್ಯಾಂಕುಗಳು ಹಾಗೂ ಕೆಲವು ಎಟಿಎಂ ಕೇಂದ್ರಗಳಲ್ಲಿ ಸಿಡಿಎಂಗಳನ್ನು ಅಳವಡಿಸಲಾಗಿದೆ. ಇವು ಬ್ಯಾಂಕ್ ಗಳಲ್ಲಿ ನಗದು ಠೇವಣಿ ಕಾರ್ಯವನ್ನು ಸರಳಗೊಳಿಸಿವೆ. ಈ ಹಿಂದಿನಂತೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಕಷ್ಟವನ್ನು ಇದು ತಪ್ಪಿಸಿದೆ. ಪ್ರಸ್ತುತ ಡೆಬಿಟ್ ಕಾರ್ಡ್ ಬಳಸಿ ಸಿಡಿಎಂಗಳಲ್ಲಿ ನಗದು ಠೇವಣಿಯಿಡಬಹುದು. 'ಯುಪಿಐ ಜನಪ್ರಿಯತೆ ಹಾಗೂ ಅದನ್ನು ಸ್ವೀಕರಿಸಿದ ರೀತಿಯನ್ನು ಗಮನಿಸಿ, ಹಾಗೆಯೇ ಎಟಿಎಂಗಳಲ್ಲಿ ಯುಪಿಐ ಮೂಲಕ ಕಾರ್ಡ್ ರಹಿತ ನಗದು ವಿತ್ ಡ್ರಾಗೆ ಅವಕಾಶ ಕಲ್ಪಿಸಿರೋದ್ರಿಂದ ಆಗಿರುವ ಪ್ರಯೋಜನಗಳನ್ನು ಗಮನಿಸಿ, ಈಗ ಯುಪಿಐ ಬಳಸಿ ನಗದು ಠೇವಣಿ ಸೌಲಭ್ಯ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಇದರ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುವುದು' ಎಂದು ಅವರು ತಿಳಿಸಿದರು.

ನಗದು ಠೇವಣಿ ಮಷಿನ್ ಗಳು
ನಗದು ಠೇವಣಿ ಮಷಿನ್ ಗಳು ಅಥವಾ ಸಿಡಿಎಂಗಳು ಎಟಿಎಂಗಳಾಗಿದ್ದು, ಅವು ನಿಮಗೆ ನಗದು ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲು ನೆರವು ನೀಡುತ್ತವೆ. 

ನೀವು ಪಾವತಿಗೆ ಪೇಟಿಎಂ UPI ಬಳಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಆರ್‌ಬಿಐ ಸಂದೇಶ!

ಯುಪಿಐ
ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ರಿಯಲ್ ಟೈಮ್ ಪಾವತಿ ವ್ಯವಸ್ಥೆಯಾಗಿದ್ದು, ಇದನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ನಿರ್ವಹಿಸುತ್ತದೆ. ಯುಪಿಐ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ. ನಗರ ಪ್ರದೇಶಗಳು ಮಾತ್ರವಲ್ಲ, ಹಳ್ಳಿಗಳಲ್ಲಿ ಕೂಡ ಯುಪಿಐ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಸೂಪರ್ ಮಾರ್ಕೆಟ್ ನಿಂದ ಹಿಡಿದು ಬೀದಿ ಬದಿ ವ್ಯಾಪಾರಿಗಳ ತನಕ ಎಲ್ಲರೂ ಯುಪಿಐ ಬಳಸುತ್ತಿದ್ದಾರೆ. 

ಯುಪಿಐ ನಗದನ್ನು ಇರಿಸಿಕೊಳ್ಳಬೇಕಾದ ಅಗತ್ಯವನ್ನು ತಪ್ಪಿಸಿದೆ. ಮೊಬೈಲ್ ಫೋನ್ ಕೈಯಲ್ಲಿದ್ರೆ ಸಾಕು ಪಾವತಿ ಮಾಡೋದು ಸುಲಭವಾಗಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಯುಪಿಐ ಪಾವತಿ ಮಾಡಬಹುದು. ಇದು ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಇಬ್ಬರಿಗೂ ಅನುಕೂಲ ಕಲ್ಪಿಸಿದೆ. ಇನ್ನು ಇನ್ನೊಬ್ಬರಿಗೆ ಈ ವ್ಯವಸ್ಥೆ ಮೂಲಕ ಹಣವನ್ನು ಕೂಡ ವರ್ಗಾವಣೆ ಮಾಡಬಹುದು. 

Latest Videos
Follow Us:
Download App:
  • android
  • ios